ಬೆಂಗಳೂರು: ಯುವತಿಯ ಬಲಾತ್ಕಾರಕ್ಕೆ ಯತ್ನಿಸಿ ಉಸಿರುಗಟ್ಟಿಸಿ ಕೊಂದ; ರಾತ್ರಿಯಿಡೀ ಮೃತದೇಹದೊಂದಿಗೆ ಕಳೆದ ಕಿರಾತಕ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ಮಹದೇವಪುರ ಬಳಿಯ ಮಹೇಶ್ವರಿ ನಗರದಲ್ಲಿ ನಡೆದಿದ್ದ ಯುವತಿಯ ನಿಗೂಢ ಕೊಲೆ ರಹಸ್ಯ ಭೇದಿಸಿರುವ ಮಹದೇವಪುರ ಠಾಣೆ ಪೊಲೀಸರು ಕೃಷ್ಣಚಂದ್ರ ಸೇಟಿ (26) ಎಂಬಾತನನ್ನು ಬಂಧಿಸಿದ್ದಾರೆ. ಒಡಿಶಾ ಮೂಲದ ಕೃಷ್ಣಚಂದ್ರ ಆ.10ರಂದು ರಾತ್ರಿ ಪಕ್ಕದ ಮನೆಯಲ್ಲಿ ನೆಲೆಸಿದ್ದ ಮಹಾನಂದಾ (21) ಎಂಬ ಯುವತಿಯ ಕತ್ತುಹಿಸುಕಿ ಕೊಲೆಗೈದಿದ್ದ. ಶುಕ್ರವಾರ ಮುಂಜಾನೆ ಯಾರಿಗೂ ಗೊತ್ತಾಗದಂತೆ ಮೃತದೇಹವನ್ನು ಅವರು ನೆಲೆಸಿದ್ದ ಮನೆ ಮುಂದೆಯೇ ಮಲಗಿಸಿ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಬುರಗಿ ಮೂಲದ ಮಹಾನಂದಾ ತನ್ನ ಸಹೋದರಿ ಸರೋಜಾ ಎಂಬುವವರ ಜತೆ ಮಹೇಶ್ವರಿನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈ ಇಬ್ಬರು ಸಹೋದರಿಯರು ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ಪಕ್ಕದ ಮನೆಯಲ್ಲಿಯೇ ಕೃಷ್ಣಚಂದ್ರ ಸೇಟಿ ಪತ್ನಿ ಜತೆ ನೆಲೆಸಿದ್ದ. ಐಟಿ ಕಂಪೆನಿಯೊAದರಲ್ಲಿ ಆತ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಿರುಚಾಡಿದಾಗ ಬಾಯಿ ಮುಚ್ಚಿದ್ದ; ಉಸಿರು ನಿಂತಿತ್ತು
ಆ.10ರAದು ಕೆಲಸಕ್ಕೆ ಹೋಗದೆ ಮಹಾನಂದಾ ಮನೆಯಲ್ಲಿಯೇ ಇದ್ದರು. ಸಹೋದರಿ ಸರೋಜಾ ಕೆಲಸ ಮುಗಿಸಿಕೊಂಡು ಸಂಜೆ ವಾಪಸ್ಸಾಗಿದ್ದರು. ರಾತ್ರಿ 8.30ರ ಸುಮಾರಿಗೆ ಮಹಾನಂದಾ ಒಬ್ಬರೇ ಮನೆ ಮುಂದೆ ಕುಳಿತಿದ್ದರು. ಈ ವೇಳೆ ಕೃಷ್ಣಚಂದ್ರ, ಮಹಾನಂದಾ ಅವರನ್ನು ತನ್ನ ಮನೆಗೆ ಎಳೆದೊಯ್ದು ಬಲಾತ್ಕಾರಕ್ಕೆ ಯತ್ನಿಸಿದ್ದ. ಆಕೆ ಸಹಾಯಕ್ಕಾಗಿ ಕಿರುಚಾಡಲು ಪ್ರಯತ್ನಿಸಿದಾಗ ಬಾಯಿ ಮುಚ್ಚಿದ್ದ. ಅಲ್ಲದೇ ಆಕೆ ಧರಿಸಿದ್ದ ಕಪುö್ಪ ದಾರದಿಂದಲೇ ಕುತ್ತಿಗೆಗೆ ಜೋರಾಗಿ ಬಿಗಿದಿದ್ದರಿಂದ ಉಸಿರುಗಟ್ಟಿ ಮೃತಪಟ್ಟಿದ್ದರು.
