ಇಂದಿನ ಕಾಲದ ಒತ್ತಡದ ಜೀವನ, ದುಶ್ಚಟಗಳು ಆಹಾರ ಶೈಲಿ ಹಾಗೂ ಇನ್ನು ಅನೇಕ ಅಂಶಗಳು ಪುರುಷರ ವೀರ್ಯಾಣು ಸಂಖ್ಯೆಯ ಮೇಲೆ ವಿಪರೀತ ಪರಿಣಾಮ ಬೀರುತ್ತವೆ. ಒಬ್ಬ ಪುರುಷನಲ್ಲಿ ಧಾತುವಿನಲ್ಲಿ ಸಂತಾನಶಕ್ತಿ ಗಟ್ಟಿಯಾಗಿರಬೇಕು ಅಂದ್ರೆ ವೀರ್ಯಾಣು ಸಂಖ್ಯೆಯೂ ಪ್ರಮುಖ ಪಾತ್ರವಹಿಸುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಪ್ರತಿ ಸ್ಖಲನದಲ್ಲಿಯೂ 1.5 ಕೋಟಿಯಿಂದ 3.9ಕೋಟಿ ವೀರ್ಯಾಣು ಸಂಖ್ಯೆ(sperm count) ಹೊಂದಿರಬೇಕು ಎಂದು ಹೇಳಲಾಗಿದೆ.
ಸಂತಾನಹೀನ ಶಕ್ತಿಯಿಂದ ಬಳಲುವವರು ಈ ವೀರ್ಯಾಣು ಸಂಖ್ಯೆಯ ಕೊರೆತೆಯಿಂದಲೇ ಒದ್ದಾಡುತ್ತಿರುತ್ತಾರೆ. ಸ್ಪರ್ಮ್ ಕೌಂಟ್ ಕಡಿಮೆ ಇದ್ದವರೆಲ್ಲಾ ವೈದ್ಯರ ಹತ್ತಿರವೇ ಹೋಗಿ ಸರಿ ಮಾಡಿಕೊಳ್ಳಬೇಕು ಅನ್ನೋದಂತೂ ನಿಜ. ವೈದ್ಯರೊಂದಿಗೆ ಸಮಾಲೋಚಿಸಿಬೇಕು ಅನ್ನೋದು ನಿಜ ಆದ್ರೆ ಮನೆಯಲ್ಲಿಯೇ ನಿಮ್ಮ ವೀರ್ಯಾಣು ಸಂಖ್ಯೆ ಹೆಚ್ಚು ಮಾಡುವ ಆಹಾರಗಳಿವೆ ಅವುಗಳ ಕಡೆ ಗಮನಕೊಡುವುದರಿಂದ ನೈಸರ್ಗಿಕವಾಗಿ ನೀವು ನಿಮ್ಮ ದೇಹದಲ್ಲಿನ ವೀರ್ಯಾಣು ಸಂಖ್ಯೆಗಳನ್ನು ಹೆಚ್ಚಿಸಿಕೊಳ್ಳಬಹುದು. ಅವು ಯಾವವು ಅಂತ ನಾವು ನಿಮಗೆ ಇಲ್ಲಿ ತಿಳಿಸ್ತೀವಿ
ಡಾರ್ಕ್ ಚಾಕಲೇಟ್: ಡಾರ್ಕ್ ಚಾಕಲೇಟ್ನಲ್ಲಿ ಎಲ್ ಆರ್ಗಿನೈನ್ ಹಾಗೂ ಅಮಿನೋ ಆಸಿಡ್ನ ಅಂಶವಿರುತ್ತದೆ. ಇದು ನಿಮ್ಮ ವೀರ್ಯದ ಗುಣವನ್ನ ಹಾಗೂ ವೀರ್ಯಾಣು ಸಂಖ್ಯೆಯನ್ನ ಹೆಚ್ಚಿಸುತ್ತದೆ.
ವಾಲ್ನಟ್: ಡ್ರೈ ಫ್ರೂಟ್ಸ್ಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಅಂದ್ರೆ ಅದು ವಾಲ್ನಟ್. ವಾಲ್ನಟ್ನಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ಸ್ಗಳ ಅಂಶವಿರುತ್ತದೆ ಇದು ನಿಮ್ಮ ವೀರ್ಯಾಣು ಸಂಖ್ಯೆಯಲ್ಲಿ ಸುಧಾರಣೆ ತರುತ್ತದೆ.
ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ 6 ಹಾಗೂ ಸೆಲೆನಿಯಂ ಅಂಶ ಹೆಚ್ಚಿರುವುದರಿಂದ ಸಂತಾನಶಕ್ತಿ ಹೆಚ್ಚಿಸುವ ವೀರ್ಯಾಣು ಸಂಖ್ಯೆಯಲ್ಲಿ ಹೆಚ್ಚಳ ಮಾಡುವುದರಲ್ಲಿ ಬೆಳ್ಳುಳ್ಳಿ ಸಹಾಯಕ. ಹೀಗಾಗಿ ಅಡುಗೆಯಲ್ಲಿ ಹೆಚ್ಚು ಹೆಚ್ಚು ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದು
ಕ್ಯಾರೆಟ್: ಕ್ಯಾರೆಟ್ನಲ್ಲಿ ಅತಿಹೆಚ್ಚು ಬೆಟಾ ಕ್ಯಾರೊಟೈನ್ ಇರೋದ್ರಿಂದ ವೀರ್ಯಾಣು ಸಂಖ್ಯೆ ವೃದ್ಧಿಗೆ ಸಹಾಯ ಮಾಡುತ್ತದೆ. ಅದು ಮಾತ್ರವಲ್ಲ, ಕ್ಯಾರಟ್ ಸೇವನೆಯಿಂದ ಅನೇಕ ಆರೋಗ್ಯಕರ ಲಾಭಗಳು ಇವೆ.
ಮೊಟ್ಟೆ: ಸರ್ವ ನಿಶ್ಯಕ್ತಿ ಸಮಸ್ಯೆಗೂ ಮೊಟ್ಟೆ ಹೆಚ್ಚು ಕಡಿಮೆ ಪರಿಹಾರ ಸೂಚಿಸುತ್ತದೆ. ವೀರ್ಯಾಣು ಸಂಖ್ಯೆ ಕೊರತೆಯನ್ನು ನೀಗಿಸಲು ಸಹ ಮೊಟ್ಟೆ ಸಹಾಯಕಾರಿ ಪ್ರೋಟಿನ್ ಜೊತೆ ವಿಟಮಿನ್ ಇ ಕೂಡ ಮೊಟ್ಟೆಯಲ್ಲಿ ಇರುವುದರಿಂದ ಇದು ನಿಮ್ಮ ಸ್ಪರ್ಮ್ ಕೌಂಟ್ ಜಾಸ್ತಿ ಮಾಡಲು ಸಹಾಯಕ.
ದಾಳಿಂಬೆ: ದಾಳಿಂಬೆ ಹಣ್ಣು ಹೆಚ್ಚು ಹೆಚ್ಚು ತಿನ್ನುವುದರಿಂದ ಸ್ಪರ್ಮ್ ಕೌಂಟ್ನಲ್ಲಿ ಭಾರೀ ಹೆಚ್ಚಳವನ್ನು ನಾವು ಕಾಣಬಹುದು. ದಾಳಿಂಬೆಯಲ್ಲಿ ಅತಿ ಹೆಚ್ಚು ಉತ್ಕರ್ಷಣ ನಿರೋಧಕ ಶಕ್ತಿ ಇರೋದ್ರಿಂದ ಇದು ಸಹಾಯವಾಗಲಿದೆ.
ದೇಹಕ್ಕೆ ತುಂಬಾ ಅಗತ್ಯವಾಗಿ ಬೇಕಾಗಿರುವುದು ವಿಟಮಿನ್ಸ್ ಮತ್ತು ಮಿನರಲ್ಸ್, ಆರೋಗ್ಯಕರ ದೇಹವನ್ನು ನಮ್ಮದಾಗಿಸಿಕೊಳ್ಳಲು ಈ ಅಂಶ ಹೊಂದಿರುವ ಆಹಾರವನ್ನು ತಿನ್ನಲೇಬೇಕು. ಸ್ಪರ್ಮ್ ಕೌಂಟ್ ಗುಣಮಟ್ಟವನ್ನು ಸುಧಾರಿಸಲು ಕೂಡ ಕೆಲವೊಂದು ವಿಟಮಿನ್ಸ್ ಮಿನರಲ್ಸ್ ಬೇಕಾಗುತ್ತವೆ. ಅವು ಯಾವವು ಅಂತ ನೋಡ್ತಾ ಹೋಗೋಣ
ವಿಟಮಿನ್ ಸಿ: ವಿಟಮಿನ್ ಸಿ ಸ್ಪರ್ಮ್ ಕೌಂಟ್ ಹೆಚ್ಚಿಸುವುದರಲ್ಲಿ ಬಹಳ ಸಹಾಯಕಾರಿ. ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಗುಣ ಇದರಲ್ಲಿ ಇರೋದ್ರಿಂದ ಇದು ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸಲು ಅನುಕೂಲ ಆರೇಂಜ್ ಸ್ಟಾಬ್ರಿ, ಕಿವಿಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚು ಸಿಗುತ್ತದೆ
ವಿಟಮಿನ್ E: ವಾಲ್ನಟ್, ಬಾದಾಮಿ, ಖರ್ಜೂರ, ತರಕಾರಿಗಳಲ್ಲಿ ವಿಟಿಮಿನ್ ಇ ಅಂಶ ಹೆಚ್ಚಿರುತ್ತದೆ,.ಇವುಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣದೊಂದಿಗೆ ನಿಮ್ಮ ವಿರ್ಯಾಣು ಸಂಖ್ಯೆ ಹೆಚ್ಚಿಸುವಲ್ಲಿಯೂ ಕೂಡ ಗಣನೀಯ ಪಾತ್ರವಹಿಸುತ್ತವೆ.
ವಿಟಮಿನ್ ಡಿ: ಮೀನುಗಳು, ಹಾಲು ಚೀಸ್ನಂತಹ ಆಹಾರದಲ್ಲಿ ವಿಟಿಮಿನ್ ಡಿ ಅಂಶ ಇರುತ್ತದೆ.ಇನ್ನು ಮಿನರಲ್ಸ್ ವಿಚಾರದಲ್ಲಿ ನೋಡುವುದಾದ್ರೆ, ಜಿಂಕ್ ಸೆಲೆನಿಯಂ ಮ್ಯಾಗ್ನಿಷಿಯಂ ಒಮೆಗಾ 3 ಫ್ಯಾಟಿ ಆ್ಯಸಿಡ್ ತರದ ಮಿನರಲ್ಸ್ಗಳಲ್ಲಿ ಸ್ಪರ್ಮ್ ಕೌಂಟ್ ಹೆಚ್ಚು ಮಾಡುವ ಶಕ್ತಿಯಿದೆ.