ಮಂಡ್ಯ:ಭಗವಾನ್ ಮಹಾವೀರರು ಬೋಧಿಸಿದ ಬದುಕಿ ಹಾಗೂ ಬದುಕಲು ಬಿಡಿ ಎನ್ನುವ ಅಹಿಂಸಾ ತತ್ವ ನಮ್ಮ ಜೀವನಕ್ಕೆ ದಾರಿದೀಪ
ವಾಗಿದೆ ಎಂದು ಮುಡಾ ನಿರ್ದೇಶಕ ಪುಟ್ಟರ್ಮಲ್ ಜೈನ್ ಹೇಳಿದರು.
ಮಂಡ್ಯದ ಪೇಟೆಬೀದಿಯಲ್ಲಿರುವ ಶ್ರೀ ಸುಮತಿನಾಥ ಜೈನರ ಶ್ವೇತಾಂಬರ ಸಮಾಜ ಆಯೋಜಿಸಿದ್ದ ಭಗವಾನ್ ಮಹಾವೀರ ಜಯಂತಿ ಪ್ರಯುಕ್ತ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು
ಭಗವಾನ್ ಮಹಾವೀರ ಅವರ ತತ್ವ, ಆದರ್ಶ ಅಳವಡಿಸಿಕೊಂಡು, ಅವುಗಳ ಮಾರ್ಗದರ್ಶನದಲ್ಲಿ ನಾವು ನಡೆಯೋಣ.ಮಹಾತ್ಮರ ಆದರ್ಶ ನಮ್ಮ ಬದುಕಿಗೆ ದಾರಿದೀಪವಾಗಲಿ ಎಂದು ಹೇಳಿದರು
ಭಗವಾನ್ ಮಹಾವೀರರು ಬೋಧಿಸಿದ ತತ್ವಗಳು ಎಲ್ಲ ಸಮಾಜಕ್ಕೆ ಅನ್ವಯಿಸುತ್ತದೆ. ಸರ್ವವನ್ನೂ ತ್ಯಾಗ ಮಾಡಿದ ಮಹಾವೀರರು,ಜೀವನದಲ್ಲಿ ಅರಿಷಡ್ವರ್ಗಗಳನ್ನು ನಿಗ್ರಹಿಸಿದಲ್ಲಿ ಜೀವನದಲ್ಲಿ ನೆಮ್ಮದಿಯ ಬದುಕು ಕಾಣಬಹುದು ಎಂಬುದಾಗಿ ಬೋಧಿಸಿದರು ಎಂದರು.
ಈ ಸಂದರ್ಭದಲ್ಲಿ ಸಜ್ಜನ್ ರಾಜ್ ಜೈನ್, ಗೌತಮ್ ಚಂದ್, ಅವರ್ ಲಾಲ್, ಪ್ರಕಾಶ್ ಚಂದ್, ಕಮಲೇಶ್ ಕುಮಾರ್ ಇತರರು ಭಾಗವಹಿಸಿದ್ದರು.
ಮಹಾವೀರಸ್ವಾಮಿ ಜಯಂತಿ ಪ್ರಯುಕ್ತ ಸಾದ್ವಿಶ್ರೀಗಳೊಂದಿಗೆ ಅದ್ದೂರಿ ಮೆರವಣಿಗೆ ನಗರದಲ್ಲಿ ನೆಡೆಯಿತು.