ಬೆಂಗಳೂರು:ಬಿಜೆಪಿ-ಜೆಡಿಎಸ್ ಮೈತ್ರಿ ಅಧಿಕೃತ ಘೋಷಣೆಗೂ ಮುನ್ನವೇ ದಳ ಮನೆಯಲ್ಲಿ ಅಸಮಾಧಾನ ಸ್ಪೋಟಗೊಂಡಿದೆ.
ಮೈತ್ರಿ ಬಗ್ಗೆ ಅಧಿಕೃತ ಘೋಷಣೆಗೂ ಮುನ್ನವೇ ಕೆಲ ಶಾಸಕರರು ತಮ್ಮ ಬೇಸರ ಹೊರ ಹಾಕಿದ್ದಾರೆ. ಮೈತ್ರಿಯಿಂದಾಗಿ ತಮ್ಮ ರಾಜಕೀಯ ಭವಿಷ್ಯಕ್ಕೆ ಹಿನ್ನಡೆಯಾಗಲಿದೆ ಎಂಬವುದು ಅಸಮಾಧಾನಿತ ಶಾಸಕರ ಅಭಿಪ್ರಾಯವಾಗಿದೆ.
ಶಾಸಕ ಶರಣ್ಗೌಡ ಕಂದಕೂರ, ದೇವದುರ್ಗ ಶಾಸಕಿ ಕರಿಯಮ್ಮ ಸೇರಿದಂತೆ ಕೆಲ ಹಾಲಿ ಮಾಜಿ ಶಾಸಕರಿಂದ ಮೈತ್ರಿಗೆ ತೀವ್ರ ವಿರೋಧ ವ್ಯಕ್ತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಜೆಪಿ ಜೊತೆಗಿನ ಮೈತ್ರಿಯಿಂದ ನಿರ್ಣಾಯಕವಾಗಿರುವ ಅಹಿಂದ ಮತಗಳು ಕೈ ತಪ್ಪಲಿವೆ ಎಂಬ ಆತಂಕ ಜೆಡಿಎಸ್ ಶಾಸಕರಲ್ಲಿ ಮನೆ ಮಾಡಿದೆ.
ಈಗಾಗಲೇ ಕಾಂಗ್ರೆಸ್ನವರು ಬಿಜೆಪಿಯ ಬಿ ಟೀಂ ಎಂದು ಹಾದಿ ಬೀದಿಯಲ್ಲಿ ಟೀಕಿಸುತ್ತಿದ್ದಾರೆ. ಇದರಿಂದ ಪಕ್ಷದ ಜಾತ್ಯಾತೀತ ಸಿದ್ದಾಂತಕ್ಕೂ ಧಕ್ಕೆಯಾಗಲಿದೆ.