ದೆಹಲಿ:- ಇತ್ತೀಚಿನ ದಿನಗಳಲ್ಲಿ ದೆಹಲಿ ಮೆಟ್ರೋದ ಹಲವಾರು ವಿಡಿಯೋ ಕ್ಲಿಪ್ಗಳು ಸುದ್ದಿಯಾಗುತ್ತಿವೆ. ಪ್ರಶಂಸೆಯ ಹಾಗೂ ಖಂಡನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಜಗಳದಿಂದ ಹಿಡಿದು ಮಹಿಳೆಯೊಬ್ಬರು ಸಹ ಪ್ರಯಾಣಿಕರಿಗೆ ಮೆಣಸಿನ ಪುಡಿ ಸಿಂಪಡಿಸಿದ ಹಳೆಯ ಘಟನೆಯವರೆಗೆ ವಿಡಿಯೋಗಳು ವೈರಲ್ ಆಗಿವೆ. ಸದ್ಯ ಮತ್ತೊಂದು ಕಾರಣಕ್ಕೆ ದೆಹಲಿ ಮೆಟ್ರೋ ಸುದ್ದಿಯಲ್ಲಿದೆ.
ದೆಹಲಿ ಮೆಟ್ರೋ ರೈಲಿನಲ್ಲಿ ಜೋಡಿಯೊಂದು ಮುದ್ದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವರು ಇದನ್ನು “ನಾಚಿಕೆಗೇಡಿನ ಕೃತ್ಯ” ಎಂದು ಕರೆದರೆ, ಇತರರು ಇದನ್ನು ‘Iಣ is ಛಿommoಟಿ’ ಎಂದಿದ್ದಾರೆ.
ಈ ವಿಡಿಯೋವನ್ನು ರಿಚಾ ಶರ್ಮಾ ಎಂಬ ಬಳಕೆದಾರರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ದೆಹಲಿ ಮೆಟ್ರೋ ಬೋಗಿಯಲ್ಲಿ ಹುಡುಗ ಮತ್ತು ಹುಡುಗಿ ಒಬ್ಬರನ್ನೊಬ್ಬರು ಚುಂಬಿಸುತ್ತಾ ಮೈಮರೆತಿದ್ದಾರೆ.
ಸಾರ್ವಜನಿಕವಾಗಿ ಚುಂಬಿಸಿದ್ದಕ್ಕಾಗಿ ಕೆಲವು ನೆಟ್ಟಿಗರು ಇದನ್ನು ಆಕ್ಷೇಪಿಸಿದರೆ, ಇನ್ನೂ ಕೆಲವರು ಅನುಮತಿಯಿಲ್ಲದೆ ವೀಡಿಯೊ ರೆಕಾರ್ಡ್ ಮಾಡಿದ್ದನ್ನು ಖಂಡಿಸಿದ್ದಾರೆ. ಇಂತಹ ದೃಶ್ಯಗಳನ್ನು ಸಾರ್ವಜನಿಕ ಪ್ರದರ್ಶನಗಳನ್ನಾಗಿ ಮಾಡಬಾರದು ಎಂದು ಅನೇಕ ಜನರು ಅಭಿಪ್ರಾಯಪಟ್ಟಿದ್ದಾರೆ.
“ಜನರು ಯಾಕೆ ಹಾಳಾಗುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ, ಸಾರ್ವಜನಿಕವಾಗಿ ದೆಹಲಿ ಮೆಟ್ರೋ ಪ್ರಯಾಣಿಕರು ಈ ರೀತಿ ಚುಂಬಿಸುವುದ ಎಷ್ಟು ಸರಿ. ಇತರರು ತಮ್ಮ ಸ್ವಂತ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ. ಅದನ್ನು ಯಾರೂ ಕೂಡ ಪ್ರಶ್ನೆ ಮಾಡಿಲ್ಲ” ಎಂದರು.
“ಯಾರೇ ಆಗಲಿ ಒಪ್ಪಿಗೆಯಿಲ್ಲದೆ ಚಿತ್ರೀಕರಿಸುವುದು ಅಥವಾ ಅವರ ವಿಡಿಯೊವನ್ನು ಪೋಸ್ಟ್ ಮಾಡುವುದು IPಅ ಸೆಕ್ಷನ್ 354 ಅ ಅಡಿಯಲ್ಲಿ ಶಿಕ್ಷಾರ್ಹವಾಗಿದೆ. ಆದರೆ ಇದು ತುಂಬಾ ಹತಾಶವಾಗಿರುವ ಸಂಸ್ಕೃತಿ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
”ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಇಂತಹ ಘಟನೆಗಳು ಹೆಚ್ಚಾಗಿವೆ. ಪ್ರಯಾಣಿಕರು ಆಸನಕ್ಕಾಗಿ ಜಗಳವಾಡುವುದು, ಮಹಿಳೆಯರು ಅರೆ ಬರೆ ಉಡುಗೆ ತೊಟ್ಟು ಪ್ರಯಾಣಿಸುವುದು, ಸಾರ್ವಜನಿಕವಾಗಿ ದಂಪತಿಗಳು ಚುಂಬಿಸುವುದು ಇತ್ಯಾದಿಗಳ ವೀಡಿಯೊಗಳು ನಮಗೆ ದೈನಂದಿನ ಮನರಂಜನೆಯ ಮೂಲಗಳಾಗಿವೆ. ಸಂಸ್ಕೃತಿ ಇಲ್ಲಿ ಬದಲಾಗುತ್ತಿದೆ!” ಎಂದು ಮತ್ತೊಬ್ಬರು ಬರೆದಿದ್ದಾರೆ.
ಈ ಹಿಂದೆ ದೆಹಲಿ ಮೆಟ್ರೋದಲ್ಲಿ ಚಾನನ ಎಂಬ ಯುವತಿಯೊಬ್ಬಳು ಅರೆಬರೆ ಉಡುಗೆ ತೊಟ್ಟು ಸಾಮಾಜಿಕ ಜಾಲತಾಣಗಳ ಗಮನ ಸೆಳೆದಿದ್ದಳು. ಅವಳು ಸ್ಕರ್ಟ್ ಧರಿಸಿದ್ದಳು. ಯುವತಿ ವೀಡಿಯೊಗಳು ಮತ್ತು ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದಂತೆ ನೆಟಿಜನ್ಗಳು ಹುಡುಗಿಯ ಬಗ್ಗೆ ಕಿಡಿ ಕಾರಿದ್ದರು.
ಬಳಿಕ ಮಾದ್ಯಮದ ಮುಂದೆ ಮಾತನಾಡಿದ್ದ ಯುವತಿ “ಮೆಟ್ರೋ ಒಳಗೆ ವಿಡಿಯೋಗ್ರಫಿ ಇಲ್ಲ ಎಂಬ ತಮ್ಮದೇ ಆದ ನಿಯಮವನ್ನು ಡಿಎಂಆರ್ಸಿ ಈಗ ಮರೆತಿರುವುದು ವಿಚಿತ್ರವಾಗಿದೆ” ಎಂದು ಹೇಳಿದ್ದಳು. ನನ್ನ ಉಡುಪಿನಲ್ಲಿ ಅವರಿಗೆ ಸಮಸ್ಯೆಯಿದ್ದರೆ ಅದನ್ನು ಶೂಟ್ ಮಾಡಿದವರಿಂದಲೇ ಸಮಸ್ಯೆಯಾಗಬೇಕು’ ಎಂದು ಆಕೆ ವಿವರಿಸಿದ್ದಳು.
ಹಲವಾರು ತಿಂಗಳಿಂದ ಹೀಗೆಯೇ ಓಡಾಡುತ್ತಿದ್ದೇನೆ ಎಂದು ಚಾನನ ಮಾತು ಮುಂದುವರಿಸಿದರು. “ಇದು ಇದೀಗ ವೈರಲ್ ಆಗುತ್ತಿದೆ. ದೆಹಲಿಯ ಪಿಂಕ್ ಲೈನ್ನಲ್ಲಿ ಪ್ರಯಾಣಿಸಲು ನನಗೆ ಅವಕಾಶ ನೀಡಲಿಲ್ಲ, ಆದರೆ ಬೇರೆ ಯಾವುದೇ ಮಾರ್ಗದಲ್ಲಿ ನನಗೆ ಅಂತಹ ಸಮಸ್ಯೆಗಳಿಲ್ಲ” ಎಂದು ಅವರು ವಿವರಿಸಿದರು.