ಮೈಸೂರು: ಮಹಿಷ ದಸರಾ’ ಕಾರ್ಯಕ್ರಮಕ್ಕೆ ಜಿಲ್ಲೆ ಮತ್ತು ವಿವಿಧ ಜಿಲ್ಲೆಗಳಿಂದ ದಲಿತ ಸಮುದಾಯದ ಯುವಕರು ಮತ್ತು ಸಮುದಾಯದ ಎಲ್ಲಾ ಜನರು ಭಾಗವಾಹಿಸುವ ಮೂಲಕ ಮೈಸೂರಿನ ಇತಿಹಾಸ ಮರುಷ ಮಹಿಷ ಮಂಡಲದ ರಾಜ ಹಾಗೂ ಬೌದ್ಧ ಬಿಕ್ಕು ಆಗಿದ್ದ ಮಹಿಷರಾಜನ ನೆನನಪಿನ “ಮಹಿಷ ದಸರಾ” ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ನಮ್ಮ ಸಂಘಟನೆಯು ಕೋರುತ್ತದೆ ಎಂದು ಸಂಚಾಲಕ ಭುಗತಗಳ್ಳಿ ಮಣಿಯಯ್ಯ ತಿಳಿಸಿದರು.
ದಲಿತ ಸಂಘರ್ಷ ಸಮಿತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತಿಹಾಸ ನಾಯಕನಾದ ಮತ್ತು ನಾಡಿನ ಮೂಲನಿವಾಸಿಗಳ ಮಹಿಷನನ್ನು ಮನುವಾದಿ ಪುರೋಹಿತಶಾಯಿಗಳು ತಮ್ಮ ಪುರಾಣಗಳಲ್ಲಿ ಕಟ್ಟುಕಥೆಯನ್ನು ಸೃಷ್ಟಿಸುವ ಮೂಲಕ ಆತನನ್ನು ರಾಕ್ಷಸನೆಂದು ಬಿಂಬಿಸಿದ್ದಾರೆ. ಅದನ್ನು ಸರಿಪಡಿಸಿ ನಾಡಿಗೆ ಮತ್ತು ಈ ನಾಡಿನ ಮೂಲನಿವಾಸಿಗಳ ವೈಭವಜೀವನ ಮತ್ತು ಶಾಂತಿ ಜೀವನವನ್ನು ನಾಡಿಗೆ ಪರಿಚಯಿಸುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು. ಸಂವಿಧಾನದ ಅಡಿಯಲ್ಲಿ ಯಾವುದೇ ವ್ಯಕ್ತಿ ಮತ್ತು ಸಮುದಾಯಗಳು ತಮಗೆ ಬೇಕಾದ ಧರ್ಮವನ್ನು ಪಾಲಿಸಲು ಆಚರಿಸಲು ಅವಕಾಶವಿರುವಾಗ ಬಿಜೆಪಿ ಪಕ್ಷ ಧರ್ಮಾಂಧತೆ ಮತ್ತು ದುಷ್ಕ ರಾಜಕಾರಣದಿಂದ ದಲಿತ ಸಮುದಾಯವನ್ನು ಅವಮಾನಿಸುತ್ತ ಕಾರ್ಯಕ್ರಮವನ್ನು ವಿರೋಧಿಸುತ್ತಿದೆ ಎಂದರು.
ಇಂದು ಪ್ರತಾಪಸಿಂಹ ಬಿಜೆಪಿ ಮತ್ತು ದಲಿತ ಸಮುದಾಯ ನಡುವೆ ಸಂಘರ್ಷವನ್ನು ಪ್ರಾರಂಭ ಮಾಡಿದ್ದಾರೆ. ಬಿಜೆಪಿ ತನ್ನ ರಹಸ್ಯ ಕಾರ್ಯ ಸೂಚಿಯಲ್ಲಿರುವ ದಲಿತ ವಿರೋಧಿತನವನ್ನು ಈಗ ಬಹಿರಂಗವಾಗಿ ಆಚರಿಸುವ ಮೂಲಕ ಅಸ್ಪುಶ್ಯತಾ ಆಚರಣೆ ಮತ್ತು ದಲಿತ ಸಮುದಾಯದ ಅಭಿವೃದ್ಧಿಯನ್ನು ಸಹಿಸದೇ ದಲಿತರನ್ನು ಮತ್ತೆ ಗುಲಾಮರಾಗಿ ತಳ್ಳುವ ವ್ಯವಸ್ಥಿತ ಪಿತೂರಿಯ ಫಲವೇ ಈ ನಡೆಯಾಗಿದೆ.
ಪ್ರತಾಪಸಿಂಹನನ್ನು ಪೋಲಿಸರು ಬಂಧಿಸಿ ಅವನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅ.13ನೇ ತಾರೀಖಿನಂದು ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಬಿಜೆಪಿಯ ಕಾರಣ. ಒಂದು ಪಕ್ಷವಾಗಿ ಎಲ್ಲರನ್ನೂ ಗೌರವಿಸಬೇಕಿದ್ದ ಬಿಜೆಪಿ ಧರ್ಮದ ಹೆಸರಲ್ಲಿ ಒಂದು ಸಮುದಾಯವನ್ನ ಎದುರು ಹಾಕಿಕೊಳ್ಳುವ ಹಂತಕ್ಕೆ ಬಂದಿದೆ. ದಲಿತರು ಇದನ್ನು ಸವಾಲಾಗಿ ಸ್ವೀಕರಿಸುತ್ತೇವೆ. ಅದನ್ನು ಮುಂದಿನ ಸಂಸತ್ ಚುನಾವಣೆಯಲ್ಲಿ ತೋರಿಸುತ್ತದೆ ಎಂದರು.