ಮೈಸೂರು: ಜಿಲ್ಲಾಡಳಿತದ ನಿರ್ಲಕ್ಯದಿಂದ ರಾಜೇಂದ್ರ ಶ್ರೀಗಳ ಪ್ರತಿಮೆ ಇಡಲಾಗಿದೆ. ಇದರಿಂದ ಮೈಸೂರಿನ ರಾಜ ಪರಂಪರೆ ಹಾಗೂ ಗುರುಂಪರೆಗಳ ನಡುವಷೆ ಸಂಘರ್ಷ ಉಂಟಾಗುತ್ತಿದ್ದು, ಇದನ್ನು ಸೌಹರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುತ್ತೂರು ಮಠದ ಶ್ರೀ ರಾಜೇಂದ್ರ ಪ್ರತಿಮೆ ವಿವಾದವನ್ನು ಎರಡು ವರ್ಷಗಳ ಹಿಂದೆ ಸದರಿ ಜಾಗದಲ್ಲಿ ಪ್ರತಿಮೆ ಸ್ಥಾಪನೆ ಆಗಬೇಕಿತ್ತು. ಆದರೆ, ಕೆಲವು ವಿವಾದಗಳಿಂದ ನ್ಯಾಯಾಲಯದ ತಡೆಯಿಂದಾಗಿ ಪ್ರತಿಮೆ ಸ್ಥಾಪನೆ ವಿಳಂಬವಾಗಿದೆ. ಈಗ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ರಾತ್ರೋರಾತ್ರಿ ಪ್ರತಿಮೆ ಇಟ್ಟಿರುವುದು ತಪ್ಪು ನಡೆದು ಹೋಗಿದೆ. ಇದರಿಂದಾಗಿ ಅರಸು ಹಾಗೂ ಶ್ರೀ ಮನೆತನದ ನಡುವೆ ಸಂಘರ್ಷ ಉಂಟಾಗಿರುವುದರಿಂದ ನಗರಕ್ಕೆ ಅಪಕೀರ್ತಿ ಬರಲಿದೆ. ನಮಗೆ ರಾಜ ಪರಂಪರೆ ಹಾಗೂ ಗುರುಪರೆಯ ಎರಡರ ಮೇಲೂ ಗೌರವವಿದೆ. ಹೀಗಾಗಿ ಎರಡು ಸಮುದಾಯ ಕುಳಿತು ಚರ್ಚಿಸಿ ಒಮ್ಮತದ ತೀರ್ಮಾನ ಮಾಡಿಕೊಳ್ಳಬೇಕು. ಈಗ ಪ್ರತಿಮೆ ತೆಗೆಸಿದರೆ ಗುರುಪರಂಪರೆಗೆ ಅಪಮಾನ ಮಾಡಿದಂತೆ ಆಗಲಿದೆ. ಹೀಗಾಗಿ ನ್ಯಾಯಾಲಯದ ಮುಂದಿನ ಆದೇಶದಂತೆ ಪ್ರತಿಮೆ ವಿವಾದ ಬಗೆಹರಿಸಿಕೊಳ್ಳಲಿ ಎಂದರು. ಪಾಲಿಕೆ ಮಾಜಿ ಸದಸ್ಯ ಎಚ್.ಎಸ್ ಪ್ರಕಾಶ್, ರವಿನಂದನ್, ಉಪ್ಪಾರ ಯೋಗೇಶ್ ಉಪ್ಪಾರ್, ಆರ್.ಕೆ.ರವಿ ಇದ್ದಾರೆ.