ಮೈಸೂರು: ಶಾಮನೂರು ಶಿವಶಂಕರಪ್ಪ ಅವರು ವೀರಶೈವ ಸಮಾಜದ ಅಧಿಕಾರಿಗಳಿಗೆ ಆಯಕಟ್ಟಿನ ಸ್ಥಾನಮಾನ ಕೊಟ್ಟಿಲ್ಲ ಎಂಬ ಹೇಳಿಕೆಗೆ ಮೈಸೂರಿನಲ್ಲಿ ಮಾಜಿ ಮಹಾಪೌರರ ಕಾಂಗ್ರೆಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನರಸಿಂಹ ಅಯ್ಯಂಗಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಸವಣ್ಣನವರ ಅನುಯಾಯಿಯಾಗಿದ್ದಾರೆ. ಹಾಗಾಗಿ ಎಲ್ಲೂ ಕೂಡ ಜಾತಿ ರಾಜಕಾರಣ ಮಾಡಿಲ್ಲ. ಸರ್ಕಾರ ಬಂದು ನಾಲ್ಕು ತಿಂಗಳೂ ಕಳೆದಿಲ್ಲ, ಹಿಂದಿನ ಸರ್ಕಾರ ನೇಮಕ ಮಾಡಿರುವ ಅಧಿಕಾರಿಗಳೇ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಈ ರೀತಿ ಆರೋಪ ಮಾಡುವುದು ಸಮಂಜಸವಲ್ಲ ಎಂದ ಮಾಜಿ ಮಹಾಪೌರ ಬಿಕೆ ಪ್ರಕಾಶ್ ಕಿಡಿಕಾರಿದರು. ಸಿದ್ದರಾಮಯ್ಯ ಕೇವಲ ಒಂದು ಜಾತಿಗೆ ಸೀಮಿತವಾದ ನಾಯಕ ಅಲ್ಲ.ಅವರೊಬ್ಬ ಜಾತ್ಯಾತೀತ ನಾಯಕರೆಂದರು.
ನರಸಿಂಹ ಅಯ್ಯಂಗಾರ್,
ಮೋದಾಮಣಿ, ಟಿಬಿ ಚಿಕ್ಕಣ್ಣ, ಭಾಸ್ಕರ್ ಗೌಡ, ನಾಗಭೂಷಣ್ ತಿವಾರಿ, ಬಿಕೆ ಪ್ರಕಾಶ್ ಇನ್ನಿತರರು ಉಪಸ್ಥಿತರಿದ್ದರು.