ಕ್ರೋಧಿನಾಮ ಸಂವತ್ಸರದಲ್ಲಿ ಅವಾಂತರಗಳೇ ಹೆಚ್ಚು ಎಂದು ಹೇಳಿದ್ದ 20 ದಿನಗಳಲ್ಲೇ ಕೇರಳದ ವಯನಾಡಿನಲ್ಲಿ ಭಾರೀ ಭೂಕುಸಿತ ಸಂಭವಿಸಿ 400ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಬಳಿಕ ಈ ಬಗ್ಗೆ ನಾನು ಮೊದಲೇ ಭವಿಷ್ಯ ನುಡಿದಿದ್ದೆ ಎಂದು ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದರು. ಈಗ ಶ್ರಾವಣ ಮಾಸ ಶುರುವಾಗಿದೆ. ಇಡೀ ಕರ್ನಾಟಕದಲ್ಲಿ ಹಬ್ಬದ ಋತುವನ್ನು ಸಂಭ್ರಮದಿAದಲೇ ಆಚರಣೆ ಮಾಡಿದ್ದಾರೆ.
ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಶುಕ್ರವಾರ (ಆಗಸ್ಟ್ 09) ನಾಡಿನೆಲ್ಲೆಡೆ ಸಂಭ್ರಮದಿAದ ಆಚರಣೆ ಮಾಡಿದ್ದು, ಈ ನಡುವೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜಲಕಂಟಕ, ಅಗ್ನಿಕಂಟಕ ಹಾಗೂ ವಾಯು ಕಂಟಕಗಳು ಮತ್ತಷ್ಟು ಹೆಚ್ಚಾಗಲಿವೆ. ಈ ಕುರಿತು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದ್ದಾರೆ. ಇದು ಶ್ರಾವಣ ಮಾಸ, ಹಬ್ಬದ ಋತು ಅಗಿದ್ದು, ಎಚ್ಚರಿಕೆಯಿಂದ ಇರಬೇಕು. ಈ ಮಾಸದಲ್ಲಿ ಅವಘಡಗಳು ಸಂಭವಿಸಲಿದೆ ಎಂದು ಭಯಾನಕ ಭವಿಷ್ಯ ನುಡಿದಿದ್ದಾರೆ.
ಈ ಮಾಸದಲ್ಲಿ ಗುರುಗಳು ಶಿಷ್ಯರಾಗುತ್ತಾರೆ, ಶಿಷ್ಯರು ಗುರುಗಳಾಗುತ್ತಾರೆ. ಹೆಣ್ಣುಮಕ್ಕಳ ಪ್ರಾಬಲ್ಯ ಹೆಚ್ಚಾಗಲಿದೆ. ರಾಜ್ಯದಲ್ಲಿ ಅತಿವೃಷ್ಟಿ ಆಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಕ್ರೋಧಿನಾಮ ಸಂವತ್ಸರ ಇದಾಗಿರುವ ಕಾರಣ ದೇಶದಲ್ಲಿ ಜಲ, ಅಗ್ನಿ ಹಾಗೂ ವಾಯು ಕಂಟಕಗಳ ಸಂಖ್ಯೆ ಹೆಚ್ಚಾಗಹುದು ಎಂದು ಹೇಳಿದ್ದಾರೆ.