ಮೈಸೂರು: ಮೈಸೂರು ಅರಸರ ಕಾಲದಲ್ಲಿ ತಯಾರಾಗಿದ ಮೈಸೂರು ಪಾಕ್ ಖ್ಯಾತಿ ಗಳಿಸಿರುವ ಹಿನ್ನಲೆಯಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿ ಬೆಟ್ಟದಲ್ಲಿ ಸ್ವಾಗತಿಸಿ ಪ್ರವಾಸಿಗರಿಗೂ ಹಾಗೂ ಭಕ್ತಾದಿಗಳಿಗೂ ಮೈಸೂರು ಪಾಕ್ ವಿತರಿಸಿ ಮೈಸೂರು ಪಾಕ್ ಮಹತ್ವ ಹಾಗೂ ಅದರ ಇತಿಹಾಸ ತಿಳಿಸಲಾಯಿತು
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ಮೈಸೂರು ಪಕ್ ಗೆ ಈ ಸ್ಥನ ಬಂದಿರುವುದು ಮೈಸೂರಿಗೆ ಹೆಮ್ಮೆಯ ವಿಷಯ ಇದರಿಂದ ಶಕ್ತಿ ಹಾಗೂ ಆರೋಗ್ಯವಾಗಿರುವುದಕ್ಕೆ ಸಹಾಯಮಾಡುತ್ತದೆ ಮೈಸೂರಿಗೆ ಬಂದವರೆಲ್ಲರೂ ಮೈಸೂರು ಪಾಕ್ ಸವಿದು ಊರಿಗೆ ತೆಗೆದುಕೊಂಡು ಹೋಗುತ್ತಾರೆ , ಚಿಕ್ಕ ಮಕ್ಕಳಿಂದ ಹಿರಿಯ ನಾಗರಿಕವರೆಗೂ ಮೈಸೂರು ಪಾಕ್ ತಿನ್ನಲು ಅಚ್ಚುಮೆಚ್ಚು, ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ಇರುವ ಮೈಸೂರು ಪಾಕ್ ಇಂದು ವಿಶ್ವದ್ಯಂತ ತನ್ನ ಹಿರಿಮೆ ಸಾರುತ್ತಿದೆ, ಹಾಗೆಯೇ ಪ್ರವಾಸೋದ್ಯಮ ಇಲಾಖೆ ಮೈಸೂರು ಪಾಕ್ ತಯಾರಿಸುವ ಅಡುಗೆ ಉದ್ಯಮವನ್ನು ಸೃಷ್ಟಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು
ನಂತರ ಮಾತನಾಡಿದ ಮಾಜಿನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ ಕರ್ನಾಟಕದ ಜನಪ್ರಿಯ ಸಿಹಿತಿನಿಸಾಗಿರುವ ಮೈಸೂರ್ ಪಾಕ್ ನ ರುಚಿಯನ್ನು ಸವಿಯದವರೇ ವಿರಾಲ ಎನ್ನಬೇಕು. ವಿಶ್ವದ ಸಿಹಿತಿನಿಸುಗಳ ಪಟ್ಟಿಯಲ್ಲಿ ನಮ್ಮ ಮೈಸೂರ್ಪಾಕ್ಗೆ 14ನೇ ಸ್ಥಾನ ದಕ್ಕಿರುವುದು ಕರ್ನಾಟಕ ಪಾಲಿಗೆ ಹೆಮ್ಮೆಯ ವಿಷ ಯವೇ ಸರಿ. ಮೈಸೂರುಪಾಕ್ಗೆ 90 ವರ್ಷಗಳ ಇತಿಹಾಸವಿದೆ. ಈ ಖಾದ್ಯವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಮೈಸೂರು ಅರಮನೆಯ ಬಾಣಸಿಗ ಮಾದಪ್ಪ ಅವರಿಗೆ ಸಲ್ಲಬೇಕು. ಆಗಿನ ಮೈಸೂರಿನ ಮಹಾರಾಜ ಕೃಷ್ಣರಾಜ ಒಡೆಯರ್ರವರ ಅಂದಿನ ಊಟಕ್ಕೆ ಸಿಹಿಯಿಲ್ಲದಿದ್ದುದನ್ನು ಗಮನಿಸಿದ ಮಾದಪ್ಪ, ಕಡಲೇಹಿಟ್ಟು, ತುಪ್ಪ, ಸಕ್ಕರೆಗಳ ಹದವಾದ ಮಿಶ್ರಣವನ್ನು ಬಳಸಿ ತಯಾರಿಸಿದ ಸಿಹಿತಿಂಡಿಯೇ ಮೈಸೂರ್ಪಾಕ್!
ವಿಶ್ವದ ಅಗ್ರಗಣ್ಯ ಸಿಹಿತಿಂಡಿಗಳಲ್ಲಿ ಪ್ರಸ್ತುತ 14ನೇ ಸ್ಥಾನ ಗಳಿಸಿರುವ ನಮ್ಮೆಲ್ಲರ ಹೆಮ್ಮೆಯ ಮೈಸೂರ್ಪಾಕ್ ಮೊದಲ ಸ್ಥಾನಕ್ಕೆ ಬರುವಂತಾಗಲಿ ಎಂದು ಆಶಿಸೋಣ. ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಡಾಕ್ಟರ್ ಶಶಿಶೇಖರ ದೀಕ್ಷಿತ್, ಮಾಜಿ ಮಹಾನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ ಹಾಗೂ ಜಗದೀಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಸಾಮಾಜಿಕ ಚಿಂತಕರಾದ ದೂರ ರಾಜಣ್ಣ, ಆನಂದ್ ದಯಾನಂದ, ಆದರ್ಶ್, ಅಮರ್ ಬಾಬು, ಹಾಗೂ ಇನ್ನಿತರರು ಹಾಜರಿದ್ದರು