ನಂಜನಗೂಡು:- ಕೇರಳದ ವೈನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ನೀರುಕಬಿನಿ ಜಲಾಶಯಕ್ಕೆ ಬರುತ್ತಿರುವುದರಿಂದ ಜಲಾಶಯತುಂಬಿ ಹೆಚ್ಚಿನ ನೀರನ್ನು ಕಪಿಲಾ ನದಿಗೆ ಬಿಟ್ಟಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಅರಿಯುತ್ತಿರುವುದರಿಂದ ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಕಪಿಲಾ ನದಿಯ ಸ್ಥಾನಘಟ್ಟಕ್ಕೆ ತೆರಳದಂತೆ ತಾಲೂಕು ಆಡಳಿತ ಆದೇಶದ ಮೇರೆಗೆ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ ಮೈಸೂರು ನಂಜನಗೂಡು ಮುಖ್ಯ ರಸ್ತೆಯ 100 ವರ್ಷಗಳ ಹಳೆಯ ದೇವರಾಜ ಅರಸು ಸೇತುವೆ ತುತ್ತ ತುದಿಯಲ್ಲಿ ಭಾರಿ ಪ್ರಮಾಣದ ಪ್ರವಾದ ನೀರು ಅರಿಯ ತೊಡಗಿದೆ ಈಗಾಗಲೇ ಕಬಿನಿ ನಾಲೆಯಿಂದ ಕಪಿಲ ನದಿಗೆ ಒಟ್ಟಾರೆಯಾಗಿ 36,000 ಕ್ಯೂ ಸಕ್ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗಿದೆ ನಂಜನಗೂಡು ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯ ನಂಜುಂಡೇಶ್ವರನ ದೇವಾಲಯದ ಸ್ಥಾನದ ಘಟ್ಟ 16 ಕಾಲು ಮಂಟಪ ಶೇಕಡ 90ರಷ್ಟು ಮುಳುಗಡೆಯಾಗಿದೆ ದೇವಾಲಯದ ಹಿಂಬದಿಯಲ್ಲಿರುವ ತಗ್ಗು ಪ್ರದೇಶಗಳಾದ ತೋಪಿನ ಬೀದಿ ಒಕ್ಕಲಗೇರಿ ಹಳ್ಳದ ಕೇರಿ ರಾಯರ ಮಠ ಸೇರಿದಂತೆ ಸಾಕಷ್ಟು ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗುವ ಆತಂಕ ಎದುರಾಗಿದೆ ನಂಜನಗೂಡಿನ ತಾಸಿಲ್ದಾರ್ ಶಿವಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ತಗ್ಗು ಪ್ರದೇಶದ ಜನ ವಸತಿ ಪ್ರದೇಶಕ್ಕೆ ತೆರಳಿ ಈಗಾಗಲೇ ಎಚ್ಚರಿಕೆಯ ಸಂದೇಶಗಳನ್ನು ನೀಡಿದ್ದಾರೆ ಇನ್ನು 3-4 ದಿನಗಳ ಕಾಲ ನಿರಂತರವಾಗಿ ಮಳೆ ಸುರಿಯುವ ಕಾರಣ ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ ಜನಜಾನುವಾರುಗಳ ರಕ್ಷಣೆಗಾಗಿ ಸ್ಥಳಾಂತರವಾಗಬೇಕು ಎಂಬ ಮಾಹಿತಿ ತಿಳಿಸಿದರು ಶಾಸಕ ದರ್ಶನ್ ದ್ರುವ ನಾರಾಯಣ್ ಅವರು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಬೊಕ್ಕಳ್ಳಿ ಹೆಜ್ಜೆಗೆ ಉಳ್ಳಹಳ್ಳಿ ಮಹಾದೇವ ತಾತ ಗದ್ದಿಗೆ ಸಂಗಮ ಇವು ಕಪಿಲಾ ನದಿ ಹಂಚಿನಲ್ಲಿರುವ ಪ್ರದೇಶಗಳಾಗಿವೆ, ಕೂಡಲೇ ಅಧಿಕಾರಿಗಳ ತಂಡ ಭೇಟಿ ನೀಡಿ ಸ್ಪಷ್ಟ ಮಾಹಿತಿ ಕಲೆಹಾಕಿ ಜನ ಜಾನುವಾರುಗಳ ರಕ್ಷಣೆಗೆ ಮುಂದಾಗುವಂತೆ ಅಧಿಕಾರಿಗಳಿಗೆ ತಾಕಿತ್ತು ಮಾಡಿದ್ದಾರೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಆತಂಕ ಸೃಷ್ಟಿ ಮಾಡಿದರೆ ಯಾವುದೇ ಜೀವ ಹಾನಿ ಸಂಭವಿಸದ ಹಾಗೆ ಸಂರಕ್ಷಿಸುವ ಸಲುವಾಗಿ ಗಂಜಿ ಕೇಂದ್ರ ತೆರೆಯಲಾಗುವುದು ಸಂಕಷ್ಟದಲ್ಲಿರುವ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ತಾಲೂಕು ಆಡಳಿತ ಸಿದ್ಧವಾಗಿದೆ ಎಂದು ತಹಸಿಲ್ದಾರ್ ಶಿವಕುಮಾರ್ ಕಾಸ್ನೂರ್ ತಿಳಿಸಿದರು ದೇವಾಲಯ ವತಿಯಿಂದ ಬೆಳಗ್ಗೆಯಿಂದ ಸಂಜೆವರೆಗೂ ಧ್ವನಿ ವರ್ಧಕದಿಂದ ಯಾರು ಕೂಡ ಕಪಿಲಾ ನದಿಯಲ್ಲಿ ಸ್ಥಾನ ಮಾಡದಂತೆ ಹಾಗೂ ಕಪಿಲಾ ನದಿಯ ಹತ್ತಿರ ಯಾರು ತೆರಳದಂತೆ ಧ್ವನಿವರ್ಧಕದ ಮೂಲಕ ಮಾಹಿತಿ ನೀಡುತ್ತಿದ್ದಾರೆ ಸ ಕಪಿಲಾ ನದಿಯ ಹತ್ತಿರ ಯಾರು ಹೋಗದಂತೆ ಬ್ಯಾರಿ ಕೆಟ್ ನಿರ್ಮಿಸಲಾಗಿದೆ ಸೆಕ್ಯೂರಿಟಿ ಗಾರ್ಡ್ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