ಹನೂರು: ತಾಲೂಕಿನ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಹುಂಡಿಗಳ ಎಣಿಕೆ ಕಾರ್ಯವನ್ನು ಮಾಡಲಾಗಿದ್ದು ಸುಮಾರು ನಗದು ಹಣ 2 ಕೋಟಿ. 53 ಲಕ್ಷ. 58 ಸಾವಿರ. 519 ರೂಂ. ಸಂಗ್ರಹವಾಗಿದೆ.
ಮಂಗಳವಾರ ಮಲೆ ಮಹದೇಶ್ವರ ಬೆಟ್ಟದ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ಸಿಸಿ ಟಿವಿ ಕಣ್ಗಾವಲಿನಲ್ಲಿ ಹಾಗೂ ಪೊಲೀಸ್ ಬಂದೋಬಸ್ತ್ ನಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು.
ಶ್ರೀ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಉಪ ಕಾರ್ಯದರ್ಶಿ ಕಾತ್ಯಾಯಿನಿ ದೇವಿ ಅವರ ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ಕಾರ್ಯವು ನಡೆಯಿತು.
ಮಹದೇಶ್ವರ ಸ್ವಾಮಿ ಕಾಣಿಕೆ ಹುಂಡಿಯಲ್ಲಿ ಸುಮಾರು 2 ಕೋಟಿ. 53 ಲಕ್ಷ. 58 ಸಾವಿರ. 519 ರೂಂ. ನಗದು ಹಣ ಸಂಗ್ರಹವಾಗಿದೆ. ಹಾಗೂ ಚಿನ್ನ 65 ಗ್ರಾಂ, ಬೆಳ್ಳಿ 3 ಕೆಜಿ 358 ಗ್ರಾಂ ಸಂಗ್ರಹವಾಗಿದೆ.
ದಿನಾಂಕ 28. 04. 2023 ರಿಂದ 29. 05. 2023 ವರೆಗೆ 32 ದಿನಗಳಲ್ಲಿ ಭಕ್ತರು ಮಹದೇಶ್ವರ ಸ್ವಾಮಿಗೆ ನೀಡಿರುವ ಹರಕೆ ಕಾಣಿಕೆಯು ಇದಾಗಿದೆ.
ಹುಣ್ಣಿಮೆ ಅಮಾವಾಸ್ಯೆ ಬೇಸಿಗೆ ರಜಾದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ ಭಕ್ತರು ಕಾಣಿಕೆ ಅರ್ಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಉಪ ಕಾರ್ಯದರ್ಶಿ ಬಸವರಾಜು ಸೇರಿದಂತೆ ಸ್ಟೇಟ್ ಬ್ಯಾಂಕ್ ಸಿಬ್ಬಂದಿಗಳು ಪ್ರಾಧಿಕಾರದ ನೌಕರರು ಸಿಬ್ಬಂದಿಗಳು ಪೊಲೀಸರು ಹಾಜರಿದ್ದರು.