ಕುವೈತ್:- ಅಮ್ಮ ಲೂಸಾ, ಅಪ್ಪ ಲೂಸಾ ಎಂಬ ಹಾಡುಗಳ ನಡುವೆ ದಂಪತಿಗಳು ಸಂಬಂಧ 3 ನಿಮಿಷದಲ್ಲಿ ಮುರಿದು ಬಿದ್ದರೂ ಅಚ್ಚರಿಯೇನಿಲ್ಲ ಬಿಡಿ. ಅದಕ್ಕೆ ಉದಾಹರಣೆ ಎಂಬಂತೆ ಕುವೈತ್ ನಲ್ಲೊಂದು ಜೋಡಿ ಮದ್ವೆಯಾದ 3 ನಿಮಿಷಕ್ಕೆ ಬೇರೆಯಾಗಿದ್ದಾರೆ. ಜಸ್ಟ್ ಡಿವೋರ್ಸ್ ಎಂಬ ಸಿಂಪಲ್ ಪದದ ಮೊರೆ ಹೋಗಿ ದೂರವಾಗಿದ್ದಾರೆ.
ಮದುವೆಯ ಈ ಬಂಧ.. ಅನುರಾಗದ ಅನುಬಂಧ.. ಏಳೇಳು ಜನುಮದಲೂ ತೀರದ ಸಂಬಂಧ.. ಎಂಬ ಎಸ್ಬಿಬಿ ಕಂಠದಿಂದ ಮೊಳಗಿದ `ಸೀತಾ’ ಸಿನಿಮಾದ ಹಾಡು ಎಷ್ಟು ಅರ್ಥಪೂರ್ಣವಾಗಿದೆಯೆಂದರೆ, ಸಂಬಂಧವನ್ನೇ ಗಟ್ಟಿಗೊಳಿಸುವ ತಾಖತ್ತು ಅದಕ್ಕಿದೆ. ಆದರೆ ಈಗಿನ ಕಾಲಘಟ್ಟವೇ ಬದಲಾಗಿದೆ.
ಕುವೈತ್ನಲ್ಲಿ ಹುಡುಗ-ಹುಡುಗಿ ಮದುವೆಯಾಗಲು ಬಯಸುತ್ತಾರೆ. ಮದುವೆಯಾಗಿ ಕೋರ್ಟ್ನಿಂದ ಹೊರಬರುವಾಗಲೇ ಇಬ್ಬರ ಮದುವೆ ಮುರಿದುಬಿದ್ದಿದೆ. 3 ನಿಮಿಷಗಳಲ್ಲಿ ಈ ಜೋಡಿ ವಿಚ್ಛೇದನ ಪಡೆದಿದ್ದಾರೆ. ಅಂದಹಾಗೆಯೇ ಇದು ಕುವೈತ್ನ ಅತ್ಯಂತ ಕಡಿಮೆ ಅವಧಿಯಲ್ಲಿ ವಿವಾಹವಾಗಿ ಮುರಿದ ಬಿದ್ದ ಘಟನೆಯಾಗಿದೆ.