ಮೈಸೂರು: ವಿದ್ವತ್ನಂತಹ ಕಾರ್ಯಕ್ರಮದಿಂದ ಅನಾವರಣಗೊಂಡ ಪ್ರತಿಭೆ ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂದು ಮೈಸೂರಿನ ಜಿಲ್ಲಾಧಿಕಾರಿಗಳಾದ ಡಾ.ರಾಜೇಂದ್ರ.ಕೆ.ವಿ ಅಭಿಪ್ರಾಯ ಪಟ್ಟರು.
ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಏರ್ಪಡಿಸಿದ್ದ ರಾಜ್ಯ ಮಟ್ಟದ ಅಂತರ ಕಾಲೇಜುಗಳ “ಬಿಝïಟೆಕ್ ಎಕ್ಸಾ÷್ಟç ವೆಗಾನ್ಝಾ – ವಿದ್ವತ್-2023” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಆರೋಗ್ಯಕರ ಬದುಕು ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಕೇವಲ ತರಗತಿಯ ಪಠ್ಯಕ್ಕೆ ಸೀಮಿತವಾಗದೇ ಜಗತ್ತಿನ ಎಲ್ಲೆಡೆಯೂ ಇರುವ ಸ್ಫರ್ಧೆಗೆ ಅನುವಾಗುವಂತೆ ಪ್ರಜ್ಞೆಯುಳ್ಳವರಾಗಿದ್ದು ಸಿದ್ಧರಾಗಬೇಕಾಗುತ್ತದೆ. ಪರೀಕ್ಷೆ ಎನ್ನುವುದು ಕೇವಲ ಒಮ್ಮೆ ಮಾತ್ರ ಬರುವುದಲ್ಲ ಪ್ರತಿ ದಿನವೂ ಪರೀಕ್ಷೆಯೇ ಅದನ್ನು ಯಾರು ಜಾಣ್ಮೆಯಿಂದ ಎದುರಿಸುತ್ತಾರೋ ಅಂತಹವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದ ಅವರು ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಯಶಸ್ಸನ್ನು ಗಳಿಸಬೇಕಾದರೆ ಅಂದAದಿನ ಪಠ್ಯಗಳನ್ನು ಅಂದAದೇ ಅಧ್ಯಯನ ಮಾಡಿ ಪರೀಕ್ಷೆಗೆ ತಯಾರಾಗಬೇಕು. ವಿದ್ಯಾರ್ಥಿ ದಿಸೆಯಲ್ಲಿಯೇ ಉಳಿತಾಯ ಮನೋಬುದ್ಧಿಯನ್ನು ಬೆಳೆಸಿಕೊಳ್ಳುವುದರ ಜೊತೆಗೆ ಸ್ವಾವಲಂಬಿಗಳಾಗಿ, ಹೂಡಿಕೆ ಮಾಡಿ ಮಾರುಕಟ್ಟೆಯಲ್ಲಿ ತಮ್ಮದೇ ಸ್ವಂತ ಆದಾಯ ಮೂಲವನ್ನು ಕಂಡುಕೊಳ್ಳಬೇಕು. ನಮ್ಮ ನಡುವೆ ಇರುವಂತಹ ಸಣ್ಣ ಸಣ್ಣ ವಿಷಯಗಳನ್ನು ಅನಾವರಣ ಮಾಡಿ ಅನೇಕರು ಕೋಟ್ಯಾಧಿಪತಿಗಳಾಗಿರುವ ಉದ್ಯಮಿಗಳಿದ್ದಾರೆ. ಸಾಮಾಜಿಕ ಬದ್ಧತೆ ಮತ್ತು ನಾಗರೀಕ ಪ್ರÀಜ್ಞೆಯಿರುವ ನಾಗರೀಕರಿಂದ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರಿನ ಟ್ರೂಲಿ ಎಸೆನ್ಶಿಯಲ್ಸ್ನ ಸಂಸ್ಥಾಪಕರಾದ ಕು.