ಬೀಟ್ರೂಟ್ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂಬುವುದು ಗೊತ್ತು. ಆದರೆ ಈ ಬೀಟ್ರೂಟ್ ಅನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೊರೆಯುವ ಪ್ರಯೋಜವೇನು ಗೊತ್ತೇ? ಬೀಟ್ ರೂಟ್ನಲ್ಲಿ ವಿಟಮಿನ್ಸ್, ಖನಿಜಾಂಶ, ಆ?ಯಂಟಿಆಕ್ಸಿಡೆAಟ್ ಅಧಿಕವಿದೆ, ಇದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನೀವು ಪ್ರತಿನಿತ್ಯ ಬೀಟ್ರೂಟ್ ಸೇವಿಸುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:
ಬಿಪಿ ನಿಯಂತ್ರಣದಲ್ಲಿರುತ್ತದೆ
ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ನೀವು ಬಯಸುವುದಾದರೆ ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಬೀಟ್ರೂಟ್ ಜ್ಯೂಸ್ ಕುಡಿಯಿರಿ. ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಆದ್ದರಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೀಟ್ರೂಟ್ ಜ್ಯೂಸ್ ಕುಡಿಯಿರಿ. ಹೀಗಾದಾಗ ಗರ್ಭನಿರೋಧಕ ಮಾತ್ರೆ ತೆಗೆದುಕೊಂಡರೂ ಗರ್ಭಧಾರಣೆಯ ಸಾಧ್ಯತೆ ಇದೆ!
* ಆಟಗಾರರ ಸ್ಟೆಮಿನಾ ಹೆಚ್ಚಾಗುವುದು
ಆಟಗಾರರಾಗಿದ್ದರೆ ಬೀಟ್ರುಟ್ ಜ್ಯೂಸ್ ಕುಡಿಯುವುದರಿಂದ ಸ್ಟೆಮಿನಾ ಹೆಚ್ಚಾಗುವುದು European Journal of Applied Physiology ವರದಿ ಮಾಡಿದೆ. ಬೀಟ್ರೂಟ್ ಜ್ಯೂಸ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ
ನೀವು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬಯಸುವುದಾದರೆ ಬೀಟ್ರೂಟ್ ಜ್ಯೂಸ್ ಕುಡಿಯಿರಿ. ಇದರಲ್ಲಿ ವಿಟಮಿನ್ ಸಿ ಹಾಗೂ, ಆ್ಯಂಟಿಆಕ್ಸಿಡೆAಟ್ ಅಧಿಕವಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ತ್ವಚೆ ಸೌಂದರ್ಯ ಹೆಚ್ಚಿಸುತ್ತದೆ
ನೀವು ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ತ್ವಚೆಗೆ ತುಂಬಾ ಒಳ್ಳೆಯದು. ನಿಮ್ಮ ತ್ವಚೆ ತುಂಬಾ ಡ್ರೆöÊಯಾಗಿದ್ದರೆ ನೀವು ಬೀಟ್ರೂಟ್ ಜ್ಯೂಸ್ ಕುಡಿಯಿರಿ. ಪ್ರತಿದಿನ ಕುಡಿಯುತ್ತಿದ್ದರೆ ನಿಮ್ಮ ತ್ವಚೆಯಲ್ಲಿ ಹೊಳಪು ಬರುವುದನ್ನು ಗಮನಿಸಬಹುದು.
ಉರಿಯೂತದ ಸಮಸ್ಯೆ ಕಡಿಮೆಯಾಗುವುದು
ಉರಿಯೂತದ ಸಮಸ್ಯೆಯಿದ್ದರೆ ನೀವು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬೀಟ್ರೂಟ್ ಜ್ಯುಸ್ ಕುಡಿಯುವುದರಿಂದ ಉರಿಯೂತದ ಸಮಸ್ಯೆ ಕಡಿಮೆಯಾಗುವುದು. ನೀವು ಔಷಧಿ ಜೊತೆಗೆ ಈ ಬೀಟ್ರೂಟ್ ಜ್ಯೂಸ್ ಕೂಡ ಕುಡಿದರೆ ತುಂಬಾನೇ ಪ್ರಯೋಜನ ಪಡೆಯಬಹುದು.
ರಕ್ತಹೀನತೆ ಸಮಸ್ಯೆ ತಡೆಗಟ್ಟುತ್ತದೆ
ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದರೆ ರಕ್ತಹೀನತೆ ಉಂಟಾಗುವುದು. ಆದರೆ ನೀವು ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ರಕ್ತ ಹೀನತೆ ಸಮಸ್ಯೆ ತಡೆಗಟ್ಟಬಹುದು. ಅದರಲ್ಲೂ ಗರ್ಭಿಣಿಯರು, ಬಾಣಂತಿಯರು ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ರಕ್ತ ಹೀನತೆ ಸಮಸ್ಯೆ ತಡೆಗಟ್ಟಬಹುದು.
ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು
ಆಗಾಗ ಮಲವಿಸರ್ಜನೆ ಅಥವಾ ಮಲಬದ್ಧತೆ ಸಮಸ್ಯೆ ತಡೆಗಟ್ಟಲು ಈ ಬೀಟ್ರೂಟ್ ಜ್ಯೂಸ್ ಕುಡಿಯಿರಿ. ಕರುಳಿನ ಕ್ಯಾನ್ಸರ್, ಹೃದಯದ ಕಾಯಿಲೆ, ಮಧುಮೇಹ ಇ ಬಗೆಯ ಆರೋಗ್ಯ ಸಮಸ್ಯೆ ತಡೆಗಟ್ಟಲು ಬೀಟ್ರೂಟ್ ಜ್ಯೂಸ್ ಸಹಕಾರಿಯಾಗಿದೆ.
ಬೀಟ್ರೂಟ್ ಜ್ಯೂಸ್ ಹೇಗೆ ತಯಾರಿಸುವುದು * ಒಂದು ಕಿತ್ತಳೆ * ಒಂದು ಬೀಟ್ರೂಟ್ * ಅರ್ಧ ಸೇಬು * ಸ್ವಲ್ಪ ಶುಂಠಿ ಇವುಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಕುಡಿಯಿರಿ. ಬೀಟ್ರೂಟ್ ಜ್ಯೂಸ್ ಗೆ ಸಕ್ಕರೆ ಹಾಕಬೇಡಿ.