ಮೇಷ: ನಿಮ್ಮ ಸ್ವಾರ್ಥರಹಿತವಾದ ಆಲೋಚನೆಗೆ ಕುಟುಂಬದವರು ಬಹಳ ಸಂತೋಷ ಪಡುತ್ತಾರೆ. ಇತರರ ಬಗ್ಗೆ ಕರುಣೆ ಹೆಚ್ಚಾಗಿರುತ್ತದೆ. ಪ್ರೀತಿಪಾತ್ರರ ಭೇಟಿ ಹಾಗೂ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದೀರಿ. ಕೌಟುಂಬಿಕ ಸಮಸ್ಯೆಗಳಿದ್ದಲ್ಲಿ ಸರಳವಾದ ಪರಿಹಾರ ಕಂಡುಕೊಳ್ಳುವಿರಿ.
ವೃಷಭ: ನಿಮ್ಮ ಬಗ್ಗೆ ಇತರರು ಏನೆಂದುಕೊಳ್ಳುತ್ತಾರೆ ಎಂದು ಬಹಳ ಆತಂಕಕ್ಕೆ ಒಳಗಾಗುತ್ತೀರಿ. ಸಾರ್ವಜನಿಕ ಜೀವನದ ವರ್ತನೆ ಬಗ್ಗೆ ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳುತ್ತೀರಿ. ಹಣ ಹೂಡಿಕೆ ವಿಚಾರದಲ್ಲಿ ಯಾರ ಪರವಾಗಿಯೂ ವಕಾಲತ್ತು ವಹಿಸಬೇಡಿ. ಸಲಹೆ- ಸೂಚನೆಯಂತೂ ಬೇಡವೇ ಬೇಡ.
ಮಿಥುನ: ಜಮೀನು ವ್ಯಾಜ್ಯಗಳು ಇದ್ದಲ್ಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ತಂದೆಯ ಕಡೆ ಸಂಬಂಧಿಗಳಿಂದ ನೆರವು ಸಿಗಲಿದೆ. ನೀವು ನೀಡಿದ್ದ ಮಾತಿಗೆ ಬದ್ಧವಾಗಿರಬೇಕು ಎಂಬುದನ್ನು ನೆನಪಿಟ್ಟುಕೊಳ್ಳಿ. ಕಾಲು, ಭುಜದ ನೋವು ಅಥವಾ ಗ್ಯಾಸ್ಟ್ರಿಕ್ಟ್ಸ ಮಸ್ಯೆ ನಿಮ್ಮನ್ನು ಕಾಡಬಹುದು.
ಕರ್ಕಾಟಕ: ಮನೆ ಬದಲಿಸಬೇಕು ಅಂದುಕೊಳ್ಳುತ್ತಿರುವವರಿಗೆ ಒಂದು ಬಗೆಯ ಅನಿಶ್ಚಿತತೆ ಕಾಡಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಆಲೋಚನೆ ಮಾಡಿಯೇ ಈ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಕಾರಣಕ್ಕೆ ಈ ಗೊಂದಲ ಸೃಷ್ಟಿಯಾಗುತ್ತದೆ. ಈ ದಿನ ನಿಮಗೆ ವಿಶ್ರಾಂತಿಯ ಅಗತ್ಯ ಹೆಚ್ಚಿದೆ. ಆತುರದ ತೀರ್ಮಾನ ಬೇಡ.
ಸಿಂಹ: ಯಾರಿಗೋ ಬಂದ ಅವಕಾಶವೊಂದು ನಿಮ್ಮ ಪಾಲಿಗೆ ಬರಬಹುದು. ನಿಮ್ಮ ಅನುಮಾನ- ಗುಮಾನಿಯನ್ನು ಬಿಟ್ಟು ಇದನ್ನು ನೋಡಬೇಕು. ರಕ್ತಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಾಣಿಸಿಕೊಳ್ಳಬಹುದು. ಇದು ಇನ್ನೂ ಕೆಲ ಸಮಯ ಮುಂದುವರಿಯಬಹುದು. ಹಿತಶತ್ರುಗಳ ಕಾಟ ಇರುತ್ತದೆ.
ಕನ್ಯಾ: ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿಯನ್ನು ಕೇಳುವ ಯೋಗ ಇದೆ. ಮಕ್ಕಳಿಗೆ ವಿವಾಹಕ್ಕೆ ಸೂಕ್ತ ಸಂಬAಧ ದೊರೆಯುವ ಅವಕಾಶ ಇದೆ. ನಿಮ್ಮ ಸಮತೋಲಿತ ಮಾತುಗಳಿಗೆ ಮೆಚ್ಚುಗೆ ವ್ಯಕ್ತವಾಗಲಿದೆ. ಪ್ರೀತಿಪಾತ್ರರಿಗೆ ಬೆಲೆ ಬಾಳುವ ವಸ್ತುವನ್ನು ನೀಡುವ ಬಗ್ಗೆ ಆಲೋಚನೆ ಮಾಡುತ್ತೀರಿ.
