ಚಿತ್ರದುರ್ಗ:- ಇಂದು ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು ಅಭ್ಯರ್ಥಿಯ ಫಲಿತಾಂಶ ಕೇಳಿ ವ್ಯಕ್ತಿಯೊಬ್ಬರು ಹೃದಯಘಾತದಿಂದ ಮೃತಪಟ್ಟ ಘಟನೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.
ಹಿರಿಯೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ ಸುಧಾಕರ್ ಮತ್ತು ಬಿಜೆಪಿ ಅಭ್ಯರ್ಥಿ ಕೆ ಪೂರ್ಣಿಮಾ ನಡುವೆ ಪೈಪೋಟಿ ಶುರುವಾಗಿದ್ದು , ಕೈ ಅಭ್ಯರ್ಥಿ ಸುಧಾಕರ್ ಅವರು ಸುಮಾರು 5,000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರು.
ಬಿಜೆಪಿ ಅಭ್ಯರ್ಥಿ ಕೆ ಪೂರ್ಣಿಮಾ ಶ್ರೀನಿವಾಸ್ ಅವರು ಹಿನ್ನಡೆ ಸಾಧಿಸಿದ್ದನ್ನು ಕೇಳಿದ ಅಭಿಮಾನಿಯೊಬ್ಬರು ಹೃದಯಘಾತದಿಂದ ಮೃತಪಟ್ಟಿದ್ದಾರೆ. ಹಿರಿಯೂರು ತಾಲೂಕಿನ ಆಲಮರದಹಟ್ಟಿ ಗ್ರಾಮದ ಈರಣ್ಣ ಮೃತ ವ್ಯಕ್ತಿ ಎಂದು ಗುರಿಸಲಾಗಿದೆ.