ಇನ್ನೇನು ಅಂತ್ಯಕ್ರಿಯೆ ನೆರವೇರಿಸಬೇಕು ಎನ್ನುವ ಸಮಯದಲ್ಲಿ ಶವಪೆಟ್ಟಿಗೆಯೊಳಗೆ ಎದ್ದು ಕುಳಿತಿದ್ದ ವೃದ್ಧೆ ವಾರದ ಬಳಿಕ ಇದೀಗ ಕೊನೆಯುಸಿರೆಳೆದಿದ್ದಾರೆ.
ಇನ್ನೇನು ಅಂತ್ಯಕ್ರಿಯೆ ನೆರವೇರಿಸಬೇಕು ಎನ್ನುವ ಸಮಯದಲ್ಲಿ ಶವಪೆಟ್ಟಿಗೆಯೊಳಗೆ ಎದ್ದು ಕುಳಿತಿದ್ದ ವೃದ್ಧೆ ವಾರದ ಬಳಿಕ ಇದೀಗ ಕೊನೆಯುಸಿರೆಳೆದಿದ್ದಾರೆ. 76 ವರ್ಷದ ಬೆಲ್ಲಾ ಮೊಂಟೊಯಾ ಅವರು ಮೃತಪಟ್ಟಿದ್ದಾರೆಂದು ಘೋಷಿಸಲಾಗಿತ್ತು, ಅಂತ್ಯಕ್ರಿಯೆಯ ಸಮಯದಲ್ಲಿ ಶವಪೆಟ್ಟಿಗೆಯನ್ನು ಬಡಿದು ಕುಟುಂಬ ಸದಸ್ಯರನ್ನು ಅಚ್ಚರಿಗೊಳಿಸಿದರು.
ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಒಂದು ವಾರಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು ಈಗ ನಿಧನರಾಗಿದ್ದಾರೆ.
ತೀವ್ರ ನಿಗಾ ಘಟಕದಲ್ಲಿರಿಸಿದಾಗಲೇ ಬೆಲ್ಲಾ ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ ಎಂದು ಈಕ್ವೆಡಾರ್ನ ಆರೋಗ್ಯ ಸಚಿವಾಲಯ ತಿಳಿಸಿದೆ.
ಬೆಲ್ಲಾ ಅವರು ಕ್ಯಾಟಲೆಪ್ಸಿ ಎಂಬ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಜೂನ್ 9 ರಂದು ಅವರು ಮೃತಪಟ್ಟಿದ್ದಾರೆ ಎಂದು ಭಾವಿಸಿ ಶವಪೆಟ್ಟಿಗೆಯಲ್ಲಿರಿಸಲಾಗಿತ್ತು. ಇನ್ನೇನು ಅಂತ್ಯಕ್ರಿಯೆ ಮಾಡಬೇಕು ಎನ್ನುವಷ್ಟರಲ್ಲಿ ಶವಪೆಟ್ಟಿಗೆಯನ್ನು ಬಡಿದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.