ಬೆಂಗಳೂರು: ಮಹಿಳೆಯರ ಬಹುನಿರೀಕ್ಷೆಯ ಕಾಂಗ್ರೆಸ್ ಸರ್ಕಾರದ ಯೋಜನೆಗಳಲ್ಲಿ ಒಂದಾದ ‘ಶಕ್ತಿ ಯೋಜನೆ’ಗೆ ಇಂದು ಚಾಲನೆ ದೊರೆತಿದೆ. ಈ ವೇಳೆ ಸಿಎಂ ಸಿದ್ದರಾಮಯ್ಯನವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.
ಕರ್ನಾಟಕ ಮಾತ್ರವಲ್ಲದೇ ನೆರೆಯ ರಾಜ್ಯಗಳಲ್ಲಿ ಷರತ್ತು ಅನ್ವಯ ಉಚಿತ ಬಸ್ಗಳಲ್ಲಿ ಪ್ರಯಾಣಿಸಬಹುದು ಎಂದು ತಿಳಿಸಿದ್ದಾರೆ.
ನಿಗದಿಯಂತೆ ಇಂದು ಜೂನ್ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮಹಿಳೆಯರ ಹಿತ ದೃಷ್ಟಿಯಿಂದ ಹೊರ ರಾಜ್ಯಗಳಲ್ಲಿ ಸೀಮಿತ ಅವಧಿಗೆ ಉಚಿತ ಪ್ರಯಾಣ ಅವಕಾಶ ನೀಡಿ ಘೋಷಿಸಿದ್ದಾರೆ. ಆದರೆ ಕೆಲವು ಷರತ್ತು ಅನ್ವಯ ಮಹಿಳೆಯರು ಸಂಚರಿಸಬಹುದು ಎಂದರು.
ಕರ್ನಾಟಕದಾದ್ಯಂತ ಉಚಿತವಾಗಿ ಸಂಚರಿಸಲಿರುವ ಮಹಿಳೆಯರು ನೆರೆಯ ರಾಜ್ಯಗಳಲ್ಲಿ 20 ಕೀ.ಮಿ. ವರೆಗೆ ಸಂಚರಿಸಬಹುದು. ಉದಾಹರಣೆಗೆ ಕರ್ನಾಟಕದ ಬಳ್ಳಾರಿಯಿಂದ ಕೆಎಆರ್ಟಿಸಿ ಬಸ್ ಏರಿದರೆ ಅಲ್ಲಿಂದ ಆಂಧ್ರಕ್ಕೆ ತೆರಳುವವರು ರಾಜ್ಯದ ಗಡಿ ದಾಟಿದ ಬಳಿಕ ಆ ರಾಜ್ಯದಲ್ಲಿ 20 ಕೀ.ಮೀ.ದೂರದವರೆಗೆ ಉಚಿತವಾಗಿ ಪ್ರಯಾಣಿಸಬಹುದು. ನಂತರ ಅಲ್ಲಿಂದ ಬೇರೆ ಬಸ್ ಹಿಡಿದು ಹೋಗಬಹುದು.
ಆದರೆ ಬೆಂಗಳೂರಿನಿಂದ ಹೊಸೂರಿಗೆ ನಿತ್ಯ ತೆರಳುವ ಮಹಿಳಾ ಉದ್ಯೋಗಿಗಳಿಗೆ ಈ ಅವಕಾಶದ ಪ್ರಯೋಜನ ಸಿಗುವುದಿಲ್ಲ ಎಂಬ ಷರತ್ತನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ವಿಧಿಸಿದೆ. ಏಕೆಂದರೆ ಹೊಸೂರು ಈ 20 ಕೀ.ಮೀ. ಮೀತಿ ಮೀರಿ ಇದೆ. ನಗರದಿಂದ ಅದು ಸುಮಾರು 40 ಕಿಲೋ ಮೀಟರ್ ದೂರ ಇದೆ. ಹೀಗಾಗಿ ಅಲ್ಲಿಗೆ ಉಚಿತ ಪ್ರಯಾಣದ ಅವಕಾಶ ಮಹಿಳೆಯರಿಗೆ ಸಿಗುವುದಿಲ್ಲ ಎಂದರು ವಿವರಿಸಿದರು.
ನೆರೆ ರಾಜ್ಯದ ಬಸ್ಗಳಲ್ಲಿ ಉಚಿತ ಘೋಷಣೆ
ಅನ್ವಯವಾಗದು ಮುಖ್ಯವಾಗಿ ನಮ್ಮ ರಾಜ್ಯದಿಂದ ನೆರೆ ರಾಜ್ಯಕ್ಕೆ ತೆರಳುವ ಮಹಿಳೆಯರು ಇದೇ ಬಸ್ನಲ್ಲಿ ಆ ರಾಜ್ಯದಲ್ಲಿ 20 ಕಿಲೋ ಮೀಟರ್ ದೂರದವರೆಗೆ ಸಂಚರಿಸಬಹುದು. ನೆರೆ ರಾಜ್ಯದ ಬಸ್ಗಳಲ್ಲಿ ಉಚಿತ ಸಂಚಾರಕ್ಕೆ ನಮ್ಮ ನಿಯಮ ಅನ್ವಯಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕರ್ನಾಟಕದ ಒಳಗೇ ಎಲ್ಲಿಬೇಕಾದರೂ ಎಸಿ ಬಸ್ಗಳನ್ನು ಹೊರತುಪಡಿಸಿ ಸರ್ಕಾರ ಸೂಚಿಸಿರುವ ಬಸ್ಗಳಲ್ಲಿ ಮಹಿಳೆಯರು ಇಂದಿನಿಂದ ಉಚಿತವಾಗಿ ಓಡಾಡಬಹುದು. ಇದಕ್ಕೆ ಅಕವಾಶ ಕಲ್ಪಿಸಿರುವ ಮತ್ತು ಚುನಾವಣೆ ಪೂರ್ವದಲ್ಲಿ ಘೋಷಿಸಿದ ಶಕ್ತಿ ಯೋಜನೆಗೆ ಬೆಂಗಳೂರಿನಲ್ಲಿ ಸಿದ್ದರಾಮಯ್ಯನವರು ಚಾಲನೆ ನೀಡಿದರು. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇನ್ನಿತರ ಸರ್ಕಾರಿ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.