ಮೈಸೂರು: ಮೈಸೂರು ಜಿಲ್ಲೆಯಲ್ಲಿ ಡೆಂಗ್ಯೂ ಗೆ ಎರಡನೇ ಬಲಿ. ಮಾರಣಾಂತಿಕ ಜ್ವರಕ್ಕೆ ಜಯದೇವ ಹೃದ್ರೋಗ ಆಸ್ಪತ್ರೆ ಡಾಟಾ ಎಂಟ್ರಿ ಆಪರೇಟರ್ ಲಲಿತ ಸಾವು ಅಂತ ಗುರುತಿಸಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ಡೆಂಘೆಗೆ ಎರಡನೇ ಬಲಿಯಾಗಿರುವ ಕುರಿತು ಆತಂಕಕಾರಿ ವಿಚಾರ ಹೊರಬಿದ್ದಿದೆ. ಡೆಂಘೆ ಜ್ವರಕ್ಕೆ ಜಯದೇವ ಹೃದ್ರೋಗ ಆಸ್ಪತ್ರೆ ಡಾಟಾ ಎಂಟ್ರಿ ಆಪರೇಟರ್ ಸಾವನಪ್ಪಿದ್ದಾರೆ.
ಮೈಸೂರಿನಲ್ಲಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಡೆಂಘೆ ಪ್ರಕರಣಗಳು.
ಮೂರು ದಿನಗಳ ಹಿಂದೆ ಮೃತಪಟ್ಟಿದ್ದ ಹುಣಸೂರು ಸಮುದಾಯ ಆರೋಗ್ಯಾಧಿಕಾರಿ.
ರಾಜ್ಯಾದ್ಯಂತ ಡೇಂಜರ್ ಡೆಂಘೆ ದಿನೇ ದಿನೇ ಅಟ್ಟಹಾಸ ಮೆರೆಯುತ್ತಿದೆ. ಮಾರಣಾಂತಿಕ ಜ್ವರಕ್ಕೆ ಕೆಲಭಾಗಗಲ್ಲಿ ಜನರು ತತ್ತರಿಸಿಹೋಗಿದ್ದಾರೆ.
ಮೈಸೂರಿನಲ್ಲಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಡೆಂಘೆ ಪ್ರಕರಣಗಳಿಂದ ಎಲ್ಲೆಡೆ ಆತಂಕ ಸೃಷ್ಟಿಯಾಗಿದೆ..
ಮೂರು ದಿನಗಳ ಹಿಂದೆ ಡೆಂಘೆಗೆ ಹುಣಸೂರು ಮೂಲದ ಸಮುದಾಯ ಆರೋಗ್ಯಾಧಿಕಾರಿ ಮೃತಪಟ್ಟ ಬಗ್ಗೆ ವರದಿಯಾಗಿತ್ತು. ಈಗಾಗಲೇ ಜಿಲ್ಲೆಯಲ್ಲಿ ಆರೋಗ್ಯಾಧಿಕಾರಿಗಳು ಫುಲ್ ಅಲರ್ಟ್ ಆಗಿದ್ದು, ಮನೆ ಮನೆಗೆ ತೆರಳಿ ಡೆಂಘೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮನೆ ಸುತ್ತಮುತ್ತ ಶುಚಿತ್ವ ಕಾಪಾಡಿಕೊಳ್ಳುವಂತೆ ಅರಿವು ಮೂಡಿಸುತ್ತಿದ್ದಾರೆ. ಪ್ರಮುಖವಾಗಿ ಪುಟ್ಟ ಮಕ್ಕಳು ಹಾಗೂ ವೃದ್ಧರು ಬಿಸಿನೀರು ಕುಡಿಯುವಂತೆ ಹಾಗೂ ಸೊಳ್ಳೆಗಳ ಬಗ್ಗೆ ಎಚ್ಚರವಹಿಸುವಂತೆ ಜನರಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮನವಿ ಮಾಡಿಕೊಳ್ತಿದ್ದಾರೆ. ಅಲ್ಲದೆ, ರೋಗ ಲಕ್ಷಣ ಹೊಂದಿದ್ದಾರೆ ತಕ್ಷಣ ವೈದ್ಯರ ಸಲಹೆ ಪಡೆಯುವಂತೆ ಸೂಚನೆ ನೀಡಿದ್ದಾರೆ.
ಮೈಸೂರಿನಲ್ಲಿ ಡೆಂಗ್ಯೂಗೆ ಎರಡನೇ ಬಲಿ
