ಬೆಂಗಳೂರು;- ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೈಕ್ ವೀಲ್ಹಿಂಗ್ ಮಾಡುವ ಯುವಕರ ಸಂಖ್ಯೆ ಹೆಚ್ಚುತ್ತಿದೆ. ವೀಲ್ಹಿಂಗ್ ಮಾಡುವಾಗ ಅಪಘಾತವಾಗಿ ಗಾಯಗೊಂಡರೂ ಸಹ ಬುದ್ಧಿ ಕಲಿಯುತ್ತಿಲ್ಲ. ಈಗ ಸಂಚಾರಿ ಪೊಲೀಸರಿಗೆ ಬೈಕ್ ವೀಲ್ಹಿಂಗ್ಗೆ ಬ್ರೇಕ್ ಹಾಕಿ ಎಂದು ಖಡಕ್ ಸೂಚನೆ ನೀಡಲಾಗಿದೆ.
ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಸಂಚಾರ ಮತ್ತು ರಸ್ತೆ ಸುರಕ್ಷತೆ ಅಲೋಕ್ ಕುಮಾರ್ ಈ ಕುರಿತು ಪೊಲೀಸರಿಗೆ ಜ್ಞಾಪನಾ ಪತ್ರವನ್ನು ಬರೆದಿದ್ದಾರೆ. ವಾಹನ ಸವಾರರ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳುವುದು ಹಾಗೂ ನಿಷ್ಪಕ್ಷವಾಗಿ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.
ಯುವಕರು ಅಪಾಯಕಾರಿ ಬೈಕ್ ವೀಲ್ಹಿಂಗ್ ಮಾಡಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕುತ್ತಿದ್ದಾರೆ. ವಾಹನ ಸವಾರರ ವಿಡಿಯೋ ಅಥವಾ ಪೋಸ್ಟ್ಗಳ ಬಗ್ಗೆ ಎಲ್ಲಾ ಘಟಕಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಲು ಜ್ಞಾಪನಾ ಪತ್ರದಲ್ಲಿ ತಿಳಿಸಲಾಗಿದೆ.
ಬೈಕ್ ವೀಲ್ಹಿಂಗ್ ಮಾಡಿದರೆ ಲೈಸೆನ್ಸ್ ರದ್ದು
