ಚಾಮರಾಜನಗರ, ಮೇ.30-ಬಿಸಿಲ ತಾಪ, ಕಾರ್ಯನಿರ್ವಹಿಸದ ಆಸ್ಪತ್ರೆ ಫ್ಯಾನ್ ಗಳಿಂದ ಬೇಸತ್ತ ಜನರು ಅಡ್ನಿಟ್ ಆಗುತ್ತಿದ್ದಂತೆ ಗರ್ಭಿಣಿಯರು, ವೃದ್ಧರು ಫ್ಯಾನ್ ಜೊತೆ ಬರುತ್ತಿರುವ ಘಟನೆ ಚಾಮರಾಜನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಗರ್ಭಿಣಿಯರು ಹಾಗೂ ಸಂಬಂಧಿಕರು ಆಸ್ಪತ್ರೆಗೆ ಬಂದ ವೇಳೆ ಬಿಸಿಲ ತಾಪಕ್ಕೆ ಹೈರಣಾಗುತ್ತಿದ್ದು ಸ್ವಂತ ಹಣದಿಂದ ಟೇಬಲ್ ಫ್ಯಾನ್ ಗಳನ್ನು ಖರೀದಿಸಿ ಬಳಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಯಾವ ಫ್ಯಾನ್ ಕೂಡ ಕಾರ್ಯನಿರ್ವಹಿಸದಿರುವುದನ್ನು ವೈದ್ಯರು, ಸಿಬ್ಬಂದಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ರೋಗಿಗಳ ಸಂಬಂಧಿಕರು ದೂರಿದ್ದಾರೆ.