ಮೈಸೂರು:ಬುದ್ಧ ಮೂರನೇ ಶತಮಾನದ ಮಹಾನ್ ಮಾನವತಾವಾದಿ. ಆತ ಮೋಕ್ಷದಾತನಲ್ಲ, ಮಹಾನ್ ಮಾರ್ಗದಾತ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಜ್ಞಾನಿ ಸ`Áಂಗಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಟ್ರಸ್ಟï, ಸಮಾನತೆ,ಸ್ವಾಭಿಮಾನ, ಸ್ವಾಲಂಬನೆ ಪ್ರತಿಷ್ಠಾನ ಹಾಗೂ ಸಮಾನತೆ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ಧ, ಬಸವ, ಅಂಬೇಡ್ಕರ್ ಈ ಮೂವರು ಮಹಾನ್ ಮಾನವತವಾದಿಗಳು. ಬಡಜನರ ಕಲ್ಯಾಣ ಬಯಸಿ ತಮ್ಮದೇ ಚಿಂತನೆಗಳ ಮೂಲಕ ಜಗತ್ತಿನ ಗಮನ ಸೆಳೆದವರು. ಬೌದ್ಧ ಧರ್ಮ ಭಾರತದಲ್ಲೇ ಹುಟ್ಟಿದರೂ ಅದು ಹೆಚ್ಚು ಪ್ರವರ್ತಮಾನಕ್ಕೆ ಬಂದ್ದು ಮಾತ್ರ ಚೈನಾ, ಜಪಾನ್, ಕೋರಿಯಾದಂತಹ ರಾಷ್ಟ್ರಗಳಲ್ಲಿ. ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ಬುದ್ಧನ ಚಿಂತನೆಗಳಲ್ಲಿ ಪರಿಹಾರವಿದೆ ಎಂದು ಹೇಳಿದರು.
ಬುದ್ಧ ಭಾರತದಲ್ಲಿ ಜಾತಿರಹಿತ ಸಮಾಜ ಇತ್ತು. ಆತ ಜಗತ್ತಿನ ಎಲ್ಲಾ ವಿಷಯಗಳನ್ನು ತಿಳಿಸಿದ ಸರ್ವಶ್ರೇಷ್ಠ ಚಿಂತಕನಾಗಿದ್ದ. ಬುದ್ಧ ಕೇವಲ ಏಷ್ಯಾದ ಬೆಳಕಲ್ಲ. ಇಡೀ ಪ್ರಪಂಚದ ಬೆಳಕು ಎಂದು ಹೇಳಿದರು.
ವೈದಿಕ ಕುಲದಲ್ಲಿ ಹುಟ್ಟಿದ ಬಸವಣ್ಣ ಹನ್ನೆರಡನೇ ಶತಮಾನದಲ್ಲೇ ಜಾತಿ ಮತ್ತು ಲಿಂಗ ಬೇಧಗಳ ವಿರುದ್ಧ ಸಿಡಿದವರು. ವೈದಿಕ ಚಿಂತನಗೆಗಳನ್ನು ತಿರಸ್ಕರಿಸಿ ಸಮಾನತೆ ಸಾರುವ ವಚನಗಳ ತಳಹದಿಯ ಮೇಲೆ ಲಿಂಗಾಯತ ಎಂಬ `Àರ್ಮ ಹುಟ್ಟುಹಾಕಿದರು. ವಚನಗಳಲ್ಲಿ ಮಾನವೀಯಂತಹ ಸ್ಪಂದಿಸುವ ಗುಣವಿದೆ.ಕಾಯಕವೇ ಕೈಲಾಸ ಪ್ರತಿಯೊಂದು ಜಾತಿಯೂ ಶ್ರೇಷ್ಠ.ಹುಟ್ಟಿನಿಂದ ಯಾರು ಶ್ರೇಷ್ಠ ಮತ್ತು ಕನಿಷ್ಠ ಅಲ್ಲ ಎಂದು ಹೇಳಿದ ಮಹಾನ್ ತತ್ವಜ್ಞಾನಿ ಬಸವಣ್ಣ ಎಂದು ಹೇಳಿದರು.