ತುಲಾ: ನಿಮ್ಮಿಂದ ನೆರವು ಪಡೆದವರು ಈ ದಿನ ನಿಮಗೇ ಕೈ ಕೊಡಬಹುದು. ಅವಲಂಬನೆ, ನಿರೀಕ್ಷೆ ಒಳ್ಳೆಯದಲ್ಲ. ಹಳೆ ದ್ವೇಷ ಸಾಧನೆ ಮಾಡಲು ಹೋಗಿ ನಿಮ್ಮ ವರ್ಚಸ್ಸಿಗೆ ಹಾನಿ ಮಾಡಿಕೊಳ್ಳುವಿರಿ. ಸನ್ನಿವೇಶವನ್ನು ತಾಳ್ಮೆಯಿಂದ ಅವಲೋಕಿಸಿದ ನಂತರವೇ ಯಾವುದೇ ನಿರ್ಣಯವನ್ನು ಕೈಗೊಳ್ಳಿ.
ವೃಶ್ಚಿಕ: ಖರ್ಚು ವಿಪರೀತ ಹೆಚ್ಚಾಗಲಿದೆ. ಊಟ- ತಿಂಡಿ, ಮನರಂಜನೆ, ಕುಟುಂಬದವರ ಸಂತೋಷಕ್ಕಾಗಿ ಖರ್ಚಾಗಲಿದೆ. ನಿಮ್ಮ ಪಾಲಿನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಿದ್ದೀರಿ. ಭವಿಷ್ಯದಲ್ಲಿ ಹೀಗೇ ಆಗಬಹುದು ಎಂದು ನೀವು ಊಹಿಸಿದ್ದ ಸಂಗತಿಗಳು ನಿಜವಾಗುತ್ತಾ ಬರುತ್ತವೆ.
ಧನು: ವ್ಯಾಮೋಹದ ಕಾರಣಕ್ಕೆ ಅವಮಾನಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಪ್ರೀತಿ- ಪ್ರೇಮ ಪ್ರಕರಣಗಳಿಂದ ಈಗಾಗಲೇ ಹೊರಬಂದಿದ್ದರೆ ಅಥವಾ ಅದೇ ನೆನಪಿನಲ್ಲಿ ಇರುವವರಿಗೆ ಮಾನಸಿಕವಾಗಿ ಒತ್ತಡದ ದಿನ. ಹೇಳಿಕೊಳ್ಳಲಾಗದ ಮಾನಸಿಕ ನೋವು ನಿಮ್ಮನ್ನು ಬೆಂಬಿಡದೆ ಕಾಡಲಿದೆ.
ಮಕರ:ಮಿತ್ರರು-ಸಂಬಂಧಿಗಳಮಾತನ್ನು ಕೇಳಿಸಿಕೊಳ್ಳಿ. ಅಗತ್ಯ ಕಂಡುಬAದಲ್ಲಿ ಅವರ ಸಲಹೆಯನ್ನು ಪಾಲಿಸಿ. ನಿಮ್ಮ ಅನುಭವ ಹಾಗೂ ಬುದ್ಧಿವಂತಿಕೆ ಮೇಲೆ ಅವಲಂಬನೆ ಸರಿ. ಆದರೆ ಎಲ್ಲರಿಗೆ ಎಲ್ಲವೂ ಗೊತ್ತಿರುವುದಿಲ್ಲ. ಆ ಕಾರಣದಿಂದ ಇತರರ ಸಲಹೆಯನ್ನೂ ಗಂಭೀರವಾಗಿ ಪರಿಗಣಿಸಿ.
ಕುಂಭ: ಈ ದಿನ ಒಂದರ ಮೇಲೊಂದು ಕೆಲಸ ನಿಮಗೆ ಬರಬಹುದು. ಅಥವಾ ನೀವೇ ಮೈ ಮೇಲೆ ಎಳೆದುಕೊಂಡು ಮಾಡುತ್ತೀರಿ. ಸ್ವತಂತ್ರ ಆಲೋಚನೆ, ಚಿಂತನೆ ಮೂಲಕ ಹಲವು ಸಮಸ್ಯೆಗಳನ್ನು ಬಗೆಹರಿಸುತ್ತೀರಿ. ವಿಪರೀತ ಹಣ ಮಾಡುವುದು ಹೇಗೆ ಎಂಬ ನಿಮ್ಮ ಬಹು ದಿನದ ಪ್ರಶ್ನೆಗೆ ಉತ್ತರ ದೊರೆಯಲಿದೆ.
ಮೀನ: ನಿಮ್ಮ ಬೆಳವಣಿಗೆ ಕಂಡು ಇತರರು ಹೊಟ್ಟೆ ಕಿಚ್ಚು ಪಡುತ್ತಾರೆ. ಸ್ವಂತ ವಿಷಯಗಳನ್ನು, ಗುಟ್ಟಿನ ಸಂಗತಿಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ. ಔಷಧ- ಮಾತ್ರೆ ಸೇವನೆ ಮಾಡುವಾಗ ಸರಿಯಾಗಿ ಪರೀಕ್ಷೆ ಮಾಡಿ. ಔಷಧ- ವೈದ್ಯರನ್ನು ಬದಲಿಸುವ ನಿರ್ಧಾರ ಮಾಡಿದ್ದರೆ ಈ ದಿನ ಬೇಡ.