ನೀರಿನ ಡ್ರಮ್ನಲ್ಲಿ ಬಚ್ಚಿಟ್ಟಿದ್ದ
ಕೊಲೆ ಬಳಿಕ ಆತಂಕಗೊAಡ ಆರೋಪಿ, ಮೃತದೇಹವನ್ನು ಬೆಡ್ಶೀಟ್ನಲ್ಲಿ ಸುತ್ತಿ ನೀರಿನ ಡ್ರಮ್ನಲ್ಲಿ ಬಚ್ಚಿಟ್ಟಿದ್ದ. ರಾತ್ರಿ 12 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಬಂದ ಪತ್ನಿಗೆ ಕೊಲೆ ವಿಷಯ ತಿಳಿಸಿದ್ದ. ಇಬ್ಬರೂ ಭಯದಲ್ಲಿಯೇ ರಾತ್ರಿ ಕಳೆದಿದ್ದರು. ಅಂತಿಮವಾಗಿ ಶುಕ್ರವಾರ ಮುಂಜಾನೆ ಮೃತದೇಹವನ್ನು ಅವರ ಮನೆಯ ಮುಂದೆಯೇ ಇಟ್ಟು ಹೋಗಿದ್ದ ಎಂಬ ವಿಚಾರ ತನಿಖೆಯಲ್ಲಿಗೊತ್ತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪತ್ನಿಯಿಂದಲೇ ಸಿಕ್ಕಿಬಿದ್ದ ಹಂತಕ
ಸ್ವಲ್ಪ ಮಟ್ಟಿಗಿನ ಬುದ್ಧಿಮಾಂದ್ಯತೆ ಹೊಂದಿದ್ದ ತಂಗಿ ಮಹಾನಂದಾ ಕಾಣೆಯಾಗಿರುವ ಕುರಿತು ಸರೋಜಾ, ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಪೊಲೀಸರು ಕೂಡ ಇಡೀ ರಾತ್ರಿ ಹುಡುಕಾಟ ನಡೆಸಿದರೂ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಈ ಮಧ್ಯೆ, ಶುಕ್ರವಾರ ಬೆಳಗಿನ ಜಾವ ಮನೆಯ ಮುಂದೆಯೇ ಮೃತದೇಹ ಪತ್ತೆಯಾಗಿದ್ದು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಮೃತದೇಹದ ಕತ್ತಿನ ಮೇಲೆ ಕೆಂಪಾದ ಗುರುತು ಕಂಡಿತ್ತು.
ಮಹಾನAದಾ ನಿಗೂಢ ಸಾವಿನ ಬೆನ್ನತ್ತಿದ್ದ ಪೊಲೀಸರು ಮೊದಲಿಗೆ ಅಕ್ಕಪಕ್ಕದ ನಿವಾಸಿಗಳ ವಿಚಾರಣೆ ನಡೆಸಿದರು. ಕೃಷ್ಣಚಂದ್ರ ಪತ್ನಿಯನ್ನು ವಿಚಾರಿಸಿದಾಗ ”ನಾನಿಲ್ಲದ ವೇಳೆ ಮಹಾನಂದಾ ಮನೆಗೆ ಬಂದಿರಬಹುದು” ಎಂದು ಸಣ್ಣ ಸುಳಿವು ನೀಡಿದ್ದಳು. ಇದರಿಂದ ಎಚ್ಚೆತ್ತ ಪೊಲೀಸರು ಕೂಡಲೇ ಕೃಷ್ಣಚಂದ್ರನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆಯ ರಹಸ್ಯ ಬಾಯ್ಬಿಟ್ಟಿದ್ದ ಎಂದು ಅಧಿಕಾರಿ ಹೇಳಿದರು.