ಬೆಂಗಳೂರು: ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಮಾತನಾಡುತ್ತಾ ನೂತನ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಅದೆಲ್ಲದಕ್ಕೂ ವರದಿಗಳನ್ನ ಪಡೆಯಬೇಕಾಗುತ್ತೆ. ಸುಮ್ನೆ ರಸ್ತೆಯಲ್ಲಿ ಹೋಗೋರಿಗೆಲ್ಲಾ ದುಡ್ಡು ಕೊಡೋದಕ್ಕೆ ಆಗಲ್ಲ ಎಂದು ಹೇಳಿದರು.
ಯಾರಿಗೆ ಹಣ ಕೊಡಬೇಕು? ಯಾರಿಗೆ ವಿದ್ಯುತ್ ಕೊಡಬೇಕು? ಫಲಾನುಭವಿಗಳು ಯಾರು ಎಂಬುದನ್ನೆಲ್ಲಾ ವರದಿ ಪಡೆದು ಯೋಜನೆ ಅನುಷ್ಠಾನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ನೂತನ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನೀಡಿದ ಎಲ್ಲಾ ಭರವಸೆಗಳು ಒಂದೇ ವರ್ಷದಲ್ಲಿ ಈಡೇರಿಸುವ ಭರವಸೆಗಳಲ್ಲ. 5 ವರ್ಷಗಳಲ್ಲಿ ಈಡೇರಿಸುವಂತಹದ್ದು. ಮೊದಲ ಸಂಪುಟದಲ್ಲಿ 5 ಗ್ಯಾರಂಟಿಗಳ ಜಾರಿ ಬಗ್ಗೆ ಮಾತು ಕೊಟ್ಟಿದ್ದೆವು. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಈಗಾಗಲೇ ನಿರ್ಧಾರ ಮಾಡಿದ್ದು, ಮುಂದಿನ ಸಂಪುಟ ಸಭೆಯ ಬಳಿಕ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.
2013-2018 ರಲ್ಲಿ 158 ಭರವಸೆ ಈಡೇರಿಸಿದ್ವಿ, ಅದರ ಜೊತೆಗೆ 30 ಕಾರ್ಯಕ್ರಮಗಳನ್ನ ಹೊಸದಾಗಿ ಜಾರಿ ಮಾಡಿದ್ವಿ. ಇಂದಿರಾ ಕ್ಯಾಂಟೀನ್, ಶೂ ಭಾಗ್ಯ, ವಿದ್ಯಾಸಿರಿ ಯೋಜನೆಗಳನ್ನ ಹೊಸದಾಗಿ ಜಾರಿಗೊಳಿಸಿದ್ವಿ. ಜನರಿಗೆ ನಮ್ಮ ಮೇಲೆ ವಿಶ್ವಾಸ ಇದೆ. ನಾವು ಕೊಟ್ಡ ಮಾತಿನಂತೆ ನಡೆಯುತ್ತೇವೆ ಎಂದು ಭರವಸೆ ನೀಡಿದರು.