ಮೇಷ
ಪಾರ್ಟನರ್ ಷಿಪ್ ವ್ಯವಹಾರ ಆರಂಭಿಸುವುದಕ್ಕೆ ಉತ್ಸಾಹ ಮೂಡುತ್ತದೆ. ಅಂದುಕೊಳ್ಳದ ರೀತಿಯಲ್ಲಿ ಹಣಕಾಸು ದೊರೆಯುತ್ತದೆ. ದೈವ ಅನುಗ್ರಹ ಇದ್ದು, ಮಕ್ಕಳ ಪ್ರಗತಿಯಿಂದ ಸಮಾಧಾನ ಹಾಗೂ ಸಂತಸ ಇದೆ.
ವೃಷಭ
ಸಹಾಯ ಅಥವಾ ನೆರವು ಕೇಳಿದವರನ್ನು ಆಗಲ್ಲ ಎಂದು ಹೇಳಿ ಕಳಿಸಬೇಡಿ. ಸ್ವಲ್ಪ ಮಟ್ಟಿಗೆ ಸೋಮಾರಿತನ ಈ ದಿನ ನಿಮ್ಮನ್ನು ಕಾಡಬಹುದು. ಕಾರ್ಯ ಸಾಧನೆಗಾಗಿ ಪ್ರಯಾಣ ಮಾಡಬೇಕಾಗಿ ಬರುತ್ತದೆ. ದಿಢೀರ್ ಪ್ರಯಾಣದಿಂದ ಸುಸ್ತು ಕಾಣಿಸಿಕೊಳ್ಳಬಹುದು.
ಮಿಥುನ
ಈ ದಿನ ಕುಟುಂಬ ಸದಸ್ಯರ ಬೆಂಬಲ ನಿಮ್ಮ ಪಾಲಿಗೆ ಸಿಗಲಿದ್ದು, ಎಲ್ಲ ಕೆಲಸಗಳಲ್ಲಿ ಉತ್ಸಾಹ ಬರುತ್ತದೆ. ಆದರೆ ತೀರ್ಮಾನ ಕೈಗೊಳ್ಳುವಾಗ ಸಾಧಕ-ಬಾಧಕಗಳ ಬಗ್ಗೆ ಚೆನ್ನಾಗಿ ಆಲೋಚನೆ ಮಾಡಲೇಬೇಕು. ಔತಣ ಕೂಟಗಳಿಗೆ ಆಹ್ವಾನ ಬರಬಹುದು.
ಕರ್ಕಾಟಕ
ಕೆಲಸದಲ್ಲಿ ಒತ್ತಡ ಕಾಣಿಸಿಕೊಂಡರೂ ಸಹೋದ್ಯೋಗಿಗಳು ನಿಮ್ಮ ನೆರವಿಗೆ ನಿಲ್ಲುವುದರಿಂದ ಅವು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಭವಿಷ್ಯದಲ್ಲಿ ಆಗಬಹುದಾದ ಹಲವು ಸಂಗತಿಗಳ ಬಗ್ಗೆ ಈ ದಿನ ನಿಮಗೆ ಸುಳಿವು ಸಿಗುತ್ತದೆ. ಕ್ರೀಡಾಳುಗಳಿಗೆ ಉತ್ತಮ ದಿ
ಸಿಂಹ
ನಾನು ಮಾಡಿದ್ದೇ ಸರಿ ಎಂಬ ಧೋರಣೆ ಬಿಡಬೇಕು. ತೀರ್ಥಕ್ಷೇತ್ರ ಹಾಗೂ ಮನೆ ದೇವರ ಗುಡಿಗೆ ಹೋಗುವ ಸಾಧ್ಯತೆ ಇದೆ. ನಿಮ್ಮ ನಿರ್ಧಾರಗಳಿಗೆ ಬಾಳಸಂಗಾತಿ ಉತ್ತಮವಾದ ಸಲಹೆ-ಸಹಕಾರ ನೀಡುತ್ತಾರೆ. ಹಣಕಾಸು ಸಮಸ್ಯೆ ಕಡಿಮೆ ಆಗುತ್ತದೆ.
ಕನ್ಯಾ
ಅಗತ್ಯವಾದ ತೀರ್ಮಾನಗಳನ್ನು ಇಂದು ಕಡ್ಡಾಯವಾಗಿ ಕೈಗೊಳ್ಳಿ. ಯಾವುದೇ ಕಾರಣಕ್ಕೆ ಮುಂದಕ್ಕೆ ಹಾಕಬೇಡಿ. ಹನುಮಂತನ ದರ್ಶನ ಮಾಡಿ, ಕೈಲಾದ ಸೇವೆ ಮಾಡಿಸಿ. ಮನೆಯಲ್ಲಿ ನೆಮ್ಮದಿ ಹಾಗೂ ಸಮಾಧಾನದ ವಾತಾವರಣ ಇರುತ್ತದೆ.
ತುಲಾ
ಲೋಕಾರೂಢಿಯ ವ್ಯವಹಾರವನ್ನು ಗೊತ್ತಿದ್ದೂ ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಉದ್ಯಮ-ವ್ಯಾಪಾರದಲ್ಲಿನ ನಿಮ್ಮ ತಂತ್ರಗಳು ಫಲ ನೀಡುವ ಸಮಯ. ಆದರೆ ನಿರ್ಲಕ್ಷ÷್ಯ ಧೋರಣೆ ಬೇಡ. ಇನ್ನೊಬ್ಬರನ್ನು ನಂಬುವಾಗ ಎಚ್ಚರದಿಂದ ವರ್ತಿಸಿ.
ವೃಶ್ಚಿಕ
ಯಾರದೋ ಮೇಲಿನ ಸಿಟ್ಟನ್ನು ಮತ್ಯಾರ ಮೇಲೋ ತೋರಿಸಿದರೆ ಪ್ರಯೋಜನ ಇಲ್ಲ. ಅರ್ಹರ ಮೇಲೆ ನಂಬಿಕೆ ಇಟ್ಟಿದ್ದರೆ ಪರವಾಗಿಲ್ಲ. ಹಾಗಿಲ್ಲದಿದ್ದರೆ ವಂಚನೆಗೊಳಗಾಗಿರುವುದು ಗೊತ್ತಾಗುತ್ತದೆ. ಗುರು-ಹಿರಿಯರ ಸೂಚನೆ ಪಾಲಿಸಿ.
ಧನು
ಸಮಸ್ಯೆ ನಿವಾರಣೆಗಾಗಿ ಹಣಕಾಸಿನ ನೆರವು ಕೇಳಿದ್ದರೆ ಈ ದಿನ ಆ ಬಗ್ಗೆ ಶುಭ ಸುದ್ದಿ ದೊರೆಯಲಿದೆ. ರೈತರಿಗೆ, ಮಾಧ್ಯಮ ರಂಗದಲ್ಲಿ ಇರುವವರಿಗೆ, ಕಲಾವಿದರಿಗೆ ಉತ್ತಮ ದಿನವಾಗಿದೆ. ಮನಸಿಗೆ ಸಮಾಧಾನ ಇರಲಿದೆ.
ಮಕರ
ಯಾವುದನ್ನು ಕಳೆದುಕೊಂಡು ಚಿಂತೆಗೆ ಈಡಾಗಿದ್ದರೋ ಅದು ಪುನಃ ಸಿಗಲಿದೆ. ಉದ್ಯೋಗ ಸ್ಥಳದಲ್ಲಿ ಆಸಕ್ತಿ ಕಳೆದುಕೊಳ್ಳದೆ ಕೆಲಸ ನಿರ್ವಹಿಸಿ. ನಿಮ್ಮ ಕುಟುಂಬದವರು ಯಾವ ಗುರು ಪೀಠಕ್ಕೆ ನಡೆದುಕೊಳ್ಳುತ್ತಾರೋ ಅಲ್ಲಿಗೆ ಸೇವೆ ಮಾಡುವ ಸಂಕಲ್ಪ ಕೈಗೊಳ್ಳಿ.
ಕುಂಭ
ನಿಮ್ಮ ಉದ್ದೇಶ-ಕನಸುಗಳನ್ನು ಸ್ನೇಹಿತರ ಜತೆಗೆ ಹಂಚಿಕೊAಡಿದ್ದರೆ ಅವು ಈಡೇರುವ ಸಾಧ್ಯತೆಗಳಿವೆ. ಕೆಲಸ ಬದಲಾವಣೆಗೆ ಯತ್ನಿಸುತ್ತಿರುವವರಿಗೆ ಶುಭ ಸುದ್ದಿ ದೊರೆಯಲಿದೆ. ಯಾವುದೇ ಕಾರ್ಯ ಸಿದ್ಧಿಗೆ ತೆರಳುವ ಮುನ್ನ ಮನೆಯ ಹಿರಿಯರ ಆಶೀರ್ವಾದ ಪಡೆಯಿರಿ.
ಮೀನ
ನಿಮ್ಮ ಕೆಲಸ-ಕಾರ್ಯಗಳಿಗೆ ಸ್ನೇಹಿತರು-ಬಂಧುಗಳು ನೆರವಿಗೆ ಬರುತ್ತಾರೆ. ನಿಮಗೆ ಬರಬೇಕಾದ ಬಾಕಿ ಹಣ ವಾಪಸಾಗುವ ಸೂಚನೆ ದೊರೆಯುತ್ತದೆ. ಉತ್ತಮ ಬೆಳವಣಿಗೆಗಳ ಮೂಲಕ ಮನಸಿಗೆ ನೆಮ್ಮದಿ ದೊರೆಯುತ್ತದೆ.