ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ‘ನಾರಿ ಶಕ್ತಿ ವಂದನ್ ಮಸೂದೆ-2023’ ಎಂದು ಕರೆಯಲ್ಪಡುವ ಮಹಿಳಾ ಮೀಸಲಾತಿಗೆ ಸಂಬಂಧಿಸಿದ 128 ನೇ ಸಾಂವಿಧಾನಿಕ ತಿದ್ದುಪಡಿಯನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು. ಬುಧವಾರ 454 ಮತಗಳು ಮತ್ತು ಮೂರನೇ ಎರಡರಷ್ಟು ಬಹುಮತದೊಂದಿಗೆ ಅಂಗೀಕಾರವಾಯಿತು.
ಈ ಸಂದರ್ಭದಲ್ಲಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶಾ, ‘ಭಾರತದಲ್ಲಿ ಬೇರು ಹೊಂದಿರುವವರು ಮಹಿಳೆಯರನ್ನು ಎಂದೂ ದುರ್ಬಲರೆಂದು ಪರಿಗಣಿಸುವುದಿಲ್ಲ. ಎಲ್ಲ ಕ್ಷೇತ್ರದಲ್ಲೂ ಪುರುಷರಿಗಿಂತ ಮಹಿಳೆಯರು ಹೆಚ್ಚು ಶಕ್ತಿಶಾಲಿಯಾಗಿದ್ದಾರೆ’ ಎಂದು ಹೇಳಿದರು.ವಾಸ್ತವವಾಗಿ, ವಿರೋಧ ಪಕ್ಷಗಳು ಮಹಿಳೆಯರಿಗೆ ಮೀಸಲಾತಿ ನೀಡುವುದು ಮಹಿಳೆಯರು ದುರ್ಬಲರು ಎಂದು ಸೂಚಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಸಂಸತ್ತಿನ ಈ ವಿಶೇಷ ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸಲಾಗುತ್ತಿರುವುದರಿಂದ 2029 ರ ಮೊದಲು ಅದನ್ನು ಏಕೆ ಜಾರಿಗೆ ತರಲು ಸಾಧ್ಯವಿಲ್ಲ ಎಂಬ ಆರೋಪವೂ ಕೇಳಿಬಂತು?
ಈ ಕಳವಳಗಳನ್ನು ಉದ್ದೇಶಿಸಿ ಮಾತನಾಡಿದ ಶಾ, ‘ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಸರ್ಕಾರವು ಚುನಾವಣಾ ಗಿಮಿಕ್ ಮಾಡುತ್ತಿಲ್ಲ, ಜನಗಣತಿ ಮತ್ತು ಡಿಲಿಮಿಟೇಶನ್ ಪ್ರಕ್ರಿಯೆಯ ಮೊದಲು ಮೀಸಲಾತಿಯನ್ನು ಜಾರಿಗೆ ತರಲು ಸಾಧ್ಯವಿಲ್ಲ’ ಎಂದು ಹೇಳಿದರು. ಹಾಗೇ ಈ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಅವರು, ‘ಭಾರತದಲ್ಲಿ ಬೇರು ಹೊಂದಿರುವವರು ಮಹಿಳೆಯರನ್ನು ದುರ್ಬಲರೆಂದು ಪರಿಗಣಿಸುವುದಿಲ್ಲ. ವೇದಗಳಲ್ಲಿ ಮಹಿಳೆಯರಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಈ ವಿಧೇಯಕದೊಂದಿಗೆ ಮಹಿಳಾ ಹಕ್ಕುಗಳಿಗಾಗಿ ನಡೆದ ಸುದೀರ್ಘ ಹೋರಾಟ ಅಂತ್ಯಗೊಂಡಿದೆ ಎಂದರು.
ಮೋದಿಯವರ ‘ಮಹಿಳಾ ನೇತೃತ್ವದ ಅಭಿವೃದ್ಧಿ’ ದೃಷ್ಟಿಕೋನವನ್ನು ಸಾಕಾರಗೊಳಿಸುವ ಈ ಮಸೂದೆಯು ದೇಶದಲ್ಲಿ ನಿರ್ಣಯ ಮತ್ತು ನೀತಿ ನಿರೂಪಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ. ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು, ಜನಗಣತಿ ಮತ್ತು ಡಿಲಿಮಿಟೇಶನ್ ಪ್ರಕ್ರಿಯೆಗಳು ನಿರ್ಣಾಯಕವಾಗಿವೆ. ಆದ್ದರಿಂದ 2024ರ ಲೋಕಸಭೆ ಚುನಾವಣೆಯ ನಂತರ ರಚನೆಯಾಗುವ ಹೊಸ ಸರ್ಕಾರ ಜನಗಣತಿ ಮತ್ತು ಡಿಲಿಮಿಟೇಶನ್ ಪ್ರಕ್ರಿಯೆಗೆ ಚಾಲನೆ ನೀಡಲಿದೆ.’
