ಮಟನ್ನ ಲಿವರ್ ಇಷ್ಟಪಡುವವರಾದರೆ ನಿಮ್ಮ ಇಷ್ಟದ ಲಿವರ್ ಸವಿಯುವಾಗ ಇಷ್ಟೆಲ್ಲಾ ಗುಣವಿದೆ ಎಂದು ತಿಳಿದು ಎರಡು ಪೀಸ್ ಜಾಸ್ತಿಯೇ ಸವಿಯುತ್ತೀರಿ. ಹೌದು ಫ್ರೆಷ್ ಮಟನ್ ಲಿವರ್ನ ಅಡುಗೆ ಮಾಡಿ ಸವಿಯುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೊಜನಗಳಿವೆ. ಮಟನ್ ಲಿವರ್ ತಿನ್ನುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:
ಪೋಷಕಾಂಶಗಳು ಅಧಿಕವಿರಲಿದೆ: ಮಟನ್ ಲಿವರ್ ಅತ್ಯಂತ ಪೋಷಕಾಂಶವಿರುವ ಆಹಾರವಾಗಿದೆ. ಇದರಲ್ಲಿ ವಿಟಮಿನ್ ಎ ಬೇರೆಲ್ಲಾ ಆಹಾರ ಪದಾರ್ಥದಲ್ಲಿ ಇರುವುದಕ್ಕಿಂತ ತುಂಬಾನೇ ಅಧಿಕವಿದೆ. ಒಂದು ಹೊತ್ತು ಸ್ವಲ್ಪ ಮಟನ್ ಲಿವರ್ ತಿಂದ್ರೆ ನಿಮ್ಮ ಇಡೀ ದಿನಕ್ಕಾಗುವಷ್ಟು ವಿಟಮಿನ್ ಎ ಹಾಗೂ ಇತರ ಪೋಷಕಾಂಶ ದೊರೆಯಲಿದೆ.
ವೆಜೆಟೇರಿಯನ್ ಹಾಗೂ ವೇಗನ್ ಆಗಿದ್ದರೆ ಈ ಆಹಾರಗಳಲ್ಲಿ ಪ್ರೊಟೀನ್ ಹೆಚ್ಚು ಸಿಗುತ್ತೆ ನೋಡಿ ವೆಜೆಟೇರಿಯನ್ ಹಾಗೂ ವೇಗನ್ ಆಗಿದ್ದರೆ ಈ ಆಹಾರಗಳಲ್ಲಿ ಪ್ರೊಟೀನ್ ಹೆಚ್ಚು ಸಿಗುತ್ತೆ ನೋಡಿ
ರಕ್ತಹೀನತೆ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು: ರಕ್ತಹೀನತೆ ಸಮಸ್ಯೆ ಇದ್ದರೆ ದಿನಾ ಸ್ವಲ್ಪ ಮಟನ್ ಲಿವರ್ ತಿನ್ನುವುದರಿಂದ ರಕ್ತಹೀನತೆ ಸಮಸ್ಯೆ ಕಡಿಮೆಯಾಗುವುದು. ಇದರಲ್ಲಿ ವಿಟಮಿನ್ ಬಿ 12 ಅಧಿಕವಿದೆ. ಆದ್ದರಿಂದ ತುಂಬಾ ವೀಕ್ ಇರುವವರಿಗೆ ಮಟನ್ ಲಿವರ್ ನೀಡಲಾಗುವುದು. ಕೆಲವರಿಗೆ ಬರೀ ಲಿವರ್ ಫ್ರೆöÊ ತಿನ್ನಲು ಇಷ್ಟವಾಗುವುದಿಲ್ಲಅಂಥವರು ಸ್ವಲ್ಪ ಮಟನ್ ಜೊತೆ ಮಿಕ್ಸ್ ಮಾಡಿ ಫ್ರೆöÊ ಅಥವಾ ಸಾರು ಮಾರಿ ತಿನ್ನಬಹುದು.
ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು: ಇದರಲ್ಲಿ ವಿಟಮಿನ್ ಕೆ ಇದು. ವಿಟಮಿನ್ ಕೆ ನಿಮ್ಮ ಮೂಳೆಯ ಆರೋಗ್ಯಕ್ಕೆ ತುಂಬಾನೇ ಅವಶ್ಯಕ. ಇದು ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ತ್ವಚೆಗೆ ತುಂಬಾ ಒಳ್ಳೆಯದು” ಮಟನ್ ಲಿವರ್ನಲ್ಲಿರುವ ವಿಟಮಿನ್ ಎ ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.
ಜ್ಞಾಪಕ ಶಕ್ತಿ ಹೆಚ್ಚಿಸಲು ಸಹಕಾರಿ: ಮಟನ್ ಲಿವರ್ ದೇಹಕ್ಕೆ ಶಕ್ತಿಯನ್ನು ಒದಗಿಸುವುದು ಮಾತ್ರವಲ್ಲ ಜ್ಞಾಪಕ ಶಕ್ತಿಗೂ ತುಂಬಾ ಒಳ್ಳೆಯದು. ಅಲ್ಲದೆ ಏಕಾಗ್ರತೆಯನ್ನು ಕೂಡ ಹೆಚ್ಚಿಸುವುದು.