ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ೪ನೇ ಭಾರಿ ವಿಧಾನಸಭೆಗೆ ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಯಾದ ಸಿ.ಪುಟ್ಟರಂಗಶೆಟ್ಟಿ ಅವರನ್ನು ವಿಪ್ರ ಸಮುದಾಯದ ಪರವಾಗಿ ಭ್ರಮರಾಂಭ ಬಡಾವಣೆಯ ಮನೆಯೊಂದರಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ನಗರದ ಅಗ್ರಹಾರದ ಬೀದಿ ಪಟ್ಟಾಭಿರಾಮ ಮಂದಿರದ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಕೆ.ಬಾಲಸುಬ್ರಮಂಣ್ಯA ಮಾತನಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಚಾಮರಾಜನಗರದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಅವರ ಗೆಲುವು ಮಗರದ ಅಭಿವೃದ್ದಿಗೆ ಸಹಾಯವಾಗಲಿದೆ. ಅವರು ಧಾರ್ಮೀಕ ಕಾರ್ಯಗಳಿಗೂ ಅವರ ಕೊಡುಗೆ ಅಪಾರವಾಗಿದೆ. ಅವರಿಗೆ ಚಾಮರಾಜೇಶ್ವರ ಸ್ವಾಮಿಯ ಆರ್ಶಿವಾದ ಎಂದಿಗೂ ಇದೇ ಎಂದು ಹೇಳಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಚಾಮರಾಜನಗರದ ಜನತೆ ನನಗೆ ೪ನೇ ಭಾರಿ ಆರ್ಶಿವಾದ ಮಾಡಿದ್ದಾರೆ. ಅವರಿಗೆ ನನ್ನ ನಮನಗಳು ಮುಂದಿನ ಹೆಜ್ಜೆ ನಗರವನ್ನು ಅಭಿವೃದ್ದಿಯ ಕಡೆಗೆ ಕೊಂಡೋಯೊದು ಎಂದು ತಿಳಿಸಿದರು. ವಿಪ್ರ ಸಮುಧಾಯದ ಎಲ್ಲರಿಗೂ ನನ್ನ ಅಭಿನಂದನೆಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೈಗಾರಿಕ ಉದ್ಯಮಿ ಕೆಂಪನಪುರ ಶ್ರೀಧರ್, ಡಾ.ಬಾಲಸುಬ್ರಮಣ್ಯ, ನಾಗೇಂದ್ರ ಪ್ರಸಾದ್( ಬೆಳ್ಳಿ) ಮಾಜಿ ನಗರಸಭಾ ಸದಸ್ಯೆ ಶಾಂತಲ. ಅರ್ಚಕರಾದ ಕಾರ್ತಿಕ್ ಭಾರದ್ವಾಜ್ , ಕಾರ್ರವಿ, ಶೇಖರ್, ಕಾಶಿ, ರಾಘವೇಂದ್ರ, ಲಕ್ಷಿö್ಮನರಸಿಂಹ ಹಾಗೂ ಇನ್ನು ಮುಂತಾದವರು ಹಾಜರಿದ್ದರು.