ದೇಶದ ಪ್ರಜಾಸತ್ತಾತ್ಮಕ ಪಯಣದಲ್ಲಿ ಈ ಮಸೂದೆ ಮಹತ್ವದ ಸಾಧನೆಯಾಗಲಿದೆ. ದೇವೇಗೌಡರ ಸರ್ಕಾರದಿಂದ ಮನಮೋಹನ್ ಸಿಂಗ್ ಸರ್ಕಾರದವರೆಗೆ ಈ ಮಸೂದೆಯನ್ನು ಅಂಗೀಕರಿಸಲು ನಾಲ್ಕು ಬಾರಿ ಪ್ರಯತ್ನಿಸಲಾಯಿತು, ಆದರೆ ರಾಜಕೀಯ ಪರಿಗಣನೆಯಿಂದ ಅದು ಯಶಸ್ವಿಯಾಗಲಿಲ್ಲ. 27 ವರ್ಷಗಳಿಂದ ಬಾಕಿ ಉಳಿದಿದ್ದ ಈ ಮಸೂದೆ ಇದೀಗ ಶಾ ಅವರ ಮಾರ್ಗದರ್ಶನದಲ್ಲಿ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಒದಗಿಸುವ ‘ನಾರಿ-ಶಕ್ತಿ ವಂದನ್ ಕಾಯ್ದೆಗೆ’ ಲೋಕಸಭೆಯಲ್ಲಿ ಹೆಚ್ಚಿನ ಪಕ್ಷಗಳಿಂದ ಬೆಂಬಲವನ್ನು ಪಡೆಯಿತು.
ಮಹಿಳಾ ಸಬಲೀಕರಣ ವಿಷಯವು ಕೆಲವು ಪಕ್ಷಗಳಿಗೆ ರಾಜಕೀಯ ಅಜೆಂಡಾ ಅಥವಾ ರಾಜಕೀಯ ವಿಷಯ. ಕಳೆದ ಒಂಬತ್ತು ವರ್ಷಗಳಲ್ಲಿ, ಪಿಎಂ ಮೋದಿ ಅವರ ದೂರದೃಷ್ಟಿ ಮತ್ತು ಶಾ ಅವರ ನೀತಿಗಳು, ಮೋದಿಯವರಿಗೆ ಮಹಿಳಾ ಸಬಲೀಕರಣ ಎನ್ನುವುದು ರಾಜಕೀಯ ವಿಷಯವಲ್ಲ, ಬದಲಾಗಿ ಮನ್ನಣೆಯ ವಿಷಯ ಎಂದು ಸಾಬೀತು ಮಾಡಿವೆ.
ಮಹಿಳೆಯರ ಸುರಕ್ಷತೆ, ಗೌರವ ಮತ್ತು ಭಾಗವಹಿಸುವಿಕೆಗೆ ಬದ್ಧರಾಗಿರುವ ಅಮಿತ್ ಶಾ ಅವರು ‘ಮಹಿಳೆಯರು ಸಾರ್ವಜನಿಕ ಪ್ರತಿನಿಧಿಗಳಾಗಿದ್ದರೆ, ಮಹಿಳೆಯರ ಶಕ್ತಿಯೊಂದಿಗೆ ಯೋಜನೆಗಳ ಪ್ರಯೋಜನಗಳು ದೇಶದ ಕೊನೆಯ ವ್ಯಕ್ತಿಯನ್ನು ತಲುಪುತ್ತವೆ ಎಂದು ನಂಬುತ್ತಾರೆ. ಈ ಮಸೂದೆ ಕಾನೂನಾದರೆ, ಸಂಸತ್ತಿನಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳಾ ಸಂಸದರಿಗೆ ಮೀಸಲಿಡಲಾಗುವುದು, ಇದು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಒಂದು ಮೈಲಿಗಲ್ಲು.