ಪಾಂಡವಪುರ:ತಾಲೂಕಿನ ಬೇಬಿಬೆಟ್ಟದ ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ಹೈಕೋರ್ಟ್ ಸೂಚನೆಯಂತೆ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್ ನಡೆಸಲು ಗಣಿ ಅಧಿಕಾರಿಗಳು ಬುಧವಾರ ಬೇಬಿಬೆಟ್ಟದ ಆಯ್ದ ಪ್ರದೇಶದಲ್ಲಿ ಡ್ರಿಲ್ಲಿಂಗ್ ಯಂತ್ರದ ಹೋಲ್ ಡ್ರಿಲ್ಲಿಂಗ್(ಕುಳಿ ತೆಗೆಸುವ) ಮೂಲಕ ಕಾರ್ಯ ನಡೆಸಿದರು.
ಟ್ರಯಲ್ ಬ್ಲಾಸ್ಟ್ ನಡೆಸಲು ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಯಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ನಿಗಧಿಪಡಿಸುವ ಸ್ಥಳಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರೇಶ್ಮ ಹಾಗೂ ಭೂ ವಿಜ್ಞಾನಿ ನಾಗಮಧು ನೇತೃತ್ವದಲ್ಲಿ ಬೇಬಿಬೆಟ್ಟದ ಕ್ವಾರೆ ನಂ.೧, ೨, ಎಸ್ಎಲ್ವಿ, ಎಸ್ಟಿಜಿ ಮತ್ತು ಶ್ರೀರಾಮಲಿಂಗೇಶ್ವರ ಕ್ವಾರೆಯ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಬಿಗಿಪೊಲೀಸ್ ಬಂದೋಬಸ್ತ್ನಲ್ಲಿ ಕುಳಿ ತೆಗೆಸುವ ಕಾರ್ಯ ನಡೆಸಿದರು.
ಬೇಬಿಬೆಟ್ಟದಲ್ಲಿ ಗಣಿಗಾರಿಕೆ ನಡೆಸುವುದರಿಂದ ಕೆಆರ್ಎಸ್ ಅಣೆಕಟ್ಟೆಗೆ ಅಪಾಯ ಇದೆಯೋ? ಇಲ್ಲವೋ? ಎನ್ನುವುದನ್ನು ದೃಢಪಡಿಸಿಕೊಳ್ಳುವುದಕ್ಕಾಗಿ ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಹೈಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗಿದ್ದು, ಟ್ರಯಲ್ ಬ್ಲಾಸ್ಟ್ ನಡೆಸಲು ಜಾರ್ಖಂಡ್ ರಾಜ್ಯದ ಧನ್ಭಾಗ್ನ ಸೆಂಟ್ರಲ್ ಇನ್ಸ್ಟಿಟ್ಸೂಟ್ ಆಫ್ ಮೈನಿಂಗ್ ಆಂಡ್ ಫ್ಯೂಯಲ್ ರಿಸರ್ಚ್ ಸಂಸ್ಥೆಯಿಂದ ವಿಜ್ಞಾನಿಗಳ ತಂಡ ಆಗಮಿಸುವ ಹಿನ್ನೆಯಲ್ಲಿ ವಿಜ್ಞಾನಿಗಳ ಸೂಚನೆಯಂತೆ ಬೇಬಿಬೆಟ್ಟದ ಆಯ್ದ ಐದು ಸ್ಥಳಗಳಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಗಣಿ ಅಧಿಕಾರಿಗಳು ಬುಧವಾರ ಕುಳಿ ತೆಗೆಸುವ ಕರ್ಯ ನಡೆಸಿದರು.
ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್……!
