ಮೈಸೂರು: ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ‘ಜಂಬೂಸವಾರಿ ಮೆರವಣಿಗೆ ಮತ್ತು ಬನ್ನಿಮಂಟಪದ ಪಂಜಿನ ಕವಾಯತು ಟಿಕೆಟ್, ಗೋಲ್ಡ್ ಕಾರ್ಡ್ ಮಾರಾಟ ಮುಂದುವರಿದಿದೆ. ನಾಲ್ಕು ದಿನಗಳಿಂದಲೂ ಆನ್ಲೈನ್ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇನ್ನೂ ಒಂದು ಸಾವಿರ ಗೋಲ್ಡ್ ಕಾರ್ಡ್ ದೊರೆಯಲಿದೆ. ಒಬ್ಬರೇ ಬಹಳಷ್ಟು ಟಿಕೆಟ್ ಖರೀದಿಸುವುದನ್ನು ತಪ್ಪಿಸಲು ಒಟಿಪಿ ಆಧಾರಿತವಾಗಿ ಮಾರಲಾಗುತ್ತಿದೆ. ಒಬ್ಬರಿಗೆ 4 ಟಿಕೆಟ್ ಮಾತ್ರವೇ ದೊರೆಯುತ್ತದೆ. ಜಂಬೂಸವಾರಿಯ 2ಸಾವಿರ ಸಾಮಾನ್ಯ ಟಿಕೆಟ್ಗಳು ಕೂಡ ಲಭ್ಯ ಇವೆ’ ಎಂದು ತಿಳಿಸಿದರು.
‘ಯುವದಸರಾ ಟಿಕೆಟ್ ಮೊತ್ತ ಜಾಸ್ತಿಯಾಗಿರುವ ಬಗ್ಗೆ ಅಭಿಪ್ರಾಯ ಬಂದಿದ್ದರಿಂದ ಮತ್ತೆರಡು ಪ್ರವರ್ಗದ ಟಿಕೆಟ್ಗಳನ್ನು ಪರಿಚಯಿಸಲಾಗಿದೆ. ₹8ಸಾವಿರ ಹಾಗೂ ₹ 5ಸಾವಿರದ ಜೊತೆಗೆ ₹ 1,500 ಮತ್ತು ₹ 2,500ರ ಟಿಕೆಟ್ಗಳೂ ಲಭ್ಯ ಇವೆ. ಒಟ್ಟು 10ಸಾವಿರ ಟಿಕೆಟ್ಗಳನ್ನು ಮಾತ್ರ ಮಾರಲಾಗುವುದು. ಉಳಿದ 80ಸಾವಿರದಿಂದ 90ಸಾವಿರ ಮಂದಿಗೆ ಮುಕ್ತ ಪ್ರವೇಶವಿದೆ. ವೇದಿಕೆಯ ಮುಂದೆಯೇ ಹಾಗೂ ವಿಶೇಷ ಆಸನದ ವ್ಯವಸ್ಥೆ ಬಯಸುವವರು ಟಿಕೆಟ್ ಖರೀದಿಸಬಹುದು’ ಎಂದು ಹೇಳಿದರು.