ವರದಿ : ಸುಚಿತ್ರ ಗೌಡ
ಹಾಸನ: ಜಿಲ್ಲೆಯಲ್ಲೊಂದು ಮನಕಲುಕುವ ಘಟನೆ ನಡೆದಿದ್ದು,ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದೆ ತಾವು ವಾಸವಿರುವ ಮನೆಯ ಬಾಗಿಲ ಮುಂದೆಯೇ ಶವ ಹೂಳಲು ದಲಿತ ಕುಟುಂಬ ಮುಂದಾಗಿದೆ. ಹೌದು
ಅರಕಲಗೂಡು ತಾಲೂಕಿನ ಶಂಭೂನಾಥಪುರ ಗ್ರಾಮದಲ್ಲಿ ಸುಮಾರು 25 ದಲಿತ ಕುಟುಂಬಗಳಿದ್ದು, ಸುಮಾರು 120ಕ್ಕು ಹೆಚ್ಚು ಜನರು ವಾಸಿವಿದ್ದು, ಇದೆ ಕಾಲೋನಿಯ 55 ವರ್ಷದ ಗಿಡ್ಡಯ್ಯ ಎಂಬುವರು ತದ ರಾತ್ರಿ ಮರಣ ಹೊಂದಿದ್ದು, ಹೂಳಲು ಜಾಗವಿಲ್ಲದೆ, ಊರಿನಲ್ಲಿ ಸಾರ್ವಜನಿಕ ಸ್ಮಾಸನವು ಇಲ್ಲದೆ, ತಾವು ವಾಸವಿರುವ ಮನೆಯ ಬಾಗಿಲ ಮುಂದೆಯೇ ಗುಂಡಿ ತೆಗೆದು ಹೂಳಲು ಮುಂದಾಗಿದ್ದಾರೆ. ವಿಪರ್ಯಾಸವೆಂದರೆ ಈ ಗ್ರಾಮದಲ್ಲಿ ವಾಸಿಸುತ್ತಿರುವ 25 ದಲಿತ ಕುಟುಂಬಗಳಿಗೂ ತಮ್ಮ ಮನೆಗಳನ್ನು ಬಿಟ್ಟರೆ ಬೇರೆ ಯಾವ ರೀತಿಯ ಜಮೀನು ಅಥವಾ ಸ್ಥಳ ಇಲ್ಲ. ಈ ಬಗ್ಗೆ ಈ ಹಿಂದೆಯೇ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾವುದೇ ಅಧಿಕಾರಿಗಳು ಸ್ಪಂದಿಸಿಲ್ಲ. ದಲಿತರ ಮನವಿಗೆ ಅಧಿಕಾರಿಗಳು ಸ್ಪಂದಿಸದೆ ಇದ್ದದ್ದೇ ಇಂತಹ ಅಮಾನವೀಯ ಘಟನೆ ನಡೆಯಲು ಕಾರಣ ಎನ್ನುತ್ತಾರೆ ಸ್ಥಳೀಯರು.