ಮೇಷ
ಯಾವುದೇ ಆತಂಕಗಳಿಲ್ಲದೆ ಮನಸ್ಸಿನಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಆ ನಂಬಿಕೆಯಿAದ ಮಾಡಿದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಂಡು ಲಾಭ ತರುತ್ತವೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಇದ್ದಲ್ಲಿ ಬಗೆಹರಿಸಿಕೊಳ್ಳುತ್ತೀರಿ. ಬಾಳ ಸಂಗಾತಿ ಬೆಂಬಲ ದೊರೆಯುತ್ತದೆ.
ವೃಷಭ
ನಿಮಗೆ ಆಗಿಬರುವ, ಅನುಭವ ಇರುವ ವ್ಯಾಪಾರ- ವ್ಯವಹಾರಗಳಲ್ಲಷ್ಟೇ ತೊಡಗಿಕೊಳ್ಳಿ. ನಿಮ್ಮ ತಿಳಿವಳಿಕೆ- ಜ್ಞಾನಕ್ಕೆ ಪೂರಕವಾದ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ. ಪೂಜೆ-ಪುನಸ್ಕಾರಗಳಲ್ಲಿ ಭಾಗವಹಿಸುವ ಸಾಧ್ಯತೆ. ಸೋದರ-ಸೋದರಿಯರಿಂದ ನೆರವು ಸಿಗುತ್ತದೆ.
ಮಿಥುನ
ಆರ್ಥಿಕ ಸ್ಥಿತಿಯಲ್ಲಿ ಉತ್ತಮವಾದ ಪ್ರಗತಿ ಇದೆ. ಮನೆಯಲ್ಲೂ ನೆಮ್ಮದಿಯ ವಾತಾವರಣ ಇರಲಿದೆ. ಆದರೆ ಸ್ತಿçÃಯರು ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ಸಿಟ್ಟು ಪಡಬಾರದು. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ್ ಒಂದಕ್ಕೆ ಎರಡು ಬಾರಿ ಯೋಚಿಸಿ.
ಕರ್ಕಾಟಕ
ಬಹಳ ಸಮಯದಿಂದ ನೀವು ಕೈಗೊಳ್ಳಬೇಕಿದ್ದ ಪುಣ್ಯ ಕ್ಷೇತ್ರ ಯಾತ್ರೆಗೆ ಅಂತಿಮ ರೂಪುರೇಷೆ ರೂಪಿಸುತ್ತೀರಿ. ಆಭರಣ ವ್ಯಾಪಾರಿಗಳಿಗೆ ವ್ಯಾಪಾರ ವಿಸ್ತರಣೆಗೆ ಈ ದಿನ ಸೂಕ್ತ. ಸಣ್ಣ ಮಟ್ಟದ ಉದ್ಯಮ-ವ್ಯಾಪಾರ ನಡೆಸುತ್ತಿರುವವರಿಗೆ ಏಳ್ಗೆ. ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.
ಸಿಂಹ
ನಿಮಗೆ ಆಗಬೇಕಾದ ಕೆಲಸಕ್ಕೆ ಸಂಬAಧಿಸಿದ ಇಲಾಖೆಯ ಅಧಿಕಾರಿಗಳು ನೆರವು ನೀಡುತ್ತಾರೆ. ದೂರದ ಊರುಗಳಿಂದ ಬರುವ ನೆಂಟರ ಜತೆ ಸಂತಸದ ಕ್ಷಣಗಳನ್ನು ಕಳೆಯುತ್ತೀರಿ. ಗುರು-ಹಿರಿಯರ ದರ್ಶನ ಮಾಡುತ್ತೀರಿ. ಭೂಮಿಗೆ ಸಂಬAಧಿಸಿದ ಕೆಲಸಗಳನ್ನು ಮಾಡುತ್ತಿರುವವರಿಗೆ ಸಾಮಾನ್ಯ ದಿನ.
ಕನ್ಯಾ
ನೀವು ಎಷ್ಟೇ ನೆನಪಿನ ಶಕ್ತಿ ಇರುವಂಥ ವ್ಯಕ್ತಿ ಆಗಿರಬಹುದು, ವೈದ್ಯರು ನೀಡಿದ ಔಷಧದ ಚೀಟಿ ಇಟ್ಟುಕೊಳ್ಳದೆ ಮೆಡಿಕಲ್ ಶಾಪ್ ಗೆ ಹೋಗಬೇಡಿ. ಅಥವಾ ಸ್ವಯಂ ವೈದ್ಯ ಮಾಡಿಕೊಳ್ಳಬೇಡಿ. ಮನೆಗೆ ನೆಂಟರ ಆಗಮನ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇದೆ.
ತುಲಾ
ಭೂಮಿ ಹಾಗೂ ಆಸ್ತಿಗೆ ಸಂಬAಧಿಸಿದ ವ್ಯವಹಾರ ಮಾಡುತ್ತಿರುವವರಿಗೆ ಹೆಚ್ಚಿನ ಲಾಭ ಸಿಗುವ ಸೂಚನೆ ದೊರೆಯುತ್ತದೆ. ಸಣ್ಣ-ಪುಟ್ಟ ಅನಾರೋಗ್ಯ ಸಮಸ್ಯೆ ಕಾಡಬಹುದು. ಈ ದಿನ ನಿಮ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅದರಲ್ಲೂ ಹೊಸಬರ ಜತೆಗೆ ಎಚ್ಚರವಾಗಿರಿ.
ವೃಶ್ಚಿಕ
ಶತ್ರುಗಳ ಬಾಧೆ ಎದುರಿಸಬೇಕಾಗುತ್ತದೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಹಾನಿ ಆಗಿರುತ್ತದೆ. ಇನ್ನು ಉತ್ತಮ ಕೆಲಸ-ಕಾರ್ಯಗಳಲ್ಲಿ ಪಾಲ್ಗೊಳ್ಳುವ ಅವಕಾಶ-ಆಹ್ವಾನ ಬರುತ್ತದೆ. ಶೈಕ್ಷಣಿಕ ರಂಗದಲ್ಲಿ ಸವಾಲುಗಳಿವೆ. ಖರ್ಚಿನ ವೆಚ್ಚದಲ್ಲಿ ಎಚ್ಚರ.
ಧನು
ಇಡೀ ದಿನ ನಿಮ್ಮ ಪಾಲಿಗೆ ಅದೃಷ್ಟವನ್ನು ತರುತ್ತದೆ. ಕೆಲವು ಉತ್ತಮ ಸುದ್ದಿಯನ್ನು ತರುತ್ತದೆ. ನೀವು ಆರಾಧಿಸುವ ದೇವರ ಅನುಗ್ರಹ ಇದೆ. ಅಂದುಕೊAಡ ಕೆಲಸಗಳೆಲ್ಲ ನಿಗದಿತ ಸಮಯಕ್ಕೆ ಮುಗಿಯುತ್ತದೆ. ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳುತ್ತದೆ. ಬೆಲೆಬಾಳುವ ವಸ್ತುಗಳ ಖರೀದಿ ಮಾಡುವ ಸಾಧ್ಯತೆ ಇದೆ ಅಥವಾ ನಿಮ್ಮ ಆಪ್ತರು ಉಡುಗೊರೆ ನೀಡುತ್ತಾರೆ.
ಮಕರ
ಎಂಜಿನಿಯರಿAಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇನ್ನು ಮಹಿಳೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಜಾಗ್ರತೆಯಾಗಿರಿ. ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಚಿಂತೆ ಮಾಡುವ ಅಗತ್ಯವಿಲ್ಲ. ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಭರವಸೆಯ ಹಾದಿ ಕಾಣುತ್ತದೆ.
ಕುಂಭ
ಈ ದಿನ ಸಾಧ್ಯವಾದಷ್ಟೂ ಮೌನವಾಗಿರುವುದು ಉತ್ತಮ. ನಿಮ್ಮ ಮಾತಿನಲ್ಲೇ ಒಂದು ಬಗೆಯ ಆದೇಶದ ಧೋರಣೆ ಇಣುಕುವುದರಿಂದ ಮನೆಯಲ್ಲಿ ಕಲಹ ಏರ್ಪಡಬಹುದು. ಅದೆಂಥ ಸನ್ನಿವೇಶ ಎದುರಾದರೂ ಸಿಟ್ಟಾಗಬೇಡಿ. ಉದ್ಯೋಗಸ್ಥರಿಗೆ- ವ್ಯಾಪಾರಸ್ಥರಿಗೆ ಶುಭ ದಿನ.
ಮೀನ
ಬಹಳ ಕಾಲದಿಂದ ಬಾಕಿ ಉಳಿದುಹೋಗಿದ್ದ ಕೆಲಸಗಳು ಪೂರ್ಣಗೊಳ್ಳಲು ವ್ಯಕ್ತಿಯೊಬ್ಬರ ನೆರವು ದೊರೆಯುತ್ತದೆ. ಕಲಾವಿದರಿಗೆ, ಕುಸುರಿ ಕೆಲಸಗಾರರಿಗೆ ಸಮಾಜದಲ್ಲಿ ಮನ್ನಣೆ ದೊರೆಯುತ್ತದೆ. ಆರ್ಥಿಕ ನೆರವಿನ ಅಗತ್ಯ ಇರುವವರಿಗೆ ನೆಂಟರಿAದ ದೊರೆಯುವ ಸಾಧ್ಯತೆ ಇದೆ.