ಮೇಷ
ಎಲ್ಲ ಕೆಲಸಗಳಲ್ಲೂ ಪ್ರಗತಿ ಇದೆ. ಅರ್ಥಾತ್ ಹಿಡಿದ ಕೆಲಸಗಳು ಸರಾಗವಾಗಿ ಮುಗಿಯುತ್ತವೆ. ಮುಖ್ಯವಾದ ವ್ಯಕ್ತಿಗಳನ್ನು ಭೇಟಿಯಾಗುವ ಸಾಧ್ಯತೆ ಇದೆ. ಇನ್ನು ಅದಕ್ಕಾಗಿ ಪ್ರಯಾಣ ಮಾಡಬೇಕಾಗಬಹುದು. ಬಾಳಸಂಗಾತಿ ಜತೆ ಸಂತಸದ ಕ್ಷಣಗಳು. ಒಟ್ಟಾರೆಯಾಗಿ ಸಂತೋಷವಾಗಿ ದಿನ ಕಳೆಯುತ್ತದೆ.
ವೃಷಭ
ಶೀತ-ಜ್ವರದಂಥ ಸಮಸ್ಯೆಗಳನ್ನು ಕೂಡ ಈ ದಿನ ನೀವು ನಿರ್ಲಕ್ಷ್ಯ ಮಾಡುವಂತಿಲ್ಲ. ಒಂದಿಷ್ಟು ಮೈ ಮರೆತರೂ ಬೇರೊಬ್ಬರು ನಿಮ್ಮ ಸ್ಥಾನ ಆಕ್ರಮಿಸಿಕೊಳ್ಳಲು ಕಾಯುತ್ತಿದ್ದಾರೆ. ಯಾವುದೇ ನಿರ್ಧಾರ ಮಾಡುವ ಮುನ್ನ ಅದರ ಫಲಿತಾಂಶ ಏನಾಗಬಹುದು ಎಂಬ ಬಗ್ಗೆ ಚಿಂತಿಸಿ.
ಮಿಥುನ
ಇಷ್ಟು ಕಾಲ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆಗೆ ಪರಿಹಾರವೊಂದು ಗೋಚರಿಸಿ, ಮನಸಿಗೆ ನೆಮ್ಮದಿ-ಧೈರ್ಯ ದೊರೆಯುತ್ತದೆ. ವಿದೇಶದಲ್ಲಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದರೆ ಅವರ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಮುಖ್ಯವಾದ ಕೆಲಸಕ್ಕೆ ಅನುಭವಿಗಳ ಸಹಕಾರ ದೊರೆಯುತ್ತದೆ.
ಕರ್ಕಾಟಕ
ಆಭರಣ ವ್ಯಾಪಾರಿಗಳಿಗೆ ಸವಾಲು ಹಾಗೂ ಸಾಧನೆ ಎರಡೂ ಒಟ್ಟಿಗೇ ಇದೆ. ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ಸ್ತ್ರೀಯರಿಗೆ ಸುಧಾರಣೆ ಕಾಣಿಸಿಕೊಳ್ಳುತ್ತದೆ. ಆಸ್ತಿ ಖರೀದಿಗೆ ಸಂಬಂಧಿಸಿದ ವ್ಯವಹಾರಗಳು ಅಂದುಕೊಂಡಿದ್ದಕ್ಕಿಂತ ವೇಗವಾಗಿ ಆಗುತ್ತವೆ. ದೂರದ ಊರಿಂದ ಒಳ್ಳೆ ಸುದ್ದಿ ಬರುವ ಸಾಧ್ಯತೆ ಇದೆ.
ಸಿಂಹ
ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದ ಕುಟುಂಬಕ್ಕೆ ಸಂಬಂಧಿಸಿದ ಕೆಲಸವೊಂದನ್ನು ಈ ದಿನ ಮಾಡುವಿರಿ. ಈ ಹಿಂದೆ ನೀವು ಪಟ್ಟ ಶ್ರಮಕ್ಕೆ ಉತ್ತಮ ಪ್ರತಿಫಲ ಈ ದಿನ ದೊರೆಯಲಿದೆ. ಕೆಲವು ಕೆಲಸಗಳಿಗೆ ಮಾತ್ರ ಪದೇಪದೇ ಓಡಾಡಿ, ಮಾಡಿಸಿಕೊಳ್ಳಬೇಕಾಗುತ್ತದೆ. ಅದು ಅನಿವಾರ್ಯ.
ಕನ್ಯಾ
ದೀರ್ಘ ಕಾಲದಿಂದ ಬಾಕಿ ಉಳಿದುಹೋಗಿದ್ದ ಜವಾಬ್ದಾರಿ ಪೂರೈಸುತ್ತೀರಿ. ಅದು ಹಣಕಾಸಿನದೇ ಆಗಿರಬಹುದು ಅಥವಾ ಆಸ್ತಿ-ಭೂಮಿಯ ವರ್ಗಾವಣೆ ಇರಬಹುದು. ಅದರಿಂದ ಸಮಾಧಾನ ಸಿಗುತ್ತದೆ. ಉದ್ಯೋಗ ಅವಕಾಶ ಸಿಗಲಿದೆ. ವಿವಿಧ ಸಮಾರಂಭಗಳಿಗೆ ಆಹ್ವಾನ ಬರುತ್ತದೆ.
ತುಲಾ
ಈ ದಿನ ಬಹಳ ವೇಗವಾಗಿ ಚಾಲನೆ ಮಾಡಬೇಡಿ. ಅನಿವಾರ್ಯ ಅಲ್ಲದಿದ್ದರೆ ನೀವು ವಾಹನ ಚಾಲನೆ ಮಾಡದಿರುವುದು ಒಳಿತು. ಕಲಾವಿದರಿಗೆ-ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಗೌರವ, ಮನ್ನಣೆ ಸಿಗಲಿದೆ. ಉದ್ಯಮಿಗಳು- ವ್ಯಾಪಾರಿಗಳಿಗೆ ಪ್ರಗತಿ ಇದೆ.
ವೃಶ್ಚಿಕ
ವಿಲಾಸಿ ವಸ್ತುಗಳಿಗೆ ಅಥವಾ ಗೃಹಾಲಂಕಾರ ವಸ್ತುಗಳಿಗೆ ಹೆಚ್ಚು ಹಣವನ್ನು ವ್ಯಯ ಮಾಡಲಿದ್ದೀರಿ. ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಆದರೆ ಸಾಲ ಕೊಡುವ- ಪಡೆಯುವುದಿದ್ದರೆ ಕಾಗದ ಪತ್ರಗಳನ್ನು ಸರಿಯಾಗಿ ನೋಡಿಕೊಂಡು, ವ್ಯವಹರಿಸಿ
ಧನು
ಅನಾರೋಗ್ಯ ಸಮಸ್ಯೆಗಳು ಉಲ್ಬಣ ಆಗುವ ಸಾಧ್ಯತೆ ಇದೆ. ಈ ದಿನ ಮಾಡಲೇಬೇಕಿದ್ದ ಕೆಲಸಗಳು ಹಾಗೂ ಭಾಗವಹಿಸಬೇಕಿದ್ದ ಕಾರ್ಯಕ್ರಮಗಳನ್ನು ಮುಂದೂಡಬೇಕಾದ ಅನಿವಾರ್ಯ ಸೃಷ್ಟಿ ಆಗುತ್ತದೆ. ದೇವತಾ ಆರಾಧನೆಯಿಂದ ನೆಮ್ಮದಿ ದೊರೆಯುತ್ತದೆ.
ಮಕರ
ನಿಮ್ಮ ಶ್ರಮವನ್ನು ಉದ್ಯೋಗ ಸ್ಥಳದಲ್ಲಿ ಈ ದಿನ ಗುರುತಿಸುತ್ತಾರೆ. ಬೆಲೆ ಬಾಳುವ ವಸ್ತುಗಳನ್ನು ಎಲ್ಲೆಂದರಲ್ಲಿಇಟ್ಟು, ಅದು ಸಿಗಲಿಲ್ಲ ಎಂದು ಮತ್ತೊಬ್ಬರ ಮೇಲೆ ಸಿಟ್ಟು ಮಾಡಬೇಡಿ. ಮೌನವಾಗಿರುವವರಿಗೆ ಜಗಳವಿಲ್ಲ ಎಂಬುದು ಇಂದಿನ ನಿಮ್ಮ ಪಾಲಿನ ಮಂತ್ರವಾಗಿರಲಿ.
ಕುಂಭ
ಗುರುಗಳು- ಗುರು ಸಮಾನರನ್ನು ಈ ದಿನ ದರ್ಶನ ಮಾಡುವ ಸಾಧ್ಯತೆಗಳಿವೆ. ಬಾಳ ಸಂಗಾತಿಯೊಂದಿಗೆ ದೂರ ಪ್ರಯಾಣ ಮಾಡಲಿದ್ದೀರಿ. ಅಂದುಕೊಂಡ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಬರಬೇಕಿದ್ದ ಬಾಕಿ ಹಿಂತಿರುಗುತ್ತದೆ. ಇನ್ನು ದಿನದ ಕೊನೆಗೆ ನೆಮ್ಮದಿ ಸಿಗುತ್ತದೆ.
ಮೀನ
ಮಾಧ್ಯಮ ಕ್ಷೇತ್ರಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಬಹಳ ಸವಾಲುಗಳಿವೆ. ಈಶ್ವರನ ಆರಾಧನೆ ಮಾಡುವುದರಿಂದ ಹಣಕಾಸು ಪರಿಸ್ಥಿತಿ ಸುಧಾರಿಸುತ್ತದೆ. ಈ ಹಿಂದಿನ ಮಾನಸಿಕ ಕ್ಲೇಶಗಳು ಈ ದಿನ ನಿವಾರಣೆ ಆಗುತ್ತವೆ.