ಬೆಂಗಳೂರು:ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯತಮನ ಮೇಲೆ ಮಹಿಳೆಯೊಬ್ಬರು ಬಿಸಿ ನೀರು ಎರಚಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಕೆಲಸಕ್ಕೆ ಬಂದಿದ್ದ ಕಲಬುರಗಿ ಜಿಲ್ಲೆಯ ವಿಜಯಶಂಕರ ಆರ್ಯಗೆ ಅಫ್ಜಲ್ಪುರದ ದೇಸಾಯಿ ಕಲ್ಲೂರಿನ ಜ್ಯೋತಿ ದೊಡ್ಡಮನಿ ಎನ್ನುವ ಮಹಿಳೆಯ ಪರಿಚಯವಾಗಿದೆ. ಬಳಿಕ ಇಬ್ಬರ ಮಧ್ಯೆ ಪ್ರೀತಿ ಉಂಟಾಗಿತ್ತು.
ಇದೀಗ ವಿಜಯ್ ಜ್ಯೀತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ.ಇದರಿಂದ ಕುಪಿತಗೊಂಡ ಜ್ಯೋತಿ ನಿನ್ನ ಹತ್ತಿರ ಮಾತನಾಡಬೇಕು ಬಾ ಎಂದು ರೂಮಿಗೆ ಕರೆಸಿಕೊಂಡು ಬಿಸಿ ನೀರು ಎರಚಿದ್ದಾಳೆ.ಇದರಿಂದ ಪ್ರಿಯಕರ ವಿಜಯಶಂಕರ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಜ್ಯೋತಿ ಬೃಂದಾವನ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಳು. ಸುಮಾರು 4 ವರ್ಷದ ಹಿಂದೆ ಇಬ್ಬರ ಪರಿಚಯವಾಗಿದ್ದು, ಜ್ಯೋತಿ ಮದುವೆ ಆಗಿರುವುದನ್ನು ಮುಚ್ಚಿಟ್ಟಿದ್ದಳು. ಹೀಗೆ ಇಬ್ಬರ ನಡುವೆ ಲವ್ವಿ ಡವ್ವಿ ಮುಂದುವರೆದಿದ್ದು, 2 ವರ್ಷಗಳ ಹಿಂದೆ ಜ್ಯೋತಿಗೆ ಮದುವೆಯಾಗಿರುವ ವಿಚಾರ ವಿಜಯ್ಗೆ ತಿಳಿದು ಬಂದಿದೆ.
ನಂತರ ಜ್ಯೋತಿಯನ್ನು ದೂರ ಮಾಡಲು ಶುರು ಮಾಡಿದ್ದಾನೆ.ಇದಕ್ಕೆ ಮಾತನಾಡಬೇಕು ಬಾ ಎಂದು ಜ್ಯೋತಿ ಮನೆಗೆ ಕರೆಯಿಸಿಕೊಂಡಿದ್ದಾಳೆ. ಬಳಿಕ ನಮ್ಮಬ್ಬರಿಗೂ ಮದುವೆಯಾಗಿದೆ.ಇನ್ನು ಮುಂದೆ ಇದೆಲ್ಲಾ ಬೇಡ. ಇಲ್ಲಿಗೆ ನಿಲ್ಲಿಸೋಣ ಎಂದು ವಿಜಯ್, ಜ್ಯೋತಿಗೆ ಹೇಳಿದ್ದಾನೆ. ಇದರಿಂದ ಜ್ಯೋತಿ ಆಕ್ರೋಶಗೊಂಡಿದ್ದಳು ಎನ್ನಲಾಗಿದೆ.
ನಂತರ ವಿಜಯ್ ಯಾಕೋ ಮೈಗೆ ಹುಷಾರಿಲ್ಲ ಡ್ರಿಪ್ಸ್ ಹಾಕು ಎಂದು ಹೇಳಿ ರೂಮಿನಲ್ಲಿ ಹೋಗಿ ಮಲಗಿಕೊಂಡಿದ್ದ.ಜ್ಯೋತಿಯು ಸಹ ವಿಜಯ್ಗೆ ಡ್ರಿಪ್ಸ್ ಹಾಕಿದ್ದಾಳೆ. ನಂತರ ಮೇ 26ರ ಬೆಳಗಿನ ಜಾವ 4 ರಿಂದ 5 ಗಂಟೆಗೆ ಬಿಸಿ ನೀರು ಎರಚಿ ಪರಾರಿಯಾಗಿದ್ದಾಳೆ.