ಅಕ್ಷರ ಕುಮಾರ್ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮಲ್ಲಿರುವ ಭರವಸೆ ಮತ್ತು ಕನಸುಗಳನ್ನು ಈಡೇರಿಸಿಕೊಳ್ಳಲು ನಿರಂತರ ಶ್ರಮಪಟ್ಟರೆ ಮಾತ್ರ ಸಾಧ್ಯವೆಂದು ತಿಳಿಸಿದ ಅವರು ಪ್ರಸ್ತುತ ಭಾರತದಲ್ಲಿ 50000 ನವೋದ್ಯಮದ ಸ್ಟಾರ್ಟ್ಅಪ್ಗಳು ಇದ್ದು, ಫ್ಲಿಪ್ಕಾರ್ಟ್, ಓಲಾ, ಬಿಗ್ಬ್ಯಾಸ್ಕೆಟ್ನಂತಹ ಸ್ಟಾರ್ಟ್ಅಪ್ಗಳು ಇಂದು ಯಶಸ್ವಿ ಉದ್ಯಮಗಳಾಗಿ ಗುರುತಿಸಿಕೊಂಡು ಯುವ ಉದ್ಯಮಿಗಳಿಗೆ ಆಶಾದಾಯಕ ಭರವಸೆಯನ್ನು ಹುಟ್ಟುಹಾಕುತ್ತಿವೆ. 2014ರಲ್ಲಿ ತಾವು ಟ್ರೂಲಿ ಎಸೆನ್ಶಿಯಲ್ಸ್ನ ಹುಟ್ಟುಹಾಕಿದ ಸಂದರ್ಭದಲ್ಲಿ ಇದ್ದ ಚೈತನ್ಯ ಹಾಗೂ ಉತ್ಸಾಹ ಇಂದಿಗೂ ಇದೆ ಎಂದು ತಮ್ಮ ಅನುಭವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿದ್ಯಾಭ್ಯಾಸದ ನಂತರ ಅನೇಕ ವಿದ್ಯಾರ್ಥಿಗಳು ಬದುಕಿಗಾಗಿ ಉದ್ಯೋಗದ ಹುಡುಕಾಟ ನಡೆಸಿದರೆ ಕೆಲವರು ಮಾತ್ರ ಉದ್ಯೋಗವನ್ನೇ ಸೃಷ್ಟಿಸÀÄವಂತಹ ನವ ಉದ್ಯಮಗಳನ್ನು ಸ್ಥಾಪಿಸುತ್ತಾರೆ.Á ದಿಸೆಯಲ್ಲಿ ವಿದ್ವತ್ನಂತಹ ಕಾರ್ಯಕ್ರಮಗಳು ದಾರಿದೀಪವಾಗುತ್ತವೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌ||ಕಾರ್ಯದರ್ಶಿ ಪಿ.ವಿಶ್ವನಾಥ್ ತಿಳಿಸಿದರು.
ಮಂಜೆ.ಜೆ. ಪ್ರಾರ್ಥಿಸಿ, ಕೀರ್ತನ ನಿರೂಪಿಸಿ, ತೇಜಸ್ವಿನಿ ಸ್ವಾಗತಿಸಿದ ಕಾರ್ಯಕ್ರಮದ ಒಳನೋಟವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಮರೀಗೌಡ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕೋಶಾಧ್ಯಕ್ಷರಾದ ಶ್ರೀಶೈಲರಾಮಣ್ಣವರ್, ಕಾಲೇಜು ನಿರ್ವಹಣಾ ಮಂಡಳಿ ಅಧ್ಯಕ್ಷರಾದ ಟಿ.ನಾಗರಾಜು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ಪರ್ಧಾರ್ಥಿಗಳು ಹಾಗೂ ವಿದ್ವತ್ ಸಂಚಾಲಕರಾದ ಸಿದ್ಧರಾಜು.ಆರ್, ವತ್ಸಲ.ಬಿ.ಕೆ, ಚೈತ್ರ, ಬೋಧಕರು, ಬೋಧಕೇತರರು ಹಾಜರಿದ್ದು, ಸಹನಾ ವಂದಿಸಿದರು.