ಮಾಗಡಿ: ರಾಮನಗರ-ಮಾಗಡಿ ರಸ್ತೆಯ ಜೋಡಗಟ್ಟೆ ತಿರುವಿನ ಬಳಿ ಬೆಳ್ಳಂಬೆಳಗ್ಗೆ ಸುಮಾರು 7:40 ರಲ್ಲಿ ವೇಗವಾಗಿ ದ್ವಿಚಕ್ರವಾಹನ ಚಲಾಯಿಸಿ ಸರಕಾರಿ ಬಸ್ಸಿಗೆ ಡಿಕ್ಕಿಹೊಡೆದು ಸ್ಥಳದಲ್ಲಿಯೆ ಹಾರೋಹಳ್ಳಿಸಮೀಪದ ಬಿಲ್ಲನಕುಪ್ಪೆಯ ದರ್ಶನ್ ವಿದ್ಯಾರ್ಥಿ ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾನೆ.
ಅತನ ಹಿಂಬದಿ ಸವಾರ ಶರತ್ ಗಂಭೀರವಾಗಿ ಗಾಯಗೊಂಡಿದ್ದು ಮಾಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ತಿರುವಿನಲ್ಲಿ ವೇಗವಾಗಿ ಬಂದು ಬಲಗಡೆಯಲಿ ಸಾಗಿ ಬರುತ್ತಿರುವ ಬಸ್ಗೆ ನೇರವಾಗಿ ಡಿಕ್ಕಿಯಾಗಿ ತಲೆ ಛಿದ್ರವಾಗಿ ಒಂದುಕಾಲು ಮುರಿದು ತಲೆಗೆ ಬುದ್ದಿ ಹೇಳುವ ರೀತಿ ಇದ್ದು. ದ್ವಿಚಕ್ರವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು ಒಂದು ಕೈ ವಾಹನದ ಮುಂಭಾಗ ಸಿಕ್ಕಿಹಾಕಿಕೊಂಡಿದ್ದು ಅಲ್ಲಿನ ಜನರು ಅಪಘಾತದ ಭೀಕರತೆ ಕಂಡು ಮರುಗಿದರು.
ಮೃತನು ತಲೆಗೆ ಹೆಲ್ಮೆಟ್ ಧರಿಸದೆ ಇರುವುದೆ ಆತನ ಸಾವಿಗೆ ಕಾರಣವಾಗಿತ್ತು. ಪರೀಕ್ಷೆ ಬರೆಯಲು ಹೊರಟಿದ್ದ ಬೈಕ್ ಸವಾರ ತಡವಾಗುತ್ತದೆ ಎಂದು ಅತಿವೇಗದಲ್ಲಿ ವಾಹನ ಚಲಾವಣೆ ಮಾಡಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ವಿಚಾರ ತಿಳಿಸಿದ ಕೂಡಲೆ ಮಾಜಿ ಶಾಸಕ ಎ.ಮಂಜು ಮತ್ತು ಪೂಜಾಪಾಳ್ಯ ಕೃಷ್ಣಮೂರ್ತಿ ಮಾಗಡಿ ಠಾಣೆಗೆ ಮತ್ತು ಅಂಬುಲೆನ್ಸ್ಗೆ ಫೋನು ಮಾಡಿ ಪರಿಹಾರಕ್ಕೆ ಸಹಕರಿಸುವಂತೆ ಮನವಿ ಮಾಡಿದರು.