ಮೇಷ ರಾಶಿ: ನೀವು ಆಡಿದ ಮಾತುಗಳು ಎಲ್ಲವೂ ಸತ್ಯವಾಗುವಂತೆ ನಿಮಗೆ ಅನ್ನಿಸುವುದು. ಇಂದು ನಿಮಗೆ ಪ್ರಭಾವಿಗಳ ಭೇಟಿಯಾಗಲಿದೆ. ಅತಿಯಾಗಿ ಉದ್ಯೋಗವನ್ನು ಬದಲಾಯಿಸುವುದು ಸೂಕ್ತವಲ್ಲ. ದಿನ ಇತರರಿಂದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ಇಂದು ಒಂದುರೀತು ಆತಂಕ ಮತ್ತು ಉದ್ವೇಗ ಇರಲಿದೆ. ಅಪಾಯಗಳನ್ನು ತೆಗೆದುಕೊಳ್ಳಬೇಡ. ಅಮೂಲ್ಯವಾದ ನಿಮ್ಮ ವಸ್ತುವು ಕಾಣಿಸದೇ ಇದ್ದೀತು ಅಥವಾ ಕಳ್ಳತನವೂ ಆಗಬಹುದು. ಮಕ್ಕಳಿಂದ ನಿಮಗೆ ಪ್ರಶಂಸೆಯು ಸಿಗಬಹುದು. ವ್ಯವಹಾರವನ್ನು ನೀವು ನಿಭಾಯಿಸಲು ಕಷ್ಟವಾದೀತು. ಅನಾರೋಗ್ಯವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು. ಅತಿಯಾದ ಆತ್ಮವಿಶ್ವಾಸವೇ ವಿದ್ಯಾರ್ಥಿಗಳಿಗೆ ಕಂಟಕವಾದೀತು. ಮಾನಸಿಕ ಒತ್ತಡವನ್ನು ನಿಯಂತ್ರಣಕ್ಕೆ ತಂದುಕೊಳ್ಳುವುದು ಉತ್ತಮ. ನಿಮ್ಮ ನೆಚ್ಚಿನ ಜನರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಯಾರ ಮೇಲೂ ನಿಮ್ಮದೇ ಆದ ನಿಲವು ಬೇಡ.
ವೃಷಭ ರಾಶಿ: ಇಂದು ಬಹಳ ಸುಖವಾಗಿರುವ ದಿನ. ನೀವೇ ಶ್ರೇಷ್ಠ ಎಂಬ ಭಾವನೆ ನಿಮಗೆ ಬರಲಿದೆ. ನಿಮಗೆ ಪ್ರಶಂಸೆಗಳು ಸಿಗಲಿವೆ. ಸೃಜನಶೀಲ ಕೆಲಸದಿಂದ ಯಶಸ್ಸು ಸಿಗಲಿದೆ. ರಪ್ತು ಕಾರ್ಯದಿಂದ ಲಾಭವನ್ನು ಪಡೆಯುವಿರಿ. ಕೆಲಸದಲ್ಲಿ ತಾಳ್ಮೆಯಿಂದ ವರ್ತಿಸುವುದರಿಂದ ಯಶಸ್ಸು ಸಿಗುತ್ತದೆ. ನಿಮ್ಮ ತಲೆಯಲ್ಲಿ ನೂರಾರು ಆಲೋಚನೆಗಳು ಇದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಸಮಯವು ಹಿಡಿಯಬಹುದು. ಬೇಡಿಕೆಗೆ ತಕ್ಕ ಪೂರೈಕೆ ಇರಲಿ. ಕಛೇರಿಯಲ್ಲಿ ನಿಮಗೆ ಸಹಾಯವನ್ನು ಮಾಡಲು ಬರಬಹುದು. ಸ್ತ್ರೀಯರು ತಮ್ಮ ಅನುಕೂಲತೆಗಳನ್ನು ಕೆಲಸಮಾಡುವರು. ಸಮಯಕ್ಕೆ ಗೌರವವನ್ನು ಕೊಡಿ. ನಿಮ್ಮನ್ನು ದ್ವೇಷಿಸುವವರು ನಿಮ್ಮೆದುರೇ ಬರಬಹುದು. ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ಉತ್ತಮ. ಇಂದಿನ ಸ್ನೇಹಿತರ ಭೇಟಿಯಿಂದ ನಿಮ್ಮಲ್ಲಿ ಉತ್ಸಾಹವನ್ನು ಜಾಗರೂಕಗೊಳಿಸುವುದು. ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಸಿಲುಕುವಿರಿ.
ಮಿಥುನ ರಾಶಿ: ನೀವು ಇಂದು ಹೊಸ ಪಾಲುದಾರಿಕೆಯಲ್ಲಿ ಕೆಲಸವನ್ನು ಆರಂಭಿಸಲು ಯೋಚಿಸುವಿರಿ. ಚರಾಸ್ತಿಯಿಂದ ಲಾಭವನ್ನು ಪಡೆಯುವಿರಿ. ಪರೀಕ್ಷೆಗಾಗಿ ನಿಮ್ಮ ಶ್ರಮ ಸಾಲದಾಗುವುದು. ಹಿರಿಯರು ನಿಮಗೆ ಕಾಲಕ್ಕೆ ಬೇಕಾದುದನ್ನು ಹೇಳಿಕೊಟ್ಟಾರು. ಸರಳತೆಯನ್ನು ರೂಢಿಸಿಕೊಳ್ಳಲು ನಿಮಗೆ ಇಷ್ಟವಿದ್ದರೂ ನಿಮ್ಮವರು ಅದನ್ನು ಬಿಡರು. ಉಪಯುಕ್ತವಾದ ತಂತ್ರಾಂಶವನ್ನು ನೀವು ಪಡೆಯುವಿರಿ. ನಿಮ್ಮ ಸಮಯವನ್ನು ಇತರರಿಗೆ ನೀಡುವುದು ಅಪ್ರಯೋಜಕ ಎನಿಸಬಹುದು. ನಿಮ್ಮ ಹಾಸ್ಯ ಪ್ರವೃತ್ತಿಯು ಬೇಸರವನ್ನು ತರಿಸೀತು. ಒಳ್ಳೆಯದನ್ನು ನೀವು ಎದುರು ನೋಡುತ್ತಿರಬಹುದು. ಅಕಾರಣ ಸಂತೋಷವು ನಿಮಗೆ ಆತಂಕವನ್ನು ತಂದುಕೊಟ್ಟೀತು. ಪ್ರೇಮಿಗಳು ಇಂದು ಒಟ್ಟಿಗೇ ಹೆಚ್ಚು ಕಾಲ ಕಳೆಯುವರು. ನಿಮ್ಮ ಕೊರತೆಯೇ ನಿಮಗೆ ಶಾಪವಾಗಬಹುದು. ಕೇಳಿದಷ್ಟು ಹಣವನ್ನು ಕೊಟ್ಟು ಹೊಸ ವಸ್ತುವನ್ನು ಖರೀದಿಸುವಿರಿ. ಏಕಾಂತವಾಗಿ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ಉದ್ಯೋಗದ ಕಾರಣದಿಂದ ಬೇರೆ ಕಡೆ ಇದ್ದರೂ ಮನೆಯ ನೆನಪು ಬರಬಹುದು.
