ಬಳ್ಳಾರಿ: ಹೃದಯಾಘಾತದಿಂದ ನಿಧನರಾದ ಸಾರಿಗೆ ಸಂಸ್ಥೆಯ ಚಾಲಕನ ಶವವನ್ನು ತರಲು ಹೋಗಿದ್ದ ಮತ್ತೊಬ್ಬ ಬಸ್ ಚಾಲಕ ಅಪಘಾತದಿಂದ ತಾನು ಶವವಾದ ಘಟನೆ ತಾಲೂಕಿನ ಎಂ.ಗೋನಾಲಕ್ ಗ್ರಾಮದಲ್ಲು ನಡೆದಿದೆ.
ಬಳ್ಳಾರಿಯ ಸಾರಿಗೆ ಸಂಸ್ಥೆಯ ಬಸ್ ಚಾಲಕ ದಾವಲ್ ಸಾಬ್ (45) ಚೆನ್ನೈಗೆ ಬಸ್ ತೆಗೆದುಕೊಂಡು ಹೋದಾಗ ಮೊನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದ.
ಆತನ ಶವವನ್ನು ತರಲು ಗೋನಾಳ್ ಗ್ರಾಮದ ಬಸ್ ಚಾಲಕ ಜಗನ್ನಾಥ (35) ಇನ್ನಿತರ ಸಿಬ್ಬಂದಿ ಉಮಾಪತಿ, ಸದಾನಂದ, ನಾಗೇಂದ್ರ, ಚಂದ್ರ ಶೇಖರ ಅವರೊಂದಿಗೆ ಜೀಪ್ ತೆಗೆದುಕೊಂಡು ಚೆನ್ನೈಗೆ ಹೋಗಿ ದಾವಲ್ ಸಾಬ್ ಅವರ ಶವ ತೆಗೆದುಕೊಂಡು ನಿನ್ನೆ ಬರುವಾಗ ತುಮಕೂರು ಬಳಿ ಜೀಪ್ ಅಪಘಾತಗೊಂಡು ಜಗನ್ನಾಥ ಸಾವನ್ನಪ್ಪಿದ್ದಾನೆ. ಇಬ್ಬರು ಮಕ್ಕಳು ಪತ್ನಿಯನ್ನು ಅಗಲಿದ ಜಗನ್ನಾಥನ ಪಾರ್ಥೀವ ಶರೀರದ ದರ್ಶನವನ್ನು ಮಾಜಿ ಸಚಿವ ಬಿ.ಶ್ರೀರಾಮುಲು ಇಂದು ಬೆಳಿಗ್ಗೆ ಪಡೆದು. ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.ಸತತ ಕರ್ತವ್ಯದಿಂದ ಜೀಪ್ ಚಾಲನೆ ಮಾಡುವಾಗ ನಿದ್ರೆಗೆ ಜಾರಿದ್ದು ಅಪಘಾತಕ್ಕೆ ಕಾರಣವಾಗಿದೆ. ಈ ರೀತಿ ಆಗಬಾರದಿತ್ತು. ಈ ಬಗ್ಗೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರಿಕೆವಹಿಸಲು ಸೂಚಿಸಲಿದೆಂದು ಶ್ರೀರಾಮುಲು ಹೇಳಿದ್ದಾರೆ.