ಚಾಮರಾಜನಗರ:- ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ವಿಶೇಷ ಹೆಲಿಕಾಪ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂದಿಳಿದಿದ್ದಾರೆ.
ಮೈಸೂರಿನಿಂದ ಹೊರಟ ಅವರು ಬೆಳಿಗ್ಗೆ 7.20ರ ಸುಮಾರಿಗೆ ಮೇಲುಕಾಮಹಳ್ಳಿಯ ಸಫಾರಿ ಕೇಂದ್ರದ ಬಳಿ ನಿರ್ಮಿಸಿರುವ ತಾತ್ಕಾಲಿಕ ಹೆಲಿಪ್ಯಾಡ್ನಲ್ಲಿ ಬಂದಿಳಿದರು.
ಎರಡು ಭದ್ರತಾ ಪಡೆ ಹೆಲಿಕಾಪ್ಟರ್ ಸೇರಿದಂತೆ ಮೂರು ಹೆಲಿಕಾಪ್ಟರ್ ನಲ್ಲಿ ಬಂಡೀಪುರಕ್ಕೆ ಬಂದಿದ್ದು ಬಂಡೀಪುರ ಟೈಗರ್ ರಿಸರ್ವ್ ಲೋಗೋ ಇರುವ ಜಾಕೆಟ್, ಅರಣ್ಯ ಇಲಾಖೆ ಯೂನಿಫಾರ್ಮ್ ಹೋಲುವ ಟೀ ಶರ್ಟ್ ನ್ನು ನಮೋ ಹಾಕುವ ಮೂಲಕ ಮಿಂಚಿದ್ದಾರೆ.
ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಬಂಡೀಪುರ ಕ್ಯಾಂಪಸ್ಗೆ ತೆರಳಿದ ಅವರು, ಸಫಾರಿಗೆ ಹೊರಟರು.
ಭದ್ರತಾ ವಾಹನಗಳ ಬೆಂಗಾವಲಿನೊಂದಿಗೆ ನಮೋ ಸಫಾರಿ
ಬೋಳಗುಡ್ಡ, ಮಳ್ಳಲ್ಲ ಕ್ಯಾಂಪ್, ದನ್ನಟ್ಟಿ ಕ್ಯಾಂಪ್ ರಸ್ತೆಯಲ್ಲಿ ಮೋದಿ ಸಫಾರಿ
ಸಫಾರಿ ಬಳಿಕ ಮಧುಮಲೈ ತೆಪ್ಪಕಾಡಿಗೆ ಮೋದಿ ಭೇಟಿ
ತೆಪ್ಪಕಾಡಿನಲ್ಲಿ ಬೊಮ್ಮ ದಂಪತಿಗೆ ಸನ್ಮಾನಿಸಿ ಆನೆಗೆ ಕಬ್ಬು ತಿನ್ನಿಸಲಿರುವ ನಮೋ