ಸ್ವತಃ ತಾವೇ ಅಸ್ಪಶ್ಯತೆಯ ನೋವುಂಡಿದ್ದ ಅಂಬೇಡ್ಕರ್ ಅವರು ಇಂತಹ ಕಳಂಕದ ವಿರುದ್ಧ ದೊಡ್ಡ ಹೋರಾಟ ಮಾಡಿದರು. ಅಸ್ಪೃಶ್ಯತೆ ನಾಶ ಮಾಡುವುದು ನನ್ನ ಜನ್ಮಸಿದ್ಧ ಹಕ್ಕು ಎಂದರು.ಅವರು ಸಾಮಾಜಿಕ ನೋವು ಅನುಭವಿಸಿದ್ದ ಕಾರಣ ಸಂವಿಧಾನ ಕರಡು ಸಮಿತಿಯಲ್ಲಿ ಸಮಾನತೆಗೆ ಆಗ್ರಹಿಸದರು.ದೇಶದ ಮೂಲ ಸಮಸ್ಯೆಗಳಿಗೆ ಅದ್ಭುತ ನೀಲಿನಕ್ಷೆ ತಯಾರಿಸಿದರು.ದ್ವನಿ ಇಲ್ಲದವರಿಗೆ ಧ್ವನಿ ನೀಡಿದ್ದಾರೆ ಎಂದು ಹೇಳಿದರು.
ಇಂದು ನಾವು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪರಿಹಾರ ಹೊದಗಿಸಿದ್ದಾರೆ. ಅವರ ಬಗ್ಗೆ ಜನರು ಅರ್ಥ ಮಾಡಿಕೊಳ್ಳಬೇಕು. ಅಂಬೇಡ್ಕರ್ ನಂತಹ ಒಬ್ಬ ನಾಯಕ ಹುಡುಕಿದರೂ ಸಿಗಲ್ಲ. ಗಾಂಧಿ, ಸುಭಾಸ್ಚಂದ್ರ ಬೋಸ್, ನೆಹರು ಅವರ ಹಿನ್ನಲೆಯೇ ಬೇರೆ, ಅಂಬೇಡ್ಕರ್ ಅವರ ಹಿನ್ನೆಲೆಯೇ ಬೇರೆ ಇವರ್ಯಾರು ಅಸ್ಪೃಶ್ಯತೆಯನ್ನು ಎದುರಿಸಲಿಲ್ಲ. ಮು ಟ್ಟುವುದೇ ದೊಡ್ಡ ಅಪರಾದವೆಂದರೆ ಸಮಾಜದಲ್ಲಿ ಬದುಕುವುದಾದರು ಹೇಗೆ ಎಂದು ಪ್ರಶ್ನಿಸಿದರು
ಅಂಬೇಡ್ಕರ್ ಅವರು ಶಿಕ್ಷಣ ಪರಿಶ್ರಮ, ಹೋರಾಟದಿಂದ ಬಂದವರು. ಆದ್ದರಿಂದ ಯುವಕರು ವಿದ್ಯಾವಂತರಾಗಬೇಕು. ಸಂಘಟಿತರಾದವರು ಮಾತ್ರ ಹೋರಾಟ ಮಾಡಲು ಸಾಧ್ಯ. ಸಮಾಜದಲ್ಲಿ ವೈಚಾರಿಕ ಪ್ರಜ್ಞೆ, ಸಮಾನತೆ, ಬಂದುತ್ವ ಬೆಳೆಯಲು ಇಂತಹ ಚರ್ಚೆಗಳು ಅವಶ್ಯಕ ಎಂದು ಹೇಳಿದರು.
ವಿಶ್ವಮೈತ್ರಿ ಬುದ್ಧವಿಹಾರದ ಕಲ್ಯಾಣಸಿರಿ ಭಂತೇಜಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಈ ಮೂರು ಮಾನವ ಜಗತ್ತು ಕಂಡ ಮಹಾಜ್ಞಾನಿಗಳು. ಬುದ್ಧಗುರು ಎಲ್ಲಾ ಕಾಲಕ್ಕೂ ನಿಲ್ಲುವ ಮಹಾನ್ ಶೇಷ್ಠಚಿಂತಕ.ಅವರ ಧಮ್ಮ ಮಾನವ ಧಮ್ಮವಾಗಿದೆ. ಜಗತ್ತಿನ ಉಗಮದ ಬಗ್ಗೆ ಅನೇಕ ಕಾಲ್ಪನಿಕ ವಿಚಾರಗಳಿದೆ.ಆದರೆ ಬುದ್ಧ ಜಗತ್ತು ಸ್ವಯಂಚಾಲಿತವಾಗಿದೆ ಎಂದು ಸತ್ಯ ಅನ್ವೇಷಣೆಯಿಂದ ಕಂಡುಕೊಂಡರು.ಇಂತಹ ಸತ್ಯವನ್ನು ಜಗತ್ತಿನ ಐದು ನಿಯಮದಲ್ಲಿ ತೋರಿಸಿದ್ದಾರೆ ಎಂದರು.
ನಿವೃತ್ತ ಪ್ರಾದ್ಯಾಪಕ ಪ್ರೊ.ಶಿವರಾಜಪ್ಪ, ಪ್ರೊ.ನೀಲಗಿರಿ ತಳವಾರ, ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿ ಸಿ.ಬಸವರಾಜು, ಪ್ರೊ.ಡಿ.ಆನಂದ್ ಇದ್ದರು.