ಇದು ಸಾರಿಗೆ ಬಸ್ ಉಚಿತ ಪ್ರಯಾಣ ಅವಾಂತರ !!!
ಹನೂರು : ಸಾರಿಗೆ ಬಸ್ ಉಚಿತ ಪ್ರಯಾಣ ವ್ಯವಸ್ಥೆಯಿಂದ ಬಸ್ಸಿನಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿಗೆ ಕಾರಣವಾಗಿದ್ದು ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್ ಬಾಗಿಲಲ್ಲಿ ನೇತು ಹಾಕಿಕೊಂಡು ಪ್ರಯಾಣಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹನೂರು ತಾಲೂಕು ಕೇಂದ್ರದಿಂದ ಅಜ್ಜಿಪುರ , ರಾಮಾಪುರ ಮಾರ್ಗ ಮತ್ತು ಹನೂರಿನಿಂದ ಬಂಡಳ್ಳಿ ಶಾಗ್ಯ ಹಾಗೂ ಮಂಗಲ ಕಾಮಗೆರೆ ಹನೂರಿನಿಂದ ಲೊಕ್ಕನಹಳ್ಳಿ ಮಾರ್ಗವಾಗಿ ಬೆಳ್ಳಿಗ್ಗೆ ಮತ್ತು ಸಂಜೆ ಶಾಲಾ ಕಾಲೇಜು ಸಮಯದಲ್ಲಿ ಬಸ್ಸಿನಲ್ಲಿ ಪ್ರಯಾಣಿಕರು ಮತ್ತು ವಿದ್ಯಾ೯ಥಿಗಳು ಜಾಸ್ತಿ ಇರುವುದರಿಂದ ವಿದ್ಯಾರ್ಥಿಗಳು ಬಸ್ಸಿನ ಬಾಗಿಲುನಲ್ಲಿ ನೇತಕಿಕೊಂಡು ನಿಂತಿ ಪ್ರಯಾಣ ಮಾಡುತ್ತಾರೆ ಅವಘಡವಾದರೆ ಹೊಣೆ ಯಾರು? ಎಂಬ ಮಾತುಗಳು ಕೇಳಿಬರುತ್ತಿವೆ.
ಸಾರಿಗೆ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆಯಿಂದ ಬಸ್ಸಿನಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹತ್ತುತ್ತಿರುವುದು ಇತ್ತೀಚಿನ ದಿನಗಳಲ್ಲಿ ಬೆಳವಣಿಗೆಯಾಗುತ್ತಿದೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೊರಡುವ ಸಮಯಕ್ಕೆ ಬಸ್ಸಿನಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು ವಿದ್ಯಾರ್ಥಿಗಳು ಬಾಗಿಲಲ್ಲಿ ನಿಂತು ಪ್ರಯಾಣಿಸುವಂತಾಗಿದೆ.
ಹನೂರು ಭಾಗದ ಬಹುತೇಕ ಹಳ್ಳಿ ಗ್ರಾಮ ಗಳಿಗೆ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಇರುವುದು ಇಲ್ಲಿನ ಬಹುದೊಡ್ಡ ಸಮಸ್ಯೆಯಾಗದೆ. ಕೆಲವು ಗ್ರಾಮಗಳಿಗಷ್ಟೇ ನಿಗದಿತ ಸಮಯಕ್ಕೆ ಬರುವ ಸಾರಿಗೆ ಬಸ್ಸನ್ನು ಕಾದು ಹೋಗಬೇಕಾದ ಪರಿಸ್ಥಿತಿ ಇದೆ. ಬರೋ ಬಸ್ಸಿನಲ್ಲಿ ಹೆಚ್ಚಿನ ಪ್ರಯಾಣಿಕರು ಇದ್ದಂತೆ ಅಪಘಾತಗಳು ಸಂಭವಿಸುವ ಸಾಧ್ಯತೆ ಕಾಣುತ್ತದೆ.
ಆಕಸ್ಮಿಕವಾಗಿ ಬಾಗಿಲಲ್ಲಿ ನಿಂತ ವಿದ್ಯಾರ್ಥಿಗಳು ಅಥವಾ ಸಾರ್ವಜನಿಕರೇ ಆಗಲಿ ಕಾಲು ಜಾರಿ ಬಿದ್ದರೂ ಸಹ ಸಾವು ನೋವುಗಳು ಸಂಭವಿಸುವುದು ಗ್ಯಾರಂಟಿ. ಹಾಗಾಗಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಿಕೊಂಡುವ ಮೂಲಕ ಪ್ರಯಾಣಿಕರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಮಾಡಿ ಕೊಡಬೇಕಾಗಿದೆ.