ವರನು ತನ್ನ ಮದುವೆಯ ಮೊದಲ ರಾತ್ರಿಯ ವಿಡಿಯೋ ಮಾಡಿ ಹಂಚಿಕೊಂಡಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ. ಸದ್ಯ ನವ ಜೋಡಿಗಳು ಟ್ರೋಲ್ ಆಗುತ್ತಿದ್ದಾರೆ. ಅನೇಕರು ವಿಡಿಯೋ ಹಂಚಿಕೊಳ್ಳುವ ಮೂಲಕ ದಂಪತಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ವಧುವಿನ ಬಳಿ ನಮ್ಮ ಮದುವೆಯ ರಾತ್ರಿ ಹೇಗಿತ್ತು ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ವಧು ನೀನು ಈಗ ಎಲ್ಲಿದ್ದೀಯಾ ಎಂದು ಕೇಳುತ್ತಾಳೆ. ಬಳಿಕ ವರ ಫಸ್ಟ್ ನೈಟ್ಗೆ ಅಲಂಕರಿಸಿದ ಹೂ, ಹಾಸಿಗೆಯನ್ನು ವಿಡಿಯೋದಲ್ಲಿ ತೋರಿಸುತ್ತಾನೆ.
ಸಾಮಾಜಿಕ ಜಾಲತಾಣಗಳ ಗೀಳು ಯುವಜನರನ್ನು ಕಾಡುತ್ತಿದೆ. ಅದರಲ್ಲೂ ಕೆಲವರಂತೂ ಊಟ, ನಿದ್ದೆ ಬೇಕಾದರೆ ಬಿಡುವೆವು ಆದರೆ ರೀಲ್ಸ್, ವ್ಲಾಗ್ ಮಾತ್ರ ಬಿಡೆವು ಎಂಬವವರು ಇದ್ದಾರೆ. ಆದರೆ ಈ ಮಿತಿ ಮೀರಿದ ವರ್ತನೆಯಿಂದ ಮಾನ, ಮರ್ಯಾದೆ ಕಳೆದುಕೊಳ್ಳುವ ಪ್ರಸಂಗವು ಎದುರಾದದ್ದು ಇದೆ. ಇದೀಗ ಅದಕ್ಕೆ ಉದಾಹರಣೆ ಎಂಬಂತೆ ವ್ಲಾಗರ್ ಒಬ್ಬ ತನ್ನ ಫಸ್ಟ್ ನೈಟ್ ವಿಡಿಯೋವನ್ನ ಹಂಚಿಕೊಂಡಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಟ್ವಿಟ್ಟರ್ ಬಳಕೆದಾರರಾದ ಸನಂದಾ ರಾಯ್ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋಗೆ ಇದು ಸುಹಾಗ್ರತ್ ವ್ಲಾಗ್. ಈ ವ್ಲಾಗರ್ ಸಂಪೂರ್ಣ ಹುಚ್ಚರಾಗಿದ್ದಾರೆ. ಜೊತೆಗೆ ಬ್ಲರ್ ಮಾಡಿರುವ ಕ್ಲಿಪ್ ಗಾಗಿ ನಿರೀಕ್ಷಿಸಿ ಎಂದು ಬರೆದುಕೊಂಡಿದ್ದಾರೆ.