ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆಗೈದು ಬಳಿಕ ಆತ್ತೆಗೆ ಕರೆ ಮಾಡಿದ್ದ ಅಳಿಯ ಬಳಿಕ ತಾನೇ ಹೋಗಿ ಚಂದ್ರಲೇಔಟ್ ಠಾಣೆ ಪೊಲೀಸರಿಗೆ ಶರಣಾಗಿರುವ ಘಟನೆ ಮೂಡಲಪಾಳ್ಯದಲ್ಲಿ ಬುಧವಾರ ರಾತ್ರಿ ನಡೆದಿದೆ.
ಮೂಡಲಪಾಳ್ಯ ಸಮೀಪದ ಶಿವಾನಂದ ನಗರದ ಗೀತಾ (33) ಹತ್ಯೆಯಾದ ದುರ್ದೆÊವಿ. ಈ ಹತ್ಯೆ ಸಂಬAಧ ಮೃತಳ ಪತಿ ಶಂಕರ್ ಪೊಲೀಸರಿಗೆ ಶರಣಾಗಿದ್ದಾನೆ.
ಇಬ್ಬರಿಗೂ ಮದುವೆಯಾಗಿ 13 ವರ್ಷಗಳಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಹೊಸೂರಿನಲ್ಲಿ ನೆಲೆಸಿರುವ ಗೀತಾ ಅವರ ತಾಯಿ ರತ್ನಮ್ಮ ಅವರು ಬುಧವಾರ ಮಗಳನ್ನು ಭೇಟಿ ಮಾಡಿ ಸಂಜೆ ವಾಪಸಾಗಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಆರೋಪಿ ಶಂಕರ್ ದೂರವಾಣಿ ಮೂಲಕ ಅತ್ತೆಯನ್ನು ಸಂಪರ್ಕಿಸಿದ್ದು, ಗೀತಾಳನ್ನು ಕೊಂದಿರುವುದಾಗಿ ತಿಳಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
“ಆರೋಪಿಗಳು ಗೀತಾ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾನೆ. ಈ ಸಂಬAಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಗೀತಾ ಅವರಿಗೆ ವಿವಾಹೇತರ ಸಂಬAಧ ಹೊಂದಿರುವುದಾಗಿ ಶಂಕಿಸಿದ್ದ ಶಂಕರ್ ಆಗಾಗ್ಗೆ ಪತ್ನಿಯೊಂದಿಗೆ ಜಗಳವಾಡಿದ್ದಾರೆ. ಇದೇ ಹತ್ಯೆಗೆ ಕಾಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.