ಹನೂರು: ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಣ್ಣೆತ್ತಿನ ಅಮವಾಸ್ಯೆ ವಿಶೇಷವಾಗಿ ಸಹಸ್ರಾರರು ಭಕ್ತಸಾಗರ ಹರಿದು ಬಂದಿದ್ದು ಮಾದಪ್ಪನಿಗೆ ಪೂಜೆ ಸಲ್ಲಿಸಿದ್ದಾರೆ.
ಮಣ್ಣೆತ್ತಿನ ಅಮಾವಾಸ್ಯೆ ವಿಶೇಷವಾಗಿ ಮಾದಪ್ಪನಿಗೆ ಬೆಳಗ್ಗೆಯಿಂದ ವಿವಿಧ ಪೂಜಾ ಕೈಗಳು ಜರಗಿತು. ಬೆಳಗಿನ ಜಾವದಿಂದಲೂ ಸರತಿ ಸಾಲಿನಲ್ಲಿ ತೆರಳಿದ ಭಕ್ತರು ಅರಕೆ ಪೂಜೆ ಸಲ್ಲಿಸಿ ಸ್ವಾಮಿಯ ದರ್ಶನ ಪಡೆದರು.
ಅಮಾವಸೆ ವಿಶೇಷವಾಗಿ ಸಹಸ್ರಾರು ಭಕ್ತಸಾಗರ ಹರಿದು ಬಂದಿದ್ದು. ಇದರಲ್ಲಿ ಪುರುಷರು ಮಕ್ಕಳೆನ್ನದೆ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ವಿಶೇಷವಾಗಿದೆ.
ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಿರುವುದರಿಂದ. ಇದರ ಸದುಪಯೋಗಕ್ಕೆ ಮುಂದಾದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ತಾಲೂಕು ಸೇರಿದಂತೆ ಜಿಲ್ಲೆಯ ವಿದೆಡೆಗಳಿಂದ ಮಹಿಳೆಯರೇ ಹೆಚ್ಚಾಗಿ ಮಾದಪ್ಪನ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ.
ಮಾದಪ್ಪನ ಸನ್ನಿಧಿಯಲ್ಲಿ ಬೆಳಗಿನ ಜಾವ ಸ್ವಾಮಿಗೆ ಅಭಿಷೇಕ ಬಿಲ್ಪವಚ೯ನೆ ಸೇವೆ ಜರುಗುವ ಮಣ್ಣೆತ್ತಿನ ಅಮಾವಾಸ್ಯೆಯ ವಿಶೇಷ ಪೂಜೆ ಕೈಂಕರ್ಯಗಳಲ್ಲಿ ಭಕ್ತರು ಭಾಗಿಯಾಗಿ ಪೂಜೆ ಸಲ್ಲಿಸಿದ್ದಾರೆ. ಮುಡಿಸೇವೆ, ಉರುಳು ಸೇವೆ, ಪೆಂಜಿನ ಸೇವೆಯನ್ನು ಸಲ್ಲಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ.