ಮೈಸೂರು: ಬಿಜೆಪಿ ಟಿಕೆಟ್ ಘೋಷಣೆಯ ಬಿರುಸಿಗಿಂತ ಹೆಚ್ಚಾಗಿ ರಾಜಕೀಯ ನಿವೃತ್ತಿ ಹೆಚ್ಚಾಗಿದ್ದು, ಇಂದು ಈಶ್ವರಪ್ಪ ಅವರು ಚುನಾವಣಾ ರಾಜಕೀಯ ಘೋಷಿಸುತ್ತಿದ್ದಂತೆ ಹಲವು ಘಟಾನುಘಟಿಗಳು ನಿವೃತ್ತಿ ಘೋಷಿಸುತ್ತಿದ್ದು, ಮೈಸೂರಿನ ಕೆ.ಆರ್.ಕ್ಷೇತ್ರದ ಮಾಜಿ ಸಚಿವ, ಹಾಲಿ ಶಾಸಕ ನಿವೃತ್ತಿ ಘೋಷಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕೆ.ಆರ್.ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ಎಸ್.ಎ.ರಾಮದಾಸ್ ಅವರು ಕೂಡ ನಿವೃತ್ತಿ ಘೋಷಿಸಲಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹರಿದಾಡಿದ್ದು, ಕೆ.ಆರ್.ಕ್ಷೇತ್ರಕ್ಕೆ ನೂತನ ಅಭ್ಯರ್ಥಿ ಯಾರೆಂದು ಬಿಜೆಪಿ ಟಿಕೆಟ್ ಘೋಷಣೆ ನಂತರ ಎಲ್ಲದಕ್ಕೂ ಉತ್ತರ ಸಿಗಲಿದೆ.
ಬಿಜೆಪಿ ಕಡೆಯಿಂದ ಅಭ್ಯರ್ಥಿಗಳ ಪಟ್ಟಿ ಹೊರಬರುವ ಬದಲು ರಾಜಕೀಯ ನಿವೃತ್ತಿ ಪಡೆಯುವವರ ಪಟ್ಟಿ ಹೊರಬರುತ್ತಿವೆ! ಟಿಕೆಟ್ ಘೋಷಣೆಯಾಗುವ ಬದಲು ವಿಕೆಟ್ ಬೀಳುತ್ತಿವೆ! ಮಂತ್ರಿಗಿರಿಗಾಗಿ ಲಾಭಿ ಮಾಡಿ ಸುಸ್ತಾದ ಈಶ್ವರಪ್ಪ ಈಗ ಟಿಕೆಟ್’ಗೂ ಲಾಭಿ ನಡೆಸಿ ಸುಸ್ತಾದರು. ಬಿಜೆಪಿಯ ಅವಮಾನ ಸಹಿಸದೆ ರಾಜಕೀಯದಿಂದಲೇ ಪಲಾಯನ ಮಾಡಿದರು ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕುಟುಕಿದೆ.
ಬಿಜೆಪಿ ಯಡಿಯೂರಪ್ಪನವರ ಕಣ್ತಪ್ಪಿಸಿ, ದಿಕ್ಕು ತಪ್ಪಿಸಿ ಮೀಟಿಂಗ್ ಮಾಡ್ತಿರೋದೇಕೆ? ಅವರಿಗೆ ಕೇಂದ್ರೀಯ ಸಂಸದೀಯ ಮಂಡಳಿಯ ಸ್ಥಾನ ನೀಡಿದ್ದು ನಾಮಕಾವಸ್ಥೆಗೆ ಮಾತ್ರವೇ? BSYಗಿಂತ ಸಿ.ಟಿ ರವಿ, ಸಂತೋಷ್, ಪ್ರಹ್ಲಾದ್ ಜೋಷಿಯೇ ಮುಖ್ಯವಾದರೆ? BSYಗೆ ಕವಡೆ ಕಾಸಿನ ಕಿಮ್ಮತ್ತಿಲ್ಲವೇ? ಇಂತಹ ದಯನೀಯ ಸ್ಥಿತಿ BSYರಿಗೆ ಬರಬಾರದಿತ್ತು! ಎಂದು ಮತ್ತೊಂದು ಟ್ವೀಟ್ ನಲ್ಲಿ ವ್ಯಂಗ್ಯವಾಡಿದೆ.