ಕಟಕ ರಾಶಿ: ನಿಮ್ಮ ಆತುರವು ಕೆಲಸವನ್ನು ಹಾಳುಮಾಡಿಕೊಳ್ಳಲು ಸಾಕು. ರಾಜಕೀಯ ಕುಟಂಬದ ವ್ಯಕ್ತಿಯನ್ನು ನೀವು ಭೇಟಿ ಮಾಡಲಿದ್ದು ಕೆಲವು ಅನುಕೂಲತೆಗಳು ಆಗಲಿವೆ. ಇಂದು ಪ್ರೇಮ ಸಂಬಂಧಗಳು ಹೊಂದಾಣಿಕೆಯಾಗುತ್ತವೆ. ಸರ್ಕಾರಿ ಕೆಲಸಗಳು ಅಂದುಕೊಂಡಂತೆ ವೇಗವಾಗಿ ಮುಂದುವರಿಯುವುದು. ವ್ಯಾಪಾರದಲ್ಲಿ ಶಿಸ್ತು ಅವಶ್ಯಕ ನಡೆಯಲಿದೆ. ಅಪಾಯಗಳನ್ನು ತೆಗದುಕೊಂಡು ಕಾರ್ಯವನ್ನು ಮಾಡುವಿರಿ. ನೀವು ಮಕ್ಕಳಿಂದ ಸಹಾಯ ಪಡೆಯುತ್ತೀರಿ. ನಿಮಗಾದ ಅವಮಾನವು ನಿಮ್ಮನ್ನು ಹಠವಾದಿಯನ್ನಾಗಿ ಮಾಡಿದೆ. ವಿವಾಹಕ್ಕೆ ಸಂಬಂಧಿಸಿದ ಮಾತುಗಳನ್ನು ನೀವು ಕೇಳಿದರೂ ಯಾವ ಪ್ರತಿಕ್ರಿಯೆಯು ನಿಮ್ಮಿಂದ ಬಾರದು. ಹಣಕಾಸಿನ ವಿಚಾರದಲ್ಲಿ ಆದಾಯ ಮತ್ತು ಖರ್ಚುಗಳು ಸಮವಾಗಿರಲಿದೆ. ಸಮಯೋಚಿತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೆಟ್ಟವರ ಸಹವಾಸವು ನಿಮಗೆ ಗೊತ್ತಿಲ್ಲದೇ ಆಗಬಹುದು.
ಸಿಂಹ ರಾಶಿ: ಇಂದು ನಿಮ್ಮವರು ಯಾರು ಮತ್ತು ನಿಮ್ಮವರಂತೆ ಕಾಣುವವರು ಯಾರು ಎಂಬುದರ ಸ್ಪಷ್ಟ ನಿಲುವು ಇರಲಿದೆ. ಮಕ್ಕಳಿಗೆ ನಿಮ್ಮ ಪ್ರೀತಿ ಹೆಚ್ಚಾಗುವುದು. ನಿಮ್ಮ ಕೆಲಸದ ಸಮಯವನ್ನು ಸರಿಮಾಡಿಕೊಳ್ಳಬೇಕಾಗುವುದು. ವಿದ್ಯುತ್ ಉಪಕರಣದಿಂದ ಜಾಗರೂಕತೆ ಅವಶ್ಯಕ. ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ವಾದ ಮಾಡಬೇಡಿ. ನಿಮ್ಮ ಮೇಲೆ ನಿಮಗೆ ನಂಬಿಕೆಯು ಕಡಿಮೆಯಾಗುವುದು. ಹೊಸತನ್ನು ಕಲಿಯುವ ಬಯಕೆ ಇದ್ದರೂ ಸಮಯ, ವ್ಯವಸ್ಥೆಯು ಕಷ್ಟವಾದೀತು. ಯಾವ ಒತ್ತಡವೂ ನಿಮ್ಮನ್ನು ಏನೂ ಮಾಡಲಾಗದು. ನೇರ ನುಡಿಯನ್ನು ನಿಮ್ಮಿಂದ ಇಷ್ಟಪಡರು. ಉದ್ಯೋಗದಲ್ಲಿ ನೆಮ್ಮದಿ ಇದ್ದರೂ ಆದಾಯವು ಅಧಿಕವಿಲ್ಲ ಎಂಬ ಕೊರಗು ಇರಬಹುದು. ಹೆಚ್ಚಿ ಆದಾಯಕ್ಕೆ ದಿನ ಉಳಿದ ಸಮಯವನ್ನು ಬಳಸಿಕೊಲ್ಳಬಹುದು. ನಿಮ್ಮ ನಿರ್ಧಾರಗಳು ಅಸ್ಪಷ್ಟವಾಗಿ ಇರಲಿದೆ. ಮಾನಸಿಕ ಒತ್ತಡದಿಂದ ನೀವು ಹೊರಬರಲು ಕಷ್ಟವಾದೀತು. ಮನೋರಂಜನೆಯಲ್ಲಿ ನೀವು ಪಾಲ್ಗೊಳ್ಳುವಿರಿ. ಖರ್ಚಿನ ಮೇಲೆ ನಿಯಂತ್ರಣ ಸಾಧಿಸಬೇಕಾಗಿ ಬರಬಹುದು.
ಕನ್ಯಾ ರಾಶಿ: ನಿಮಗೆ ಭೂ ವ್ಯವಹಾರದಲ್ಲಿ ಸರಿಯಾದ ಮಾಹಿತಿ ಸಿಗದೇ ಮೋಸಹೋಗಬಹುದು. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚುತ್ತದೆ. ರಾಜಕೀಯ ವ್ಯಕ್ತಿಗಳಿಂದ ಉದ್ಯಮಕ್ಕೆ ಬಂದ ಅಡೆತಡೆಗಳು ನಿವಾರಣೆಯಾಗಲಿವೆ. ನಿಮ್ಮ ಬುದ್ಧಿವಂತಿಕೆಯಿಂದ ಯಶಸ್ಸಿನ ಅವಕಾಶಗಳನ್ನು ಸೃಷ್ಟಿಸುತ್ತದೆ ಪ್ರಯಾಣವು ನೋವಿನಿಂದ ಕೂಡಿದೆ, ಹಾಗಾಗಿ ಬಿಟ್ಟುಬಿಡಿ. ವ್ಯಾಪಾರ ಲಾಭದಾಯಕವಾಗಲಿದೆ. ಅಧಿಕಾರದ ಆಸೆಯಿಂದ ಅವ್ಯವಹಾರವನ್ನು ಮಾಡುವುದು ಬೇಡ. ಸಂಕುಚಿತ ಸ್ವಭಾವವು ನಿಮಗೆ ಅನೇಕ ಅವಕಾಶವನ್ನು ತಪ್ಪಿಸೀತು. ಸಂಗಾತಿಗಾಗಿ ಹಣವನ್ನು ಖರ್ಚುಮಾಡುವಿರಿ. ಹಣಕಾಸಿನ ಗೊಂದಲಕ್ಕೆ ಸರಿಯಾದ ತೆರೆ ಬೀಳಲಿದೆ. ಹೋಗುವ ಕೆಲಸವು ಇಂದು ಪೂರ್ಣವಾಗದೇ ಹೋದೀತು. ನಿಮ್ಮ ದುರ್ದೈವಕ್ಕೆ ಯಾರನ್ನೋ ಹೀಗಳೆಯುವುದು ಯೋಗ್ಯವಲ್ಲ. ಕೇವಲ ಕಲ್ಪನೆಯಿಂದ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಬೇಕಾಗಬಹುದು. ಹೊರಗಿನ ತ್ರುಗಳಿಗಿಂತ ಒಳಗಿನ ಶತ್ರುಗಳ ಬಗ್ಗೆ ಎಚ್ಚರ ಅವಶ್ಯಕ.
ತುಲಾ ರಾಶಿ: ನಿಮ್ಮ ಹೊಸ ಒಪ್ಪಂದಗಳು ಕೈಗೂಡದೇ ಹೋಗಬಹುದು. ದೂರ ಪ್ರಯಾಣವು ನಿಮ್ಮ ಇಚ್ಛೆಯಾಗಲಿದೆ. ಯಾವುದೇ ತೊಂದರೆಗೆ ಸಿಲುಕದೇ ಇರುವಂತೆ ನೋಡಿಕೊಳ್ಳಿ. ನಿಮ್ಮ ಶತ್ರುಗಳನ್ನು ಅನ್ಯರಿಂದ ತಿಳಿದುಕೊಳ್ಳುವಿರಿ. ನಿಮ್ಮ ನಿಖರತೆಯ ಅಂಕಿ ಅಂಶಗಳು ಅಚ್ಚರಿ ಕೊಡಬಹುದು. ನಿಮ್ಮ ಸಂಗಾತಿಯನ್ನು ನೋಡಿಕೊಳ್ಳಿ. ಧಾರ್ಮಿಕವಾಗಿ ನೀವು