ಬೆಂಗಳೂರು:- ಕನ್ನಡ ಮತ್ತು ತೆಲುಗು ಕಿರುತೆರೆ ವಲಯದಲ್ಲಿ ಹೆಸರು ಮಾಡಿರುವ ನಟಿ ಜ್ಯೋತಿ ರೈ, ಕಳೆದ ಹಲವು ತಿಂಗಳುಗಳಿಂದ ಮದುವೆ, ಬಾಯ್ಫ್ರೆಂಡ್ ಹೀಗೆ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಇದೆಲ್ಲದರ ನಡುವೆ, ಸೋಷಿಯಲ್ ಮೀಡಿಯಾದಲ್ಲಿನ ಬೋಲ್ಡ್ ಫೆÇೀಟೋಗಳಿಂದಲೂ ಸದ್ದು ಮಾಡುತ್ತಿರುತ್ತಾರೆ. ಇದೀಗ ಅಂಥದ್ದೇ ಕೆಲ ಮಾದಕ ಫೆÇೀಟೋಗಳನ್ನು ಶೇರ್ ಮಾಡಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಹೊಂಗನಸು ಅವರ ಇತ್ತೀಚಿನ ಧಾರಾವಾಹಿ. ತೆಲುಗಿನಲ್ಲೂ ಇವರು ತುಂಬ ಫೇಮಸ್ ನಟಿ. ಸೋಷಿಯಲ್ ಮೀಡಿಯಾದಲ್ಲಿ ಇವರು ಹಂಚಿಕೊಳ್ಳುವ ಫೆÇೀಟೋ ನೋಡಿದರೆ, ಇವರಿಗೆ ಮದುವೆ ಆಗಿಲ್ಲವೇ ಎಂದು ಊಹಿಸುವವರೇ ಹೆಚ್ಚು. ಆದರೆ ಇವರಿಗೆ ಮದುವೆ ಆಗಿ, 10 ವರ್ಷದ ಮಗನಿದ್ದಾನೆ. ಪತಿಯಿಂದ ದೂರವಾಗಿ ಡಿವೋರ್ಸ್ ಸಹ ಪಡೆದು ಜೀವನ ದೂಡುತ್ತಿದ್ದಾರೆ.
ತಮ್ಮ 20ನೇ ವಯಸ್ಸಿಗೆ ಪದ್ಮನಾಭ್ ಎಂಬುವವರನ್ನು ಜ್ಯೋತಿ ಮದುವೆಯಾಗಿದ್ದರು. ಕಾರಣಾಂತರಗಳಿಂದ ಈ ಜೋಡಿ ಬೇರೆ ಬೇರೆಯಾದರು. ಇತ್ತ ಬಣ್ಣದ ಲೋಕದಲ್ಲಿಯೂ ಅವಕಾಶಗಳಿದ್ದ ಕಾರಣ, ಕಿರುತೆರೆಗಳಲ್ಲಿಯೇ ಕಾಣಿಸಿಕೊಂಡು, ಖ್ಯಾತ ನಟಿಯಾಗಿಯೂ ಗುರುತಿಸಿಕೊಂಡರು.
ಇದೀಗ ಇದೇ ನಟಿ ಸೋಷಿಯಲ್ ಮೀಡಿಯಾದಲ್ಲಿ ಮತ್ತಷ್ಟು ಮಗದಷ್ಟು ಬೋಲ್ಡ್ ಎನಿಸುವ ಫೆÇೀಟೋ ಹಂಚಿಕೊಂಡು ಕಿಚ್ಚು ಹಚ್ಚಿದ್ದಾರೆ. ನಿನ್ನ ಅನುಗ್ರಹವಿರಲಿ ಎಂಬ ಕ್ಯಾಪ್ಶನ್ ನೀಡಿ ಬೋಲ್ಡ್ ಭಂಗಿಯ ಹಲವು ಫೆÇೀಟೋಗಳನ್ನು ಜ್ಯೋತಿ ರೈ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಸೀರಿಯಲ್ನಲ್ಲಿ ನಿಮ್ಮಂಥ ಸಭ್ಯ ಹೆಣ್ಣುಮಗಳನ್ನು ನೋಡಿದ ನನಗೆ ಈ ನಿಮ್ಮ ಅವತಾರ ಬೇಸರ ತರಿಸಿತು ಎಂದು ಕೆಲವರು ಹೇಳಿದರೆ, ನೀವು ತುಂಬ ಹಾಟ್ ಎಂದೂ ಕಾಮೆಂಟ್ ಹಾಕಿದವರಿದ್ದಾರೆ.