ಹಲಗೂರು:ಸಮೀಪದ ಲಿಂಗಾಪಟ್ಟಣ ಗ್ರಾಮದ ಹೊರ ವಲಯದಲ್ಲಿ ಅಕ್ರಮವಾಗಿ ಹಾಕಲಾಗಿದ್ದ ವಿದ್ಯುತ್ ತಂತಿ ತುಳಿದು ಕಾಡನೆ ಮೃತಪಟ್ಟಿರುವ ಘಟನೆ ಜರುಗಿದೆ.
ಹಲಗೂರು ಹೋಬಳಿಯ ಲಿಂಗಪಟ್ಟಣ ಗ್ರಾಮದ ಮರಿಗೌಡ ಅಲಿಯಾಸ್ ಕೆಂಚೇಗೌಡ ಬಿನ್ ಬೋರೆಗೌಡರಿಗೆ ಸೇರಿದ ಜಮೀನಿನಲ್ಲಿ ಸೋಮವಾರ ತಡರಾತ್ರಿ ಆಹಾರ ಅರಸಿ ಬಂದಿದ್ದ ಕಾಡಾನೆಗಳು ಬೆಳೆಯ ರಕ್ಷಣೆಗೆ ಅಕ್ರಮವಾಗಿ ಹಾಕಲಾಗಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಅದರಲ್ಲಿ ಇಪ್ಪತ್ತು ವರ್ಷದ ಗಂಡು ಕಾಡಾನೆ ಮೃತಪಟ್ಟಿದೆ.
ಇದೇ ವೇಳೆ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಮಹಾದೇವ ಸ್ವಾಮಿರವರು ಮಾತನಾಡಿ ಸೋಮವಾರ ತಡರಾತ್ರಿ ಭೀಮನ ಕಿಂಡಿ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬಂದಿದ್ದ ಕಾಡಾನೆಗಳು ಬೆಳೆಯ ರಕ್ಷಣೆಗೆ ಅಕ್ರಮವಾಗಿ ಹಾಕಲಾಗಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಗಂಡಾನೆ ಮೃತ ಪಟ್ಟಿದೆ.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಜಮೀನಿನ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ
ಎಂದು ಮಂಡ್ಯ ಉಪವಿಭಾಗದ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಲಗೂರು ವೃತ್ತ ನಿರೀಕ್ಷಕ ಶ್ರೀಧರ್ ಹಾಗೂ ಆರಕ್ಷಕ ಉಪನಿರೀಕ್ಷಕ ಮಹೇಂದ್ರ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ವಲಯ ಅರಣ್ಯ ಅಧಿಕಾರಿ ಮಹದೇವ,ಉಪವಲಯ ಅರಣ್ಯ ಅಧಿಕಾರಿ ಶಿವರಾಜ್,ಗಸ್ತು ಅರಣ್ಯ ಪಾಲಕ ಉಮೇಶ್ ಎಂ.ಜೆ., ಬಸವಣ್ಣ,ಸಿದ್ದರಾಮು,
ಪಶು ವೈದ್ಯ ಅಧಿಕಾರಿ ನವೀನ ಕುಮಾರ್ ಹಾಗೂ ಸೆಸ್ಕಾಂ ಕಿರಿಯ ಇಂಜಿನಿಯರ್ ಚಂದ್ರಶೇಖರ್ ಇತರರು ಇದ್ದರು.