ಏನನ್ನಾದರೂ ದೈವಜ್ಞರ, ಹಿರಿಯರ ಸಲಹೆಯನ್ನು ಪಡೆದು ಮಾಡಿ. ಹೆಚ್ಚು ಮಾತನಾಡುವುದರಿಂದ ಸಮಯವೂ ವ್ಯರ್ಥ, ಆಯಾಸವೂ ಆದೀತು. ಒಂಟಿಯಾಗಿ ನೀವು ಎಲ್ಲಿಗೂ ಹೋಗುವುದು ಬೇಡ. ಆಪ್ತ ಬಂಧುವನ್ನು ನೀವು ಕಳೆದುಕೊಳ್ಳುವಿರಿ. ಮಕ್ಕಳಿಗೆ ಹಣವನ್ನು ಕೊಟ್ಟು ತಪ್ಪು ದಾರಿಗೆ ಕಳುಹಿಸುವಿರಿ. ನಿಮ್ಮ ಬಗೆಗಿನ ಪೊಳ್ಳು ಹೇಳಿಕೆಗಳು ನಿಲ್ಲದೇ ಹೋಗಬಹುದು. ನಿರ್ಮಾಣ ವ್ಯವಸ್ಥೆಯಲ್ಲಿ ಇರುವವರಿಗೆ ಸ್ವಲ್ಪ ಹಿನ್ನಡೆಯಾಗಲಿದೆ. ನಿಮಗೆ ಸಂಬಂಧವಿಲ್ಲದ ವಿಚಾರದಲ್ಲಿ ಹಣವನ್ನು ಕಳೆದುಕೊಳ್ಳಬೇಕಾಗಬಹುದು.
ವೃಶ್ಚಿಕ ರಾಶಿ: ಇಂದು ನಿಮ್ಮ ಹಲವು ಪ್ರಯತ್ನಕ್ಕೆ ಪ್ರತಿಫಲ ಸಿಗಲಿದೆ. ವ್ಯವಸ್ಥಿತ ವ್ಯಾಪಾರವು ನಿಮಗೆ ಆದಾಯಕ್ಕಿಂತ ಹೆಚ್ಚಾಗಿ ನೆಮ್ಮದಿ ಕೊಡುವುದು. ಇದರಿಂದ ಆದಾಯೂ ಹೆಚ್ಚಲಿದೆ. ಹೊರಗೂ ನೀವು ಸಂತೋಷವಾಗಿರಲಿ ಮುಕ್ತವಾಗಿ ಮಾತನಾಡಲು ಇಷ್ಟಪಡುವಿರಿ. ಬಹಳ ದಿನಗಳ ಸಂಬಂಧವು ಹಳಸಿಹೋಗುವ ಸಾಧ್ಯತೆ ಇದೆ. ಅಪರಿಚಿತ ವ್ಯಕ್ತಿಗಳು ಉದ್ಯೋಗಕ್ಕೆ ಒತ್ತಾಯ ಮಾಡಬಹುದು. ಪಿತ್ರಾರ್ಜಿತ ಆಸ್ತಿಯ ಅನುಭವಿಸುವ ಬಯಕೆಯನ್ನು ಇಟ್ಟುಕೊಂಡಿದ್ದರೆ ಸ್ವಲ್ಪ ಸಮಯ ಕಾಯಬೇಕಾದೀತು. ಅಪರೂಪಕ್ಕೆ ಬಂದ ಅವಕಾಶದಲ್ಲಿ ಆಯ್ಕೆ ಮಾಡುತ್ತ ಇರುವುದು ಬೇಡ. ಉದ್ವೇಗದಲ್ಲಿ ಏನ್ನಾದರೂ ಮಾಡಿಕೊಳ್ಳಲು ಹೋಗಬೇಡಿ. ಹೂಡಿಕೆಯಿಂದ ನಿಮಗೆ ಲಾಭಾಂಶವು ಸಿಗುವುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಓದಿ ಜೀರ್ಣಿಸಿಕೊಳ್ಳಲು ಆಗದು.
ಧನು ರಾಶಿ: ಇಂದು ಯಂತ್ರೋಪಕರಣಗಳನ್ನು ಉಪಯೋಗಿಸುವಾಗ ಜಾಗರೂಕರಾಗಿರಬೇಕು. ನಿಮ್ಮ ಅಮೂಲ್ಯ ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಕಷ್ಟವಾಗುವುದು. ಆರೋಗ್ಯಕ್ಕಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಬೇಕಾಗುವುದು. ಮೊಂಡು ವಾದವನ್ನು ಹಿರಿಯರ ಜೊತೆ ಮಾಡಬೇಡಿ. ಸರಿಮಾಡಿಕೊಳ್ಳುವ ಬಗ್ಗೆ ಚಿಂತಿಸಿ. ಸಂತೋಷವನ್ನು ಅನುಭವಿಸಬೇಕೆಂದು ಏನನ್ನಾದರೂ ಮಾಡಲು ಹೋಗಬೇಕಾದೀತು. ನಿಮ್ಮ ನಡತೆಯ ಬಗ್ಗೆ ನಿಮಗೆ ಗೊತ್ತಿರಲಿ. ಕುಟುಂಬದ ಬಗ್ಗೆ ನಿಮಗೆ ಒಳ್ಳೆಯ ಮನಸ್ಸು ಇರದು. ಸಹೋದರನಿಂದ ಸಹಾಯವಾಗಲಿದೆ. ವಿವಾಹಕ್ಕೆ ಮಾತುಕತೆಗಳು ನಡೆಯುವುದು. ಗೆಳೆತನಕ್ಕೆ ಒಳ್ಳೆಯ ವ್ಯಕ್ತಿಗಳು ಸಿಗಬಹುದು. ಆರೋಗ್ಯದ ಮೇಲೆ ಗಮನವಿರಲಿ. ಆಧಿಕ ಖರ್ಚನ್ನು ಮಾಡಿಕೊಳ್ಳುವುದು ಬೇಡ. ನಿಮ್ಮ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಕಳೆದುಕೊಂಡಿದ್ದನ್ನು ಮತ್ತೆ ಪಡೆಯುವ ಆಸೆ ಇರಲಿದೆ.
ಮಕರ ರಾಶಿ: ಇಂದು ಅದೃಷ್ಟವನ್ನು ನಿಮ್ಮದಾಗಿಸಿಕೊಳ್ಳು ಪ್ರಯತ್ನಗಳು ಸಫಲವಾಗಲಿದೆ. ನೀವು ನಿಮ್ಮನ್ನು ಇಷ್ಟಪಡುವವರಿಂದ ಉಡುಗೊರೆ ಬರಲಿದೆ. ಹೂಡಿಕೆಯಲ್ಲಿ ನಿಮ್ಮ ಬುದ್ಧಿ ಚಂಚಲವಾಗಲಿದೆ. ಇಂದಿನ ಪ್ರಮುಖ ಕೆಲಸವು ವ್ಯತ್ಯಾಸ ಆಗಬಹುದು. ಇನ್ನೊಬ್ಬರ ಮೇಲೆಕರುಣೆ ಬರಬಹುದು. ಆಪ್ತರಿಗೆ ಧನಸಹಾಯವನ್ನು ಮಾಡುವಿರಿ. ತಣ್ಣೀರಿನ್ನೂ ತಣಿಸಿ ಕುಡಿಯುವ ಸಂದರ್ಭವು ಬರಬಹುದು. ಅನಗತ್ಯ ವಿಷಯಕ್ಕೆ ತಲೆ ಹಾಕುವುದು ಬೇಡ. ನಿರಂತರ ಕೆಲಸದ ಪರಿಣಾಮ ನಿಮಗೆ ಫಲ ಸಿಗಬಹುದು. ನಿಮ್ಮ ಸಂಪೂರ್ಣ ಗಮನವು ವೈಯಕ್ತಿಕ ವಿಷಯಗಳ ಮೇಲೆ ಇರುತ್ತದೆ. ಮಕ್ಕಳ ಪಕ್ಷದಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ನಿಮ್ಮ ಸಂಗಾತಿಯಿಂದ ನೀವು ಎಲ್ಲದಕ್ಕೂ ಬೆಂಬಲ ಪಡೆಯುವಿರಿ.
ಕುಂಭ ರಾಶಿ: ಬಹಳ ದಿನಗಳಿಂದ ಮರೆತುಹೋದ ಸ್ನೇಹಿತರನ್ನು ಅನಿರೀಕ್ಷೀತ ಭೇಟಿಯಾಗುವಿರಿ. ನೀವು ಜೀವನಕ್ಕೆ ಬೇಕಾದ ಉಪಯುಕ್ತ ಮಾಹಿತಿಯನ್ನು ಪಡೆಯುವಿರಿ. ನಿಮ್ಮ ವೇತನದ ಮೌಲ್ಯ ಹೆಚ್ಚಾಗಲಿದೆ. ವ್ಯಾಪಾರ ಚೆನ್ನಾಗಿ ನಡೆಯಲಿದೆ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಗಳು ಬರಬಹುದು. ಸರ್ಕಾರಿ ಉದ್ಯೋಗಿಗಳಿಗೆ ಸಂತೋಷದ ಸುದ್ದಿ ಬರಬಹುದು. ಅಧಿಕ ಶ್ರಮದಿಂದ ಅಲ್ಪ ಲಾಭವನ್ನು ನೀವು ಗಳಿಸುವಿರಿ. ಬುದ್ಧಿಪೂರ್ವಕವಾಗಿ ಕೆಲಸವನ್ನು ಬದಲಾಯಿಸುವಿರಿ. ನೋವನ್ನು ನುಂಗುವುದು ನಿಮಗೆ ಸಹಜವಾಗಲಿದೆ. ಹಳೆಯ ನೋವಿನಿಂದ ನೀವು ಬಳಲಬಹುದು. ಕುಟುಂಬದವರ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ ಸೌಲಭ್ಯಗಳನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮ್ಮ ಸುಳ್ಳನ್ನು ಯಾರಾದರೂ ನಂಬಬಹುದು. ಆಕಸ್ಮಿಕ ಧನಲಾಭದಿಂದ ಸಂತಸವು ಇರಲಿದೆ. ಮನಸ್ಸು ಬಹಳ ಉತ್ಸಾಹದಿಂದ ಇರಲಿದೆ.
ಮೀನ ರಾಶಿ: ಆದಾಯಕ್ಕೆ ಇರುವ ಸುಲಭ ಮಾರ್ಗವನ್ನು ಅನ್ವೇಷಣೆ ಮಾಡುವಿರಿ. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳಿಗೆ ಸಹಾಯ ಮಾಡಬೇಕಾಗಬಹುದು. ಕಳೆದುದರ ಬಗ್ಗೆ ನಿಮಗೆ ಚಿಂತೆ ಇರದಿದ್ದರೂ ಅದು ನಿಮ್ಮನ್ನು ಕಾಡಬಹುದು. ಅನಿರೀಕ್ಷಿತ ವಾರ್ತೆಯು ನಿಮ್ಮ ಕೆಲಸವನ್ನು ವ್ಯತ್ಯಾಸ ಮಾಡೀತು. ಭೂಮಿಯ ವಿಚಾರದಲ್ಲಿ ನೀವು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಿ. ನೀವು ಹಾಕಿಕೊಂಡ ಕಾರ್ಯವು ಆಗದೇಹೋಗುವುದು. ಸಮಸ್ಯೆಯನ್ನು ಆಪ್ತರ ಜೊತೆ ಸಮಾಲೋಚನೆ ಮಾಡಿಕೊಂಡು ಮುಂದುವರಿಯಿರಿ. ನಿಮ್ಮ ನಿಷ್ಪಕ್ಷಪಾತ ಧೋರಣೆಯು ಕೆಲವರಿಗೆ ಇಷ್ಟವಾದೀತು. ನಿಮ್ಮ ನಿರ್ಧರಗಳಿಗೆ ನೀವು ಬದ್ಧರಾಗಿರುವಿರಿ. ಸಂತಾನ ಸುದ್ದಿಯು ನಿಮಗೆ ಖುಷಿ ಕೊಟ್ಟೀತು. ಇಂದು ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಮನೆಯ ಹೊರಗೆ ಇಂದು ಹೆಚ್ಚು ಸುತ್ತಾಡುವಿರಿ. ಆಯಾಸವು ಅಧಿಕವಾಗುವುದು. ಸಂತೋಷ ಇರುತ್ತದೆ. ಭೂಮಿ ಮತ್ತು ವಸತಿ ಸಮಸ್ಯೆ ಇರಬಹುದು.