ಮೈಸೂರು: ಪ್ರೊ.ಭಗವಾನ್ ಅವರ ಹೇಳಿಕೆ ಅವರ ವೈಯುಕ್ತಿಕ ಹೇಳಿಕೆಯಾಗಿದ್ದು ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಒಕ್ಕಲಿಗ ಸಮುದಾಯಕ್ಕೆ ನೋವಾಗಿದ್ದರೆ ಅದಕ್ಕೆ ವಿಷಾಧಿಸುತ್ತೇವೆಂದು ಮಹಿಷಾ ದಸರಾ ಉಪಸಮಿತಿ ತಿಳಿಸಿತು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಮಿತಿಯ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಕುವೆಂಪು ಅವರ ಕಾಲಘಟ್ಟದಲ್ಲಿ ದಾಖಲಾದ ಹೇಳಿಕೆಯನ್ನು ಈಗಿನ ಕಾಲಘಟ್ಟದಲ್ಲಿ ಹೇಳುವುದು ಸಮಂಜಸವಲ್ಲ. ಅದು ಅಂದಿನ ಕಾಲಘಟಕ್ಕೆ ಸರಿ ಹೋಗುತ್ತದೆ. ಕಾರ್ಯಕ್ರಮಕ್ಕೂ ಮೊದಲು ಸಹ ಯಾವುದೇ ಸಮುದಾಯದ ಬಗ್ಗೆ ತಿಳಿಸಿದ್ದೇವು. ಇದಾಗಿಯೂ ಅವರು ಮಾತನಾಡಿದ್ದು, ಅದು ಅವರ ವೈಯುಕ್ತಿಕ ಹೇಳಿಕೆಯಾಗಿದ್ದು, ಅದಕ್ಕೂ ಸಮಿತಿಗೂ ಯಾವುದೇ ಸಂಬಂಧವಿಲ್ಲವೆಂದರು.
ಮುಂದಿನ ದಿನಗಳಲ್ಲಿ ಸಮುದಾಯಕ್ಕೆ ಇತಿಹಾಸವನ್ನು ತಿಳಿಸಿಕೊಡುವ ಕೆಲಸವನ್ನು ಪ್ರೊ.ಭಗವಾನ್ ಅವರು ಮಾಡಲಿ. ಅಂತೆಯೇ ಸಮುದಾಯವು ಸಹ ಪ್ರತಿಭಟನೆ ಕೈ ಬಿಡಲಿ ಎಂದು ಕೇಳಿಕೊಳ್ಳುತ್ತೇವೆಂದರು.
ಈ ಮಹಿಷಾ ದಸರಾ ಮುಂಬರುವ ಲೋಕಸಭಾ ಚುನಾವಣೆಗೆ ಪರಿಣಾಮ ಬೀರಲಿದೆ ಎಂದರು