ಮೈ ಸೂರು: ಪಾಲಿಕೆ ಚುನಾವಣೆ ಘೋಷಣೆಯ ನಿರೀಕ್ಷೆಯಲ್ಲಿರುವ ಪುರಪಿತೃಗಳು ಗೌರಿ-ಗಣೇಶ ಹಬ್ಬಕ್ಕೆ ತಮ್ಮ ವಾರ್ಡಿನ ಜನರಿಗೆ ನಾನಾ ಬಗೆ ಉಡುಗೊರೆಯ ಮತ ಬೇಡುವ ನೂತನ ಬಗೆಯ ಹಬ್ಬದ ಪೊಲಿಟಿಕ್ಸ್ ಆರಂಭಿಸಿದ್ದಾರೆ.ವಿದ್ಯಾರಣ್ಯಪುರಂನಲ್ಲಿ ಕಳೆದ ಬಾರಿ ಬಿಜೆಪಿಯಿಂದ ಟಿಕೇಟ್ ವಂಚಿತರಾಗಿ ಪಕ್ಷೇತರರಾಗಿ ಸ್ಪರ್ಧೆಗಿಳಿದಿದ್ದ ಮಾ.ವಿ.ರಾಮಪ್ರಸಾದ್ ತಮ್ಮ ಈ ಬಾರಿ ವಾರ್ಡಿನ ಜನತೆಗೆ ಗೌರಿ ಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ.ಹೌದು ವಾರ್ಡಿನ ಮಹಿಳೆಯರ ಮನೆ ಮನೆಗೆ ಕಾಫಿ ಕಪ್ ಹಾಗೂ ಬ್ಲೌಸ್ ಪೀಸ್, ಬಳೆ ಹಾಗೂ ಹರಿಶಿನ ಕುಂಕುಮದ ಬಾಗಿನದ ಗಿಪ್ಟ್ ಪ್ಯಾಕ್ ವಿತರಿಸಿದ್ದಾರೆ. ಜತೆಗೆ ತಮ್ಮ ಸಮಾಜಸೇವೆಯ ಒಂದು ಭಿತ್ತಿಪತ್ರವನ್ನು ಹಾಕಿ ಗೌರಿ ಗಣೇಶ ಹಬ್ಬದ ಶುಭಾಶಯ ಕೋರುವ ವಿಭಿನ್ನ ಪ್ರಯತ್ನದೊಂದಿಗೆ ಜನತೆ ಗಮನ ಸೆಳೆದಿದ್ದಾರೆ.ಆ ಮೂಲಕ ಮುಂಬರುವ ಪಾಲಿಕೆ ಫೈಟ್ ಗೂ ಮುನ್ನವೇ ಮತದಾರರ ಸೆಳೆಯುವ ಕಸರತ್ತು ನಡೆಸಿರುವುದು ಎಲ್ಲರ ಗಮನ ಸೆಳೆದಿದೆ.