ನಂಜನಗೂಡು: ಕಳೆದ ಒಂದು ವಾರದಿಂದ ರೈಲು ಬರುವ 45 ನಿಮಿಷಕ್ಕೂ ಮುಂಚೆ ಗೇಟ್ ಬಂದ್ ಮಾಡುತ್ತಿರುವ ಹಿನ್ನೆಲೆ, ನಂಜನಗೂಡು ತಾಲೂಕಿನ ಕೋಣನೂರು ಗ್ರಾಮಸ್ಥರು ಮತ್ತು ಕಾವಲುಗಾರರ ನಡುವೆ ದಿನನಿತ್ಯ ವಾಗ್ವಾದ ಕಂಡುಬರುತ್ತದೆ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಒಟ್ಟು ಮೂರು ಗೇಟ್ ಗಳಿದ್ದು, ಪ್ರತಿನಿತ್ಯ ಒಟ್ಟು 12 ರೈಲುಗಳು ಮೈಸೂರು ಮತ್ತು ಚಾಮರಾಜನಗರ ಕಡೆಗೆ ತೆರಳುತ್ತವೆ. ಪ್ರತಿನಿತ್ಯ ಶಾಲಾ ವಾಹನಗಳು, ಕಾರ್ಖಾನೆಗೆ ತೆರಳುವ ಕಾರ್ಮಿಕರು, ಮಾರುಕಟ್ಟೆಗೆ ತೆರಳುವ ವಾಹನಗಳು ಸೇರಿದಂತೆ ಎಲ್ಲರೂ ಗಂಟೆಗಟ್ಟಲೆ ಗೇ ಟ್ ಬಳಿ ಕಾದು ಕಾದು ಸುಸ್ತಾಗಿ ಹೋಗಿದ್ದಾರೆ. ಯಾವುದೇ ಕೆಲಸ ಕಾರ್ಯಗಳಿಗೆ ಸರಿಯಾದ ಸಮಯಕ್ಕೆ ತೆರಳಲು, ವಾಪಸ್ ಊರುಗಳಿಗೆ ಬರುವ ಸಂದರ್ಭದಲ್ಲಿಯೂ ಮನೆಗಳಿಗೆ ತೆರಳಲು ಪ್ರಯಾಸ ಪಡುವಂತಾಗಿದೆ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ ರೈಲ್ವೆ ಅಧಿಕಾರಿಗಳೊಂದಿಗೆ ಗ್ರಾಮಸ್ಥರು ತರಾಟೆಯನ್ನು ತೆಗೆದುಕೊಂಡಿದ್ದಾರೆ. ಮೇಲಧಿಕಾರಿಗಳ ಆದೇಶದ ಮೇರೆಗೆ, ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಂಡಿರುವಾಗಿ ತಿಳಿಸಿದ್ದಾರೆ ಇದಕ್ಕೆ ಒಪ್ಪದ ಗ್ರಾಮಸ್ಥರು ಈ ಮೊದಲು ಇದ್ದಾಗೆ 10 ರಿಂದ 15 ನಿಮಿಷ ಕಾಯ ಬಹುದು, ಗಂಟೆಗಟ್ಟಲೆ ರೈಲ್ವೆ ಗೇಟ್ ಬಳಿಗೆ ಕಾದ ನಿಂತರೆ ಮುಂದಿನ ಕೆಲಸ ಕಾರ್ಯಗಳ ಗತಿ ಏನು ಎಂಬ ಚಿಂತೆ ಯಲ್ಲಿದ್ದು ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದ್ದಾರೆ.