ಮೈಸೂರು-ಬೆಂಗಳೂರು ದಶಪಥ ರಸ್ತೆ ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಬಳಿ ವಾಹನ ದಟ್ಟಣೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಇಂದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಯಿತು.
ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಅಪ ರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್.ಜಾನ್ಹವಿ ಅವರ ನಿರ್ದೇಶನದಂತೆ ಸಂಚಾರ ವಿಭಾಗದ ಎಸಿಪಿ ಪರಶುರಾಮಪ್ಪ ಅವರು, ಎನ್.ಆರ್.ಸಂಚಾರ ಪೊಲೀಸರು ಮೈಸೂರು ಮಹಾ ನಗರಪಾಲಿಕೆ ನೆರವಿನಿಂದ ಮೈಸೂರು-ಬೆಂಗಳೂರು ಹೆದ್ದಾರಿಯ ರಿಂಗ್ ರೋಡ್ ಜಂಕ್ಷನ್ ಅನ್ನು ಸುಧಾರಿಸಿದ್ದಾರೆ.
ಈ ಸಿಗ್ನಲ್ ಲೈಟ್ ಸರ್ಕಲ್ ಮಧ್ಯದಲ್ಲೇ ಇದ್ದ ಕಂಬ ಗಳನ್ನು ಸುಮಾರು 15 ಅಡಿ ದೂರಕ್ಕೆ ಸ್ಥಳಾಂತರಿಸಿರುವು ದಲ್ಲದೇ, ವೃತ್ತದಲ್ಲಿನ ನಾಲ್ಕೂ ರಸ್ತೆಗಳಲ್ಲಿನ ರಸ್ತೆ ವಿಭಜಕಗಳ ಅಗಲ ಕಡಿತಗೊಳಿಸಲಾಗಿದ್ದು, ಇದೀಗ ಸರ್ಕಲ್ ಅಗಲ ವಾಗಿರುವುದರಿಂದ ನಾಲ್ಕೂ ಕಡೆಯಿಂದ ಏಕಕಾಲದಲ್ಲಿ ಐದೈದು ವಾಹನಗಳು ಚಲಿಸಬಹುದಾಗಿದೆ.
ಬೆಂಗಳೂರು ಕಡೆಯಿಂದ, ರಾಯಲ್ ಇನ್ ಜಂಕ್ಷನ್ನಿAದ ಮೈಸೂರು ಕಡೆಯಿಂದ ದೇವೇಗೌಡ ಸರ್ಕಲ್ ಕಡೆಯಿಂದ ಬರುವ ವಾಹನಗಳು ಗ್ರೀನ್ ಸಿಗ್ನಲ್ ಬಂದಾಗ ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಬಳಿ ಯಾವುದೇ ಅಡೆ-ತಡೆಯಿಲ್ಲದೇ ಈಗ ಸರಾಗವಾಗಿ ಮುಂದೆ ಸಾಗಬಹುದಾಗಿದೆ.
ವೃತ್ತದಲ್ಲಿ ರಸ್ತೆ ವಿಭಜಕಗಳು ಅಗಲವಾಗಿದ್ದು, ಸಿಗ್ನಲ್ ಲೈಟ್ ಕಂಬಗಳು ಸರ್ಕಲ್ ಮಧ್ಯೆ ಇದ್ದುದರಿಂದ ಕೇವಲ ಎರಡೆರಡೇ ವಾಹನಗಳು ಸಾಗಬೇಕಿತ್ತು. ಅದರಿಂದ ಗ್ರೀನ್ ಸಿಗ್ನಲ್ ಬಂದಾಗ ಮುಂದೆ ಇದ್ದ ಕೆಲವೇ ವಾಹನಗಳು ಮುಂದೆ ಹೋಗಲು ಸಾಧ್ಯವಾಗುತ್ತಿತ್ತು.
ಅದರಲ್ಲೂ ಶನಿವಾರ, ಭಾನುವಾರ, ಸರ್ಕಾರಿ ರಜಾ ದಿನ ಗಳು, ಹಬ್ಬ-ಹರಿದಿನ, ನಿರಂತರ ನಾಲ್ಕೆöÊದು ದಿನ ನಿರಂತರ ರಜೆ ಬಂದಾಗ ಹಾಗೂ ಪ್ರಮುಖ ಸಮಯದಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ಹಾಗೂ ಉಳಿದ ಎರಡೂ ಕಡೆ ರಿಂಗ್ ರಸ್ತೆಯಲ್ಲಿ ಸುಮಾರು 400 ಮೀರ್ಗಳವರೆಗೂ ವಾಹನಗಳು ಸಾಲಾಗಿ ನಿಂತು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುತ್ತಿತ್ತು.
ಎಕ್ಸ್ಪ್ರೆಸ್ ವೇ ನಿರ್ಮಾಣವಾದ ನಂತರವAತೂ ಈ ಮಾರ್ಗ ದಲ್ಲಿ ಅತ್ಯಧಿಕ ವಾಹನಗಳು ಸಂಚರಿಸಲಾರAಭವಾದ ನಂತರ ಮಣಿಪಾಲ್ ಆಸ್ಪತ್ರೆ ಜಂಕ್ಷನ್ನಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ ಯಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿ ದ್ದರಲ್ಲದೆ, ಸಂಚಾರ ಪೊಲೀಸರೂ ಹೆಣಗಾಡಬೇಕಾಗಿತ್ತು.
ಬೆಂಗಳೂರಿನಿAದ ಶೀಘ್ರ ಮೈಸೂರು ತಲುಪಿದರೂ, ಕಿರಿ ದಾಗಿದ್ದ ಮಣಿಪಾಲ್ ಆಸ್ಪತ್ರೆ ಸಿಗ್ನಲ್ ಲೈಟ್ ಜಂಕ್ಷನ್ ದಾಟಲು ಕನಿಷ್ಠ 20 ನಿಮಿಷ ಬೇಕಾಗಿತ್ತಲ್ಲದೆ, ರೆಡ್ ಸಿಗ್ನಲ್ ಬರುತ್ತದೆ ಎಂದು ನಾ ಮುಂದು-ತಾ ಮುಂದು ಎಂದು ಮುಂದೆ ಸಾಗುವ ಭರದಲ್ಲಿ ವಾಹನಗಳು ಪರಸ್ಪರ ಉಜ್ಜಿಕೊಂಡು, ಜಗಳ ಕಾಯುವ ವಾಹನ ಚಾಲಕರಿಂದ ಸರ್ಕಲ್ನಲ್ಲಿ ಮತ್ತಷ್ಟು ಟ್ರಾಫಿಕ್ ಜಾಮ್ ಕಿರಿಕಿರಿ ಉಂಟಾಗುತ್ತಿತ್ತು. ದಸರಾ ಮಹೋತ್ಸವ ಸಂದರ್ಭದಲ್ಲAತೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬಂದು ಹೋಗುತ್ತಿದ್ದರಿಂದ ಈ ಜಂಕ್ಷನ್ ದಾಟುವುದೇ ಒಂದು ತ್ರಾಸವಾಗುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇದೀಗ ಜಂಕ್ಷನ್ ಅಗಲವಾಗಿದ್ದು, ವಿಭಜಕಗಳ ಅಗಲ ಕಡಿಮೆ ಮಾಡಿ ಸಿಗ್ನಲ್ ಲೈಟ್ ಕಂಬಗಳನ್ನು ಬದಿಗೆ ಸರಿಸಿ ರುವ ಕಾರಣ ವಾಹನಗಳು ಯಾವುದೇ ತಡೆಯಿಲ್ಲದೇ ಸರಾಗ ವಾಗಿ ಹಾಗೂ ವೇಗವಾಗಿ ಮುಂದೆ ಸಾಗುವಂತಾಗಿದ್ದು, ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿದಂತಾಗಿದೆ.