ಬೆಂಗಳೂರು: ಈಕೆ ಗಂಡ ಇಲ್ಲದ ಹೊತ್ತಲ್ಲಿ ಪರ ಪುರುಷನ ಸಹವಾಸ ಮಾಡಿದ್ಳು. ಆದ್ರೆ ಅವತ್ತು ಮಾತ್ರ ಕೆಲಸಕ್ಕೆ ಅಂತ ಹೋದ ಪತಿ ಮಧ್ಯಾಹ್ನವೇ ಮನೆ ಸೇರಿದ್ದ. ಮನೆಗೆ ಬಂದ ಗಂಡನ ಕಣ್ಣಿಗೆ ಕಂಡಿದ್ದು ಪತ್ನಿಯ ಪರಸಂಗದಾಟ. ಮುಂದೆ ನಡೆಯಬಾರದ ದುರಂತವೊಂದು ನಡೆದು ಹೋಗಿದೆ. ಪರ ಪುರುಷನ ಜೊತೆ ಪತ್ನಿಯ ಕಂಡಿದ್ದ ಪತಿರಾಯ ಹೆಣವಾಗಿ ಹೋಗಿದ್ದ. ಅಷ್ಟಕ್ಕೂ ಅವತ್ತು ನಡೆದಿದ್ದೇನು? ಗಂಡನ ಕೊಲೆಯಾಗಿದ್ದೇಗೆ? ಇಲ್ಲಿದೆ ನೋಡಿ ಪಾಪಿ ಪತ್ನಿಯ ಕರಾಳ ಕ್ರೈಮ್ ಕಹಾನಿ.
ಈಕೆ ಹೆಸರು ತೇಜಸ್ವಿನಿ ಅಂತ.. ಈ ತೇಜಸ್ವಿನಿ ಪತಿಯ ಹೆಸರು ಮಹೇಶ್. ಇಬ್ಬರು ಹಾಸನ ಮೂಲದವರು. ಒಂದೇ ಊರಿನವರು ಪ್ರೀತಿಸಿ ಮದುವೆಯಾಗಿದ್ರು. ಸಂಸಾರ ಸುಖಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಮಕ್ಕಳು. ಒಂದು ಗಂಡು ಒಂದು ಹೆಣ್ಣು. ಇಷ್ಟಿರುವಾಗ ಇನ್ನೇನು ಬೇಕು ಹೇಳಿ. ಮಹೇಶ ಆಟೋ ಓಡಿಸಿಕೊಂಡು ಹೇಗೋ ಸಂಸಾರ ನಿಭಾಯಿಸಿಕೊಂಡು ಹೋಗ್ತಿದ್ದ. ಅತ್ತ ತೇಜಸ್ವಿನಿ ಕೂಡ ಖಾಸಗಿ ಫೈನಾನ್ಸ್ ಒಂದ್ರಲ್ಲಿ ಕೆಲಸ ಮಾಡ್ತಿದ್ಳು. ಎಲ್ಲವೂ ಚೆನ್ನಾಗಿತ್ತು ಅನ್ನೋವಾಗ್ಲೇ ಕಳೆದ ಒಂದು ವರ್ಷದಿಂದ ತೇಜಸ್ವಿನಿ ಮತ್ತು ಮಹೇಶ್ ಮಧ್ಯೆ ಕಲಹ ಶುರುವಾಗಿದೆ. ಹೀಗೆ ಗಂಡ ಹೆಂಡತಿ ಜಗಳ ಅಂದಾಗ ಅಲ್ಲಿ ಲಾಭ ಮಾಡಿಕೊಳ್ಳೋದಕ್ಕೆ ಅಂತಾಲೇ ಕೆಲ ಕ್ರಿಮಿಗಳು ಇರ್ತಾವೆ. ಹೀಗೆ ತೇಜಸ್ವಿನಿಗೆ ಪರಿಚಯವಾಗಿದ್ದವನೇ ಈ ಗಜೇಂದ್ರ.
ಮಹೇಶ್ ಆಟೋ ಓಡಿಸಿಕೊಂಡು ಇದ್ದಿದ್ರೆ ಇತ್ತ ತೇಜಸ್ವಿನಿ ಕೂಡ ಕೆಲಸ ಮಾಡ್ತಿದ್ದಳು. ಖಾಸಗಿ ಫೈನಾನ್ಸ್ ಒಂದ್ರಲ್ಲಿ ಸಾಲ ವಸೂಲಾತಿ ವಿಭಾಗದಲ್ಲಿ ಕೆಲಸ ಮಾಡ್ತಿದ್ಳು. ಈ ಗಜೇಂದ್ರ ಕೂಡ ಇದೇ ಫೈನಾನ್ಸ್ನಲ್ಲಿ ಕೆಲಸ ಮಾಡ್ತಿದ್ದ. ಇತ್ತ ತೇಜಸ್ವಿನಿ ಗಂಡನ ಜೊತೆ ಕಲಹ ಮಾಡಿಕೊಂಡಿದ್ಳು. ಇಂಥಾ ಹೊತ್ತಲ್ಲಿ ಗಜೇಂದ್ರನ ಜೊತೆ ತೇಜಸ್ವಿನಿ ಸ್ನೇಹ ಬೆಳೆಸಿದ್ಳು. ಆ ಸ್ನೇಹ ಮುಂದೆ ಸಲುಗೆ ಪಡೆದುಕೊಂಡಿದೆ. ಕೊನೆಗೆ ತೇಜಸ್ವಿನಿ ಗಜೇಂದ್ರನ ಜೊತೆ ಓಡಾಡೋದು ಎಲ್ಲ ಮಾಡಿದ್ದಾಳೆ. ಈ ವಿಚಾರ ತೇಜಸ್ವಿನಿ ಪತಿ ಮಹೇಶ್ಗೂ ಗೊತ್ತಾಗಿದೆ. ಬಹುಶಃ ಮಹೇಶನ ಜಾಗದಲ್ಲಿ ಬೇರೆ ಯಾರಾದ್ರೂ ಇದ್ದಿದ್ರೆ ಈ ವಿಚಾರವನ್ನು ಅದು ಹೇಗೆ ಸ್ವೀಕರಿಸ್ತಿದ್ರೂ ಗೊತ್ತಿಲ್ಲ. ಯಾಕಂದ್ರೆ ತಾಳಿ ಕಟ್ಟಿದ್ದ ಹೆಂಡತಿ ಪರ ಪುರುಷನ ಸಹವಾಸ ಮಾಡ್ತಿದ್ದಾಳೆ ಅಂದ್ರೆ ಎಂತವರಿಗಾದ್ರೂ ಸಿಟ್ಟು ಬಂದೇ ಬರುತ್ತೆ. ಆ ಸಿಟ್ಟು ಇನ್ನಾವುದು ದುರಂತಕ್ಕೆ ಕಾರಣವೂ ಆಗಿಬಿಡುತ್ತೆ. ಆದ್ರೆ ಮಹೇಶ್ ಮಾತ್ರ ಸಿಟ್ಟಿನ ಬುದ್ಧಿಗೆ ಕೈ ಕೊಡದೇ ತಾಳ್ಮೆಯಿಂದ ಸಂಸಾರವನ್ನು ಸುಧಾರಿಸುವ ಕೆಲಸ ಮಾಡಿದ್ದ. ಮರ್ಯಾದೆ ಪ್ರಶ್ನೆ ಅಂತ ಮಹೇಶ್ ತನ್ನ ಪತ್ನಿಗೆ ಬುದ್ಧಿಮಾತು ಕೂಡ ಹೇಳಿದ್ದಾನೆ. ಗಜೇಂದ್ರನ ಸಹವಾಸ ಬಿಟ್ಟು ಸಂಸಾರ ಮಾಡ್ಕೊಂಡು ಹೋಗಮ್ಮ ಅಂತ ತಿಳಿ ಹೇಳಿದ್ದ. ಆದ್ರೆ ತೇಜಸ್ವಿನಿ ಮಾತ್ರ ತನ್ನ ಚಾಳಿ ಬಿಟ್ಟಿರಲಿಲ್ಲ.
ಗಂಡ ಬುದ್ಧಿ ಹೇಳಿದ್ರೂ ತೇಜಸ್ವಿನಿ ಮಾತ್ರ ತನ್ನ ಚಾಳಿ ಬಿಟ್ಟಿರಲಿಲ್ಲ. ಮತ್ತೆ ಗಜೇಂದ್ರನ ಸಹವಾಸ ಮಾಡಿದ್ಳು. ಅದ್ರಂತೆ ಕಳೆದ ಆಗಸ್ಟ್ 9 ರಂದು ಮಹೇಶ್ ಕೆಲಸಕ್ಕೆ ಅಂತ ಮನೆಯಿಂದ ಆಚೆ ಹೋಗಿದ್ದಾನೆ. ಈ ವೇಳೆ ತೇಜಸ್ವಿನಿ ಪ್ರಿಯಕರ ಗಜೇಂದ್ರನನ್ನ ಮತ್ತೆ ಮನೆಗೆ ಕರೆಸಿ ಪರಸಂಗದಾಟ ಶುರು ಹಚ್ಚಿಕೊಂಡಿದ್ಲು. ಆದ್ರೆ ಕೆಲಸಕ್ಕೆ ಅಂತ ಹೋಗಿದ್ದ ಮಹೇಶ್ ಅವತ್ತು ಮಧ್ಯಾಹ್ನವೇ ಮನೆಗೆ ಬಂದಿದ್ದ. ಮನೆಗೆ ಬಂದ ಮಹೇಶ್ ಕಣ್ಣಿಗೆ ಕಂಡಿದ್ದು, ತೇಜಸ್ವಿನಿ ಮತ್ತು ಗಜೇಂದ್ರನ ಸರಸ ಸಲ್ಲಾಪ. ಇದನ್ನ ನೋಡಿದ್ದೆ ತಡ ಮಹೇಶ್ ಕೋಪ ನೆತ್ತಿಗೇರಿತ್ತು. ಸಿಟ್ಟು ತಡಿಯಲಾರದೇ ತೇಜಸ್ವಿನಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಗಜೇಂದ್ರ ಮಹೇಶ್ನನ್ನ ಬಿಡಿಸಲು ಬಂದಾಗ ಅವನಿಗೂ ಥಳಿಸಿದ್ದಾನೆ. ಅಷ್ಟೆ ನೋಡಿ ಮುಂದೆ ನಡೆಯಬಾರದ ದುರಂತ ನಡೆದು ಹೋಗಿತ್ತು.
ಸಲ್ಲಾಪದಲ್ಲಿ ತೊಡಗಿದ್ದ ತೇಜಸ್ವಿನಿ ಮತ್ತು ಗಜೇಂದ್ರ ಮಹೇಶ್ನನ್ನ ಕಂಡು ಅಕ್ಷರಶಃ ಶಾಕ್ ಆಗಿದ್ರು. ಏನ್ ಮಾಡ್ಬೇಕು ಅನ್ನೋದೇ ಗೊತ್ತಾಗಿರಲಿಲ್ಲ. ಅಷ್ಟರಲ್ಲೇ ಮಹೇಶ್ ಇಬ್ಬರ ಮೇಲೆ ದಾಳಿ ಮಾಡಿಬಿಟ್ಟಿದ್ದ. ಇಬ್ಬರನ್ನ ಹೊಡೆಯೋದಕ್ಕೆ ಶುರು ಮಾಡಿದ್ದ. ಮಹೇಶ್ ತಮ್ಮನ್ನ ಉಳಿಸಲ್ಲ ಅಂತ ಅಂದುಕೊಂಡ ತೇಜಸ್ವಿನಿ ಮತ್ತು ಗಜೇಂದ್ರ ಮಹೇಶ್ ಜೀವ ತೆಗೆಯೋ ನಿರ್ಧಾರ ಮಾಡಿಬಿಟ್ಟಿದ್ರು. ಇಬ್ಬರು ಸೇರಿ ಮಹೇಶನ ಕುತ್ತಿಗೆ ಹಿಸುಕಿ ಉಸಿರು ನಿಲ್ಲಿಸಿಬಿಟ್ಟಿದ್ರು. ಕೊನೆಗೆ ಗಂಡನ ಜೀವ ತೆಗೆದ ತೇಜಸ್ವಿನಿ ಗಂಡ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದ ಅಂತ ಹೈಡ್ರಾಮಾ ಮಾಡಿಬಿಟ್ಟಿದ್ಳು. ಅದ್ಯವಾಗ ಪೊಲೀಸರು ಅನುಮಾನದಿಂದ ತೇಜಸ್ವಿನಿಯನ್ನ ವಿಚಾರಣೆ ನಡೆಸಿದ್ರು ಆಗ್ಲೇ ನೋಡಿ ಈ ಸತ್ಯ ಆಚೆ ಬಂದಿದ್ದು.
ದುರಂತ ಏನಂದ್ರೆ ಗಂಡ ಹೆಂಡತಿ ಗಲಾಟೆ ನಡೆದಾಗ ಅಕ್ಕ ಪಕ್ಕದ ಮನೆಯವರು ಬಂದು ಜಗಳ ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಆದ್ರೆ ಈ ತೇಜಸ್ವಿನಿ ಬಾಗಿಲು ತೆರೆದಿಲ್ಲವಂತೆ. ಅಷ್ಟೊತ್ತಿಗಾಗಲೇ ತೇಜಸ್ವಿನಿ ಮತ್ತು ಗಜೇಂದ್ರನನ್ನ ಹೊಡೆದು ನೆಲಕ್ಕುರುಳಿಸಿದ್ರು. ಗಲಾಟೆ ಶಬ್ಧ ಕೇಳಿ ಅಕ್ಕ ಪಕ್ಕದವರೆಲ್ಲ ಬಂದು ಜೋರು ಮಾಡಿದಾಗ ತೇಜಸ್ವಿನಿ ಬಾಗಿಲು ತೆರೆದಿದ್ದಾಳೆ. ಒಳಗೆ ಹೋಗಿ ನೋಡಿದ್ರೆ ಮಹೇಶ್ ಕುಸಿದು ಬಿದ್ದು ಬಿಟ್ಟಿದ್ದ. ಈ ವೇಳೆ ಮಹೇಶ್ ಇನ್ನೂ ಉಸಿರಾಡುತ್ತಾ ಇದ್ದ. ಹೀಗಾಗಿ ತಕ್ಷಣವೇ ಆಸ್ಪತ್ರೆಗೆ ಕರ್ಕೊಂಡು ಹೋಗುವಂತೆ ಅಕ್ಕ ಪಕ್ಕದ ಮನೆಯವರು ಹೇಳಿದ್ರೂ.. ಈ ತೇಜಸ್ವಿನಿ ಮಾತ್ರ ಉಡಾಫೆ ಮಾಡಿದ್ದಾಳೆ.
ಪರ ಪುರುಷನಿಗಾಗಿ ಪತ್ನಿ ಪತಿಯನ್ನೆ ಕೊಲೆ ಮಾಡಿದ್ದಾಳೆ. ಗಂಡನ ಜೀವ ತೆಗೆದ ತೇಜಸ್ವಿನಿ ಮತ್ತು ಮಹೇಶ್ ಇಬ್ಬರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದ್ರೀಗ ಅಪ್ಪ ಅಮ್ಮ ಇಬ್ಬರಿಂದಲೂ ದೂರವಾಗಿರುವ ಆ ಮಕ್ಕಳ ಭವಿಷ್ಯವೇನು ಅನ್ನೋದೆ ಯಕ್ಷ ಪ್ರಶ್ನೆ. ಅಪ್ಪ ಅಮ್ಮನಿಂದಲೇ ಹತ್ಯೆಯಾಗಿದ್ರೆ, ಅಪ್ಪನ ಕೊಂದ ಅಮ್ಮ ಜೈಲು ಸೇರಿದ್ದಾಳೆ. ಈಗ ಏನು ಅರಿಯದ ಪುಟ್ಟ ಕಂದಮ್ಮಗಳು ಅನಾಥವಾಗಿರೋದಂತು ಸುಳ್ಳಲ್